
ಈ ಕಾರ್ಯಕ್ರಮದಲ್ಲಿ ರಾಮಜಾಲು ಗರಡಿಯ ಗೌರವವಾಗಿ “ರಾಮಜಾಲು ಗರಡಿ ಗೌರವ ಪ್ರಶಸ್ತಿ’ಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರಿಗೆ ಪ್ರದಾನ ಮಾಡಿದರು.
ಪ್ರತಿಷ್ಠಿತ “ರಾಮಜಾಲು ಗರಡಿ ಗೌರವ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು, “ರಾಮಜಾಲುವಿನ ಗರಡಿ ಜಾತ್ರೋತ್ಸವವನ್ನು ಕಂಡು ನನಗೆ ಬಹಳ ಸಂತೋಷವಾಗಿದೆ. ನನ್ನ ಬೆಳವಣಿಗೆಗೆ ಬೈದೇರುಗಳ ಆಶೀರ್ವಾದವೇ ಕಾರಣವಾಗಿದೆ. ಅವರ ಸೇವೆಯಿಂದಲೇ ನಾನು ಸಮಾಜದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಇಂದು ನನಗೆ ಪ್ರದಾನ ಮಾಡಿದ ಈ ರಾಮಚಾಲು ಗರಡಿ ಗೌರವ ಪ್ರಶಸ್ತಿ ಇದು ನನಗೆ ಬೈದೇರುಗಳ ಪ್ರಸಾದವಾಗಿದೆ. ಸಮಾಜದಲ್ಲಿ ನನಗೆ ಇನ್ನಷ್ಟೂ ಸೇವೆ ಮಾಡಲು ಈ ಪ್ರಶಸ್ತಿ ಪ್ರೋತ್ಸಾಹ ನೀಡಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಸಂಜೀವ ಪೂಜಾರಿಯವರ ಕಾರ್ಯಕ್ರಮ ವ್ಯವಸ್ಥೆಯನ್ನು ಕಂಡು, ಬಹಳ ಋಷಿ ಆಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನು ಕೂಡ ಗೌರವಿಸುತ್ತಿರುವುದು ಅವರ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು, ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆಯಾದ ಶ್ರೀಮತಿ ಶಯನಾ ಜಯಾನಂದ್‌ರವರು, ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾದ ಶ್ರೀ ಕೆ. ಸಂಜೀವ ಪೂಜಾರಿ ಕೂರೇಲುರವರು, ಕೂರೇಲು ಸಂಜೀವ ಪೂಜಾರಿಯವರ ಪತ್ನಿ ಸರಸ್ವತಿ ಸಂಜೀವ ಪೂಜಾರಿ ಕೂರೇಲು ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕರಾದ ಶ್ರೀ ಜಯಂತ ನಡುಬೈಲ್ ಮತ್ತಿತ್ತರರು ಉಪಸ್ಥಿತರಿದ್ದರು.
ಅಭಿಜ್ಞಾ ಭಟ್ ಪ್ರಾರ್ಥಿಸಿದರು. ಹರ್ಷಿತ್ ಕುಮಾರ್ ಕೂರೇಲು ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.