ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ’ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಕೊಟ್ಟಾರ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಜಯರಾಮ ಕಾರಂದೂರು, ಶ್ರೀ ಸದಾಶಿವ ಎನ್, ಶ್ರೀ ಭಾಸ್ಕರ ಬಿ, ಶ್ರೀ ಅಶ್ವಿನ್ ಕುಮಾರ್, ಶ್ರೀ ಎಚ್ ಜನಾರ್ಧನ ಗಡಿಯಾರ್, ಶ್ರೀಮತಿ ರಮಣಿ ಕೆ, ಶ್ರೀಮತಿ ನಿಶಾ ವಿಶ್ವನಾಥ ಹಾಗೂ ಶ್ರೀಮತಿ ಜ್ಯೋತಿ ವಿ ಸುವರ್ಣ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಟಾಟಿಸಿದರು.


ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಜಯರಾಮ್ ಕಾರಂದೂರ್ ರವರು ಮಾತನಾಡಿ, ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತಪಡಿಸಿ, ಸಂಘವು ಪ್ರತಿಯೊಂದು ಗ್ರಾಹಕರ ಮನೆಗೆ ಕ್ಯಾಲೆಂಡರ್ ನೀಡುತ್ತಿರುವುದರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಂಘದ ಗ್ರಾಹಕರಾದ ಶ್ರೀ ಉಮ್ಮಪ್ಪ ಪೂಜಾರಿ ಪಿ. ಹಾಗೂ ಶ್ರೀಮತಿ ಪ್ರತಿಭಾ ಎಸ್ ರವರು ಸಂಘದ ಶಾಖೆಗಳು ಉತ್ತಮ ಸೇವೆಯನ್ನು ನೀಡುತ್ತಿರುವ ಬಗ್ಗೆ ಹಾಗೂ ಇನ್ನೂ ನೂತನ ಶಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ” ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಬ್ಯಾಂಕಿ0ಗ್ ಸೇವೆಯ ಜೊತೆಗೆ ರಾಷ್ಟಿçÃಕೃತ ಬ್ಯಾಂಕ್‌ಗಳು ನೀಡುವ ಹೆಚ್ಚಿನ ಸೇವೆಗಳು ಸಂಘದಲ್ಲಿ ಲಭ್ಯವಿರುತ್ತದೆ. ಗ್ರಾಹಕರಿಗೆ ಉಪಯೋಗವಾಗುವ ವಿಮಾ ಸೌಲಭ್ಯಗಳು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು. ಗ್ರಾಹಕರ ಸಲಹೆ ಸಹಕಾರದಿಂದ ಮಾತ್ರ ನಮ್ಮ ಸಂಘವು ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರುಗಳಾದ ಶ್ರೀ ಜಿ.ಪರಮೇಶ್ವರ ಪೂಜಾರಿ, ಶ್ರೀ ರಮಾನಾಥ್ ಸನಿಲ್, ಶ್ರೀ ಬಿ ಪಿ ದಿವಾಕರ್, ಶ್ರೀ ಗೋಪಾಲ್ ಎಮ್, ಶ್ರೀಮತಿ ಉಮಾವತಿ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾಖೆಯ ಪ್ರಭಾರ ಶಾಖಾಧಿಕಾರಿಯಾದ ಶ್ರೀಮತಿ ಆಶಾ ಸಂದೀಪ್ ರವರು ಸ್ವಾಗತಿಸಿ, ಸಿಬ್ಬಂದಿಯಾದ ಕುಮಾರಿ ಪ್ರತಿಭಾ ಜೆ. ರವರು ವಂದಿಸಿ, ಶ್ರೀ ವರುಣ್ ರಾಜ್ ರವರು ಕಾರ್ಯಕ್ರಮ ನಿರೂಪಿಸಿದರು.