ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಕರಂಗಲ್ಪಾಡಿ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಪುಟ್ಟಸ್ವಾಮಿ ಹೆಚ್, ಶ್ರೀ ರಮೇಶ್ ಯು, ಶ್ರೀ ಶ್ರೀಧರ್ ಹಾಗೂ ಶ್ರೀ ಅಶೋಕ್ ಎಮ್.ಕೆ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಶ್ರೀಮತಿ ಸುಮ ಪ್ರಸಾದ್ ರವರು ಮಾತನಾಡಿ ಶಾಖೆಯು ಗ್ರಾಹಕರಿಗೆ ಉತ್ತಮ ಬ್ಯಾಂಕಿAಗ್ ಸೇವೆ ನೀಡುತ್ತಿದ್ದು, ಶಾಖೆಯ ಸಿಬ್ಬಂದಿಗಳ ನಗುಮೊಗದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಂಘದ ಸದಸ್ಯರಾದ ಶ್ರೀ ರಾಜರಾಮನ್ ತಾಳಿಪಾಡಿ ರವರು ಮಾತನಾಡಿ ಶಾಖೆಯಲ್ಲಿ ಇ-ಸ್ಟಾಂಪಿAಗ್ ಸೇವೆಯನ್ನು ಶೀಘ್ರವಾಗಿ ನೀಡುತ್ತಿರುವ ಹಾಗೂ ಆಯ್ದ ರಜಾ ದಿನಗಳಲ್ಲಿ ಬ್ಯಾಂಕಿAಗ್ ಹಾಗೂ ಇ-ಸ್ಟಾಂಪಿAಗ್ ಸೇವೆ ನೀಡುತ್ತಿರುವದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದರು.
ಸAಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿŒ “ಸಂಸ್ಥೆಯು 13 ವರ್ಷದಲ್ಲಿ 33 ಶಾಖೆಗಳನ್ನು ತೆರೆದು, ೨೦೦೦ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಲು ಗ್ರಾಹಕರೇ ಕಾರಣ. ಗ್ರಾಹಕರ ಸಹಕಾರದಿಂದ ನಮ್ಮ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಬ್ಯಾಂಕಿAಗ್ ಸೇವೆಯ ಜೊತೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸಂಘದ ವತಿಯಿಂದ ೮೬ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಕರಂಗಲ್ಪಾಡಿ ಶಾಖೆಯ ಪ್ರಯಕ್ತ ೧೦೦೦ ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.50 ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. 8000/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು. ಆಯ್ದ ರಜಾ ದಿನಗಳಲ್ಲಿಯೂ ಸ್ಟಾಂಪಿAಗ್ ಸೇವೆಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆಯುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ, ಶ್ರೀ ಜಿ ಪರಮೇಶ್ವರ ಪೂಜಾರಿ, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ಗೋಪಾಲ್ ಎಮ್, ಶ್ರೀಮತಿ ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕರಂಗಲ್ಪಾಡಿ ಶಾಖೆಯ ಸಿಬ್ಬಂದಿಯಾದ ಶ್ರೀಮತಿ ಟೀಷ್ಮಾ ಸ್ವಾಗತಿಸಿ , ಕುಮಾರಿ ನವ್ಯ ವಂದಿಸಿದರು. ಶಾಖಾಧಿಕಾರಿ ಶ್ರೀ ಕೌಶಿಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.