ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ “ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ 2023-24” ಪ್ರಶಸ್ತಿಯನ್ನು ದಿನಾಂಕ 14/08/2024 ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-24ನೇ ಸಾಲಿನ ವಾರ್ಷಿಕ ಸಭೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2012ರಲ್ಲಿ ಪ್ರಾರಂಭವಾಗಿ ದಶಮಾನೋತ್ಸವಕ್ಕೆ ನಗರದ ಪಡೀಲ್‌ನಲ್ಲಿ ಸ್ವಂತ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆ. ಪ್ರಸ್ತುತ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ 33 ಶಾಖೆಗಳನ್ನು ಹೊಂದಿರುವ ಸಂಘವು, 2023-24ನೇ ಸಾಲಿನಲ್ಲಿ ದುಡಿಯುವ ಬಂಡವಾಳ 23652.68 ಲಕ್ಷ ಹೊಂದಿದ್ದು, ರೂ. 3.03 ಕೋಟಿಗೂ ಮಿಕ್ಕಿ ಲಾಭ ಗಳಿಸಿರುತ್ತದೆ. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ಟಿ.ಜಿ. ರಾಜಾರಾಮ ಭಟ್, ಶ್ರೀ ಎಂ. ವಾದಿರಾಜ್ […]

ಮಂಗಳೂರಿನ ನಾರಾಯಣಗುರು ಯುವ ವೇದಿಕೆಯ ರಜತ ಸಂಭ್ರಮ ಸಲುವಾಗಿ ಇಲ್ಲಿನ ಪುರಭವನದಲ್ಲಿ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಕಾರ್ಯಕ್ರಮವು ಜರುಗಿತು. ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಶ್ರೀ ಸುದರ್ಶನ್ ಕೊಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ ಹರಿಪ್ರಸಾದ್‌ರವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರನ್ನು ಸನ್ಮಾನಿಸುವ ಮೂಲಕ ಗೌರವಿಸಿದರು. ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್, ಮಾಜಿ ಸಚಿವ ಶ್ರೀ ಕೃಷ್ಣ ಜೆ ಪಾಲೆಮಾರ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್. ಪೂಜಾರಿ, ನಮ್ಮ ಕುಡ್ಲ ಸಂಸ್ಥೆಯ ಮುಖ್ಯಸ್ಥ ಶ್ರೀ ಲೀಲಾಕ್ಷ ಕರ್ಕೆರಾ, ಡೀನೆಟ್ ಮೆನೇಜಿಂಗ್ ಡೈರೆಕ್ಟರ್ ಶ್ರೀ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ವಂತ ಮಾಲೀಕತ್ವದ ನೂತನ 33ನೇ ಕೃಷ್ಣಾಪುರ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಇವರ ನುರಿತ ವೈದ್ಯ ತಂಡದವರಿ0ದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಸಣಾ ಶಿಬಿರ ಹಾಗೂ ಶ್ರೀನಿವಾಸ್ ಇನ್ಸ್ಸ್ಟಿಟ್ಯೂಟ್ ಆಪ್ ಡೆಂಟಲ್ ಸಾಯನ್ಸ್ ಮುಕ್ಕ , ಸುರತ್ಕಲ್ ಇಲ್ಲಿನ ನುರಿತ ವೈದ್ಯರ ತಂಡದಿ0ದ ಉಚಿತ ದಂತ ತಪಸಣಾ ಶಿಬಿರವನ್ನು ಸುರತ್ಕಲ್‌ನ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿರುವ “ICON ಐಕನ್ ಪ್ಲಾನೆಟ್” ಕಟ್ಟಡದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಮಂಗಳೂರು ಇದರ ಉಪಾಧ್ಯಕ್ಷರಾಗಿರುವ ಶ್ರೀ ವಿನಯ್ ಕುಮಾರ್ ಸೂರಿಂಜೆ ರವರು ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ‘ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಪ್ರಸ್ತುತ ಸ್ವಂತ ಮಾಲೀಕತ್ವದ ನೂತನ 33ನೇ ಕೃಷ್ಣಾಪುರ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದು, ಇದು ಸಂಘದ 71ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಈ ಕಾರ್ಯಕ್ರಮವು ಕೃಷ್ಣಾಪುರದ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಉಪ್ಪಿನಂಗಡಿ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ) ,ಜೇಸಿಐ ಉಪ್ಪಿನಂಗಡಿ ಇವರ ಜಂಟಿ ಸಹಯೋಗದೊಂದಿಗೆ ಕಣಚೂರು ಆಯುರ್ವೇದ ಆಸ್ಪತ್ರೆ ನಾಟೆಕಲ್ , ದೇರಳಕಟ್ಟೆ ಇವರ ವೈದರ ತಂಡದವರಿ0ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಎಚ್. ಎಮ್.ಆಡಿಟೋರಿಯಂ ಉಪ್ಪಿನಂಗಡಿ ಇಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ನಿ. ಇದರ ಅಧ್ಯಕ್ಷರಾದ ಶ್ರೀ ಕೆ ವಿ ಪ್ರಸಾದ್‌ರವರು ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರ ಮುಂದಾಳತ್ವದಲ್ಲಿ ಬ್ಯಾಂಕಿ0ಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರ ಆರೋಗ್ಯದ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ಆಯೋಜಿಸಿ ಕಾಳಜಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕುಮಾರ್ ರೈ ಇವರು ಮಾತನಾಡಿ ಹಲಸು ಹಬ್ಬದ ಕಾರ್ಯಕ್ರಮದ ಜೊತೆಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಇದರ ಸಹಭಾಗಿತ್ವದೊಂದಿಗೆ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರ ಜನರಿಗೆ ಅನುಕೂಲವಾಗಲಿ ಇದು ಜೇಸಿಐ ಸಂಸ್ಥೆಗೂ ಕೂಡ ಹೆಮ್ಮೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾದ ಜೇಸಿಐ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಶ್ರೀಮತಿ ಲವೀನ ಪಿಂಟೋ ಇವರು ಮಾತನಾಡಿ ಉಚಿತ […]