
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಶ್ರೀ ಪ್ರದೀಪ್ ಕುಮಾರ್ ಸುವರ್ಣ ರವರು “ರಾಷ್ಟಿçಕೃತ ಬ್ಯಾಂಕುಗಳಲ್ಲಿ ಸ್ಥಳೀಯ ಸಿಬ್ಬಂದಿಗಳ ಕೊರತೆ ಇರುವುದರಿಂದ ನಾವುಗಳು ಅಲ್ಲಿ ತೆರಳದೆ ಸಹಕಾರಿ ಸಂಸ್ಥೆಗಳತ್ತಾ ಆಕರ್ಷಿತರಾಗುತ್ತಿದ್ದೇವೆ. ಅದರಲ್ಲೂ ಆತ್ಮಶಕ್ತಿಯ ಸಿಬ್ಬಂದಿಗಳು ಎಟಿಎಂ ಗಿಂತಲೂ ಅತೀ ವೇಗದಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆತ್ಮಶಕ್ತಿಯ ಸಹಕಾರಿ ತನ್ನ ಸ್ವಂತ ಆಪ್ಲಿಕೇಶನ್ ಮಾಡುವ ಮೂಲಕ ಇನ್ನೂ ಹೆಚ್ಚಿನ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವಂತಾಗಲಿ” ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಬಜ್ಪೆ ಶಾಖೆಯು ಆರಂಭಗೊAಡು ೧೧ ವರ್ಷಗಳ ಈ ಸುದಂರ್ಭದಲ್ಲಿ ಗ್ರಾಹಕರ ಸಭೆಯನ್ನು ಆಯೋಜಿಸಿದ್ದೇವೆ. ೧೧ ವರ್ಷಗಳಿಂದ ಎಲ್ಲಾ ವರ್ಗದ ಗ್ರಾಹಕರು ಸಹಕರಿಸುತ್ತಾ ಶಾಖೆಯು ಉತ್ತಮ ವ್ಯವಹಾರ ಸಾಧಿಸಲು ಕಾರಣೀಕರ್ತರಾಗಿದ್ದಾರೆ. ಸಂಘವು ಠೇವಣಿದಾರರ ಸುರಕ್ಷತೆ ದೃಷ್ಟಿಯಿಂದ ಭದ್ರತಾ ಸಾಲಗಳಿಗೆ ಹೆಚ್ಚು ಒತ್ತು ಕೊಟ್ಟು, ಚಿನ್ನಾಭರಣ ಸಾಲವನ್ನು ನೀಡಲು ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಿದೆ. ಹಾಗೆಯೇ ಗ್ರಾಹಕರಿಗೆ ತಮ್ಮ ತುರ್ತು ಅಗತ್ಯತೆಗಳಿಗಾಗಿ ವೈಯಕ್ತಿಕ ಸಾಲವಾಗಿ ಸಣ್ಣ ಪ್ರಮಾಣದ ಮೈಕ್ರೋ ಸಾಲವನ್ನು ನೀಡಲಾಗುತ್ತಿದೆ. ಸರಕಾರ ಯಶಸ್ವಿನಿ ಯೋಜನೆಯ ನೋಂದಣಿಯು ಈ ತಿಂಗಳ ಅಂತ್ಯದವರೆಗೆ ಅಂದರೆ ಮಾರ್ಚ್ ೩೧ರ ತನಕ ಲಭ್ಯವಿದ್ದು, ಸಂಘದ ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದರು.
ಸಂಘದ ಸದಸ್ಯರಾದ ಶ್ರೀ ಗೋಪಾಲ್ ಅಮೀನ್, ಶ್ರೀ ಬಾಲಕೃಷ್ಣ ಸುವರ್ಣ, ಶ್ರೀ ರತ್ನಾಕರ್ ಬಿ. ಕೆ , ಹಾಗೂ ಶ್ರೀ ವಿನೋದರ ಪೂಜಾರಿ ಇವರುಗಳು ಸಂಘದ ಕಾರ್ಯವ್ಯೆಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕರಾದ ಶ್ರೀ ರಮಾನಾಥ್ ಸನಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದರು.
ಬಜ್ಪೆ ಶಾಖೆಯ ಸಿಬ್ಬಂದಿಯಾದ ಕುಮಾರಿ ಸ್ವಾತಿ ಸ್ವಾಗತಿಸಿ, ಕುಮಾರಿ ಅನುಜಿತ ವಂದಿಸಿದರು. ಶಾಖಾಧಿಕಾರಿ ಶ್ರೀಮತಿ ರವಿಕಲಾ ಕಾರ್ಯಕಮವನ್ನು ನಿರೂಪಿಸಿದರು.