
ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸಾರಮ್ಮ ರವರು ಗಣಕೀಕೃತ ಬ್ಯಾಂಕಿ0ಗ್‌ಗೆ ಚಾಲನೆ ನೀಡಿದರು.
ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಸೋಹನ್ ಅತಿಕಾರಿ ರವರು ಭದ್ರತಾ ಕೋಶವನ್ನು ಉದ್ಘಾಟಿಸಿ ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಸಹಕಾರಿ ರಂಗದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಿದೆ. ಪ್ರಸ್ತುತ ರಾಷ್ಟಿçÃಯ ಹೆದ್ದಾರಿಯ ಅಗಲೀಕರಣದಿಂದ ಶಾಖೆಯ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಖೆಯನ್ನು ಸ್ಥಳಾಂತರ ಮಾಡಿರುವುದು ಶ್ಲಾಘನೀಯ. ಪ್ರಸ್ತುತ ೩೩ ಶಾಖೆಯನ್ನು ಹೊಂದಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ೧೦೦ ಶಾಖೆಯನ್ನು ಹೊಂದಲಿ ಎಂದು ಶುಭ ಹಾರೈಸಿದರು.
ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಜಿ ಸುನಿಲ್ ರವರು ಮಾತನಾಡಿ “ಗಂಜಿಮಠ ಗ್ರಾಮ ಪಂಚಾಯತ್ ಕಟ್ಟಡದ ಒಂದನೇಯ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಖೆಯನ್ನು ಗ್ರಾಹಕರ ಹಿತ ದೃಷ್ಟಿಯಿಂದ ಗಂಜಿಮಠ ಮುಖ್ಯ ರಸ್ತೆಯಲ್ಲಿರುವ ವೈಕುಂಠ ಪ್ರಭು ಕಾಂಪ್ಲೆಕ್ಸ್ನ ನೆಲ ಅಂತಸ್ತಿನ ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಿಸುವುದು ಸಂತೋಷದ ವಿಷಯ. ಕಳೆದ 13 ವರ್ಷಗಳಿಂದ ಈ ಸಂಸ್ಥೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರ ನೇತೃತ್ವದಲ್ಲಿ ಜಿಲ್ಲಾದ್ಯಂತ ಉತ್ತಮ ಸೇವೆಯನ್ನು ನೀಡುತ್ತಿದೆ. ಅದರೊಂದಿಗೆ ಸಂಘದ ಸಿಬ್ಬಂದಿಗಳ ಪರಿಶ್ರಮವೂ ಕಾರಣ ಎಂದು ಆಶಯ ವ್ಯಕ್ತಪಡಿಸಿದರು.
ಬಿಲ್ಲವ ಸಂಘ ಪಡುಪೆರಾರ ಇದರ ಗೌರವ ಅಧ್ಯಕ್ಷರಾದ ಶ್ರೀ ಕೃಷ್ಣ ಕೆ ಅಮೀನ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಹಾಗೂ ಎಲ್ಲಾ ಆಡಳಿತ ನಿರ್ದೇಶಕರಿಗಳಿಗೆ ಅಭಿನಂದನೆ ಸಲ್ಲಿಸಿ, ಸಹಕಾರಿ ಸಂಘವು ಜನರಿಗೆ ಕಷ್ಟ ಕಾಲದಲ್ಲಿ ಅನುಕೂಲವಾಗಲೆಂದೇ ಕಾರ್ಯನಿರ್ವಹಿಸಿ ಗ್ರಾಹಕರಿಗೆ ತೃಪ್ತಿಕರ ಸೇವೆಯನ್ನು ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ಸೇವೆಯನ್ನು ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೊಳಾರ್ ರವರು ಮಾತನಾಡಿ, ಸಂಘದ ಸದಸ್ಯರ ಅನುಕೂಲಕೋಸ್ಕರ ಗಂಜಿಮಠ ಗ್ರಾಮ ಪಂಚಾಯತ್ ಕಟ್ಟಡದ ಪ್ರಥಮ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಖೆಯನ್ನು ಗಂಜಿಮಠ ಮುಖ್ಯ ರಸ್ತೆಯಲ್ಲಿರುವ ವೈಕುಂಠ ಪ್ರಭು ಕಾಂಪ್ಲೆಕ್ಸ್ನ ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರ ಮಾಡಲಾಗಿದೆ. ನೂತನ ಶಾಖೆಯ ಉದ್ಘಾಟನಾ ಪ್ರಯುಕ್ತ ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. ೧೦,೫೦೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು ಎಂದು ಹೇಳಿದರು.
ಗಂಜಿಮಠ ಶಾಖೆ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಹಿರಿಯ ಸದಸ್ಯರಾದ ಶ್ರೀ ಕೆ. ನಾರಾಯಣ ಕಾಮತ್, ಶ್ರೀಮತಿ ಶಾಲಿನಿ, ಶ್ರೀ ಪ್ರವೀಣ್ ಎನ್ ಶೆಟ್ಟಿ, ಶ್ರೀ ಲಕ್ಷಿ÷್ಮÃಶ ಅಂಚನ್, ಶ್ರೀ ಜಿ ನಾರಾಯಣ ಕಾರಂತ್, ಶ್ರೀಮತಿ ರೇಶ್ಮ, ಶ್ರೀ ಕೃಷ್ಣಪ್ಪ ಪೂಜಾರಿ, ಶ್ರೀ ದಯಾನಂದ, ಶ್ರೀ ರೋನಾಲ್ಡ್ ಜೋಸೆಪ್ ರೆಬೆಲ್ಲೊ, ಜಾನ್ ರೋಡ್ರಿಗಸ್, ಹಾಗೂ ಶ್ರೀ ವಿಠಲ ಭಂಡಾರಿ ಅವರನ್ನು ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಇದರ ಸದಸ್ಯರಾದ ಶ್ರೀ ಸುನೀಲ್ ಮನೋಜ್ ಫೆರ್ನಾಂಡಿಸ್, ಶ್ರೀಮತಿ ರೇಖಾ, ಶ್ರೀ ಪ್ರವೀಣ್ ಶೆಟ್ಟಿ, ರಿಕ್ಷಾ ಚಾಲಕ ಮಾಲಕರ ಸಂಘ ಗಂಜಿಮಠ ಇದರ ಗೌರವ ಅಧ್ಯಕ್ಷರಾದ ಶ್ರೀ ರಮಾನಾಥ್ ಶೆಟ್ಟಿ, ವೈಕುಂಠ ಪ್ರಭು ಕಾಂಪ್ಲೆಕ್ಸ್ನ ಕಟ್ಟಡದ ಮಾಲಕರಾದ ಶ್ರೀಮತಿ ಸುಧಾ ವಿ ಪ್ರಭು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಮತ್ತಿತ್ತರರು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಆನಂದ್ ಎಸ್. ಕೊಂಡಾಣ, ಶ್ರೀ ಸೀತಾರಾಮ್ ಎನ್, ಶ್ರೀ ರಮಾನಾಥ ಸನಿಲ್, ಶ್ರೀ ಮುದ್ದು ಮೂಡಬೆಳ್ಳೆ, ಮತ್ತಿತ್ತರರು ಪಾಲ್ಗೊಂಡಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ ರವರು ವಂದಿಸಿದರು.
ಸಹಾಯಕ ಪ್ರಭಂದಕರಾದ ಶ್ರೀ ವಿಶ್ವನಾಥ್ ಹಾಗೂ ಶಾಖಾಧಿಕಾರಿ ಶ್ರೀ ಸಂದೀಪ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.