ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಕ್ಷಿಕೆರೆ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಪಕ್ಷಿಕೆರೆ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಸುಧಾಕರ್ ರಾವ್, ಶ್ರಿ ಯೋಗೀಶ್ ಶೆಟ್ಟಿ, ಶ್ರೀಮತಿ ಕುಶಾಲ ಎಸ್. ಕುಕ್ಯಾನ್, ಶ್ರೀ ಶಿವಪ್ಪ ಶೆಟ್ಟಿ, ಶ್ರೀಮತಿ ಪೂರ್ಣಿಮ ಹಾಗೂ ಶ್ರೀಮತಿ ಸಾರಿಕ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಶ್ರೀ ಸುಧಾಕರ್ ರಾವ್ ಅವರು ಮಾತಾನಾಡಿ “ಪಕ್ಷಿಕೆರೆಯಲ್ಲಿ ಶಾಖೆ ತೆರೆದು ಬ್ಯಾಂಕಿAಗ್, ವಿಮೆ , ಆರೋಗ್ಯ ಕಾರ್ಡ್ ಈ ಎಲ್ಲಾ ವ್ಯವಸ್ಥೆ ಒಂದೇ ಸೂರಿನಲ್ಲಿ ಕಲ್ಪಿಸಿದಕ್ಕೆ ಸಂಘಕ್ಕೆ ಧನ್ಯವಾದಗಳನ್ನು ಸಲ್ಲಿಸಿ, ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಹೊಂದಲಿ” ಎಂದು ಶುಭಹಾರೈಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿŒ “ಸಂಸ್ಥೆಯು ೧೩ ವರ್ಷಗಳಲ್ಲಿ೩೩ ಶಾಖೆಗಳನ್ನು ತೆರೆದು, ರೂ. ೨೦೦೦ ಕೋಟಿಗೂ ಮಿಕ್ಕಿ ವ್ಯವಹಾರ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ವತಿಯಿಂದ ಅಪಘಾತದಿಂದ ಒಂದು ಕಾಲು ಮುರಿತಕ್ಕೆ ಒಳಗಾದ ಸಂಘದ ಸದಸ್ಯರಾದ ಶ್ರೀ ಲತೀಶ್ ಕುಮಾರ್ ಕೆ ಇವರಿಗೆ ನಿತ್ಯ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೊಡುಗೆಯಾಗಿ ಸ್ಕೂಟರ್‌ನ್ನು ಹಸ್ತಾಂತರಿಸುವ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಚೇರಿ “ಆತ್ಮಶಕ್ತಿ ಸೌಧ” ಬೈರಾಡಿಕೆರೆ, ಪಡೀಲ್‌ನಲ್ಲಿ ಜರುಗಿತು. ಸ್ಕೂಟರ್ ಹಸ್ತಾಂತರ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ದಿನಕರ್ ಕುಲಾಲ್ ರವರು ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಸೀತಾರಾಮ್ ಎನ್, ಶ್ರೀ ರಮಾನಾಥ್ ಸನಿಲ್, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ಗೋಪಾಲ್ ಎಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಸಲಹೆಗಾರರಾದ ಅಶೋಕ್ ಕುಮಾರ್, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮತ್ತು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಗೌರವ ಅಧ್ಯಕ್ಷರಾದ ಶ್ರೀ ವಾಮನ್ ಕೆ., ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ […]

ಅಂತರಾಷ್ಟಿçಯ ಯೋಗ ದಿನಾಚರಣೆಯ ಅಂಗವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಮಂಗಳೂರು ಇದರ ವತಿಯಿಂದ “ಆತ್ಮಶಕ್ತಿ ಸೌಧ”, ಪಡೀಲ್‌ನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಹಾಗೂ ಅತಿಥಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಮಾತನಾಡಿದ ಸಂಘದ ಅಧ್ಯಕ್ಷರು ಯೋಗ ದಿನಾಚರಣೆಯ ಮಹತ್ವದ ಬಗ್ಗೆ ಸಂಘದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಇದರ ಶಿಕ್ಷಕಿಯಾದ ಶ್ರೀಮತಿ ಪುಷ್ಪಲತಾ ಸುವರ್ಣ ರವರು ಸಂಘದ ಸಿಬ್ಬಂದಿಗಳಿಗೆ ಯೋಗಾಸನ ಮಾಡಿಸುವ ಮೂಲಕ ಯೋಗ ದಿನಾಚರಣೆಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಇದರ ಶಿಕ್ಷಕಿಯಾದ ಶ್ರೀಮತಿ ಪುಷ್ಪಲತಾ ಸುವರ್ಣ ರವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್. ಪಿ , ನಿರ್ದೇಶಕರಾದ ಶ್ರೀ ದಿವಾಕರ್ ಬಿ.ಪಿ., ಶ್ರೀ ಗೋಪಾಲ್ ಎಮ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, […]

ಸುರತ್ಕಲ್ ಪೂರ್ವ ಆರ್ಕೇಡ್ ನಲ್ಲಿ 2012 ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯನ್ನು ಶುಕ್ರವಾರ ಸುರತ್ಕಲ್ ಮುಖ್ಯ ರಸ್ತೆಯಲ್ಲಿರುವ ವಿಜಯ ಮಹಲ್ ಕಾಂಪ್ಲೆಕ್ಸ್ನ ಸುಸಜ್ಜಿತ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳಿಸಲಾಯಿತು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಅಧ್ಯಕ್ಷರಾದ ಕೆ. ಚಿತ್ತರಂಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಶಾಖೆ ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರ ಆಗಿರುವುದು ತುಂಬಾ ಸಂತೋಷದ ವಿಷಯ. ನಮ್ಮದೇ ಸೊಸೈಟಿ ಆಗಬೇಕೆಂಬ ನಮ್ಮ ಮಹದಾಸೆಗೆ ಆತ್ಮಶಕ್ತಿ ಸಹಕಾರ ಶಕ್ತಿ ನೀಡಿದೆ. ಈ ಸಂಸ್ಥೆಯು ಇಷ್ಟು ವೇಗವಾಗಿ ೩೩ ಶಾಖೆಗಳನ್ನು ಮಾಡಿರುವುದು ಅಸಾಮಾನ್ಯ ಸಾಧನೆ. ಇದರಲ್ಲಿ ಚಿತ್ತರಂಜನ್ ಬೋಳಾರ್ ಅವರ ಕ್ರಿಯಾಶೀಲ ನಾಯಕತ್ವ ಎಲ್ಲಾ ಸಿಬ್ಬಂದಿಗಳ ಅವಿರತವಾದ ಶ್ರಮ ಮತ್ತು ಆಡಳಿತ ಮಂಡಳಿಯವರ ಸಹಕಾರ ಇದೆ ಎಂದು ಶ್ಲಾಘಿಸಿದರು.

ಗಣಕೀಕೃತ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಚಿತ್ತರಂಜನ್ ಬೋಳಾರ್ ಅವರು ಆತ್ಮಶಕ್ತಿ ಸಹಕಾರಿಯನ್ನು ಅಭೂತಪೂರ್ವವಾಗಿ ಮತ್ತು ಶಿಸ್ತು ಬದ್ಧವಾಗಿ ಬೆಳೆಸಿದ್ದಾರೆ. ಸಂಸ್ಥೆಯ ಬೆಳವಣಿಗೆಗೆ ಚಿತ್ತರಂಜನ್ ಅವರ ನಾಯಕತ್ವವೇ ಕಾರಣ. ಒಂದು ಸಂಸ್ಥೆ ಲಾಭದಾಯಕವಾಗಿ ಬೆಳೆದರೆ ಅದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಆತ್ಮಶಕ್ತಿಯ ೩೩ ಶಾಖೆಗಳ ಮೂಲಕ ೨೦೦ ಕ್ಕೂ ಅಧಿಕ ಜನರಿಗೆ ಕೆಲಸ ಲಭಿಸಿದೆ. ಆತ್ಮಶಕ್ತಿ ಸಹಕಾರಿಯು ಅಭೂತಪೂರ್ವವಾಗಿ ಬೆಳೆಯಲು ಚಿತ್ತಣ್ಣನ ಕ್ರಿಯಾಶೀಲತೆಯ ಜೊತೆಗೆ ನಿರ್ದೇಶಕರ ಹಾಗೂ ಸಿಬ್ಬಂದಿಗಳ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಉಳ್ಳಾಲ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಹಾಗೂ ನೇತ್ರ ತಪಾಸಣಾ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಪಡೀಲ್, ಮಂಗಳೂರು, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ (ರಿ.) ಮತ್ತು ಮಹಿಳಾ ವಿಭಾಗ, ಬಂಡಿಕೊಟ್ಯ ,ಉಳ್ಳಾಲ , ವಿದ್ಯಾರಣ್ಯ ಯುವಕ ವೃಂದ (ರಿ.) ಮತ್ತು ವಿದ್ಯಾರಣ್ಯ ಕಲಾವೃಂದ ಉಳ್ಳಾಲ, ಹಾಗೂ ಶಿವಶಕ್ತಿ ಯುವಕ ಮಂಡಲ (ರಿ.) ಉಳ್ಳಾಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಭವನ, ಉಳ್ಳಾಲ ನಗರಸಭೆ ಆವರಣ, ಉಳ್ಳಾಲದಲ್ಲಿ ಜರುಗಿತು. ವಿದ್ಯಾರಣ್ಯ ಯುವಕ ವೃಂದದ ಗೌರವಾಧ್ಯಕ್ಷರಾದ ಶ್ರೀ ವಿಜಯ ಕುಮಾರ್‌ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ವಿಭಾಗದ ವೈದ್ಯರಾದ ಡಾ|| ಶ್ರೀಮತಿ ನವ್ಯ ಕೆ. ರವರು ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಸೇವೆಯ ಜೊತೆಯಲ್ಲಿ ಸಾಮಾಜಿಕ ಕಳಕಳಿಯಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಈ ಶಿಬಿರದಲ್ಲಿ ಉಚಿತ ದಂತ ತಪಾಸಣೆ ಮತ್ತು ಸಲಹೆ , ಹಲ್ಲುಗಳ ಶುಚೀಕರಣ, ಹಲ್ಲುಗಳ ಚಿಕ್ಕ ಚಿಕ್ಕ ಭರ್ತಿಗೊಳಿಸುವ ಚಿಕಿತ್ಸೆ, ಚಿಕಿತ್ಸೆಗೆ ಒಳಪಡದ ಮತ್ತು ಬಹಳ ಕೆಟ್ಟಿರುವ ಹಲ್ಲುಗಳನ್ನು ಕೀಳಿಸುವುದರ ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡನ್ನು ನೀಡಿ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನೀರುಮಾರ್ಗ ಶಾಖೆಯಲ್ಲಿ ಜರುಗಿತು. ಕರ‍್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಪುಟ್ಟಸ್ವಾಮಿ ಎಚ್, ಶ್ರೀ ಸತೀಶ್ ಕಂಪ, ಶ್ರೀ ಲಕ್ಷಣ ಪೂಜಾರಿ, ಶ್ರೀಮತಿ ಲವೀನ ಪಿರೇರ ಹಾಗೂ ಶ್ರೀಮತಿ ಶಶಿಪ್ರಭ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ,Œ “ಠೇವಣಿ ಸಂಗ್ರಹಣೆಯೊAದಿಗೆ ಸಾಲ ವಸೂಲಾತಿ ಕ್ರಮವು ಸರಿಯಾದ ಪ್ರಮಾಣದಲ್ಲಿ ಆದಾಗ ಮಾತ್ರ ಸಂಘದ ಬೆಳವಣಿಗೆ ಸಾಧ್ಯ , ಸಿಬ್ಬಂದಿ ವರ್ಗ, ಗ್ರಾಹಕರ ಸಹಕಾರದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಂಘವು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಅಗತ್ಯ ಸಂದರ್ಭಗಳಲ್ಲಿ ಹಿರಿಯ ನಾಗರಿಕ ಸದಸ್ಯರ ಮನೆಗೆ ಭೇಟಿ ನೀಡಿ Œಸೇವೆ ನೀಡುತ್ತಿದ್ದೇವೆ. ಈಗಾಗಲೇ ಸಂಘದ ಸದಸ್ಯರಿಗೆ ಹಬ್ಬದ ಕೊಡುಗೆಯಾಗಿ 1000 […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಗುರುಶ್ರೀ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಸ್ವ-ಉದ್ಯೋಗ ತರಬೇತಿ ಕಾರ್ಯಗಾರವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷ÷್ಯತೆಯಲ್ಲಿ ಮಾಡೂರು ಶಾಖೆಯ ಆವರಣದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಮಾಡೂರು ಶಾಖೆಯ ಹಿರಿಯ ಸದಸ್ಯರಾದ ಶ್ರೀಮತಿ ಸುಂದರಿಯವರು ಉದ್ಘಾಟಿಸಿದರು. ಸಂತ ಆಗ್ನೇಸ್ ಕಾಲೇಜಿನ ಸಹ ಪ್ರಾದ್ಯಾಪಕರಾಗಿರುವ ಡಾ. ಮೀರಾ ರಮೇಶ್ ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ವ್ಯವಹಾರದ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬರುತ್ತಿದೆ. ಸಂಘದ ಗುರುಶ್ರೀ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಇಂತಹ ಅಚ್ಚುಕಟ್ಟಾದ ಸ್ವ-ಉದ್ಯೋಗ ತರಬೇತಿ ಕಾರ್ಯಗಾರವನ್ನು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಹಾಗೂ ಅಂತರಾಷ್ಟಿçÃಯ ಕಾರ್ಯಗಾರದಲ್ಲಿ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ತೊಕ್ಕೊಟ್ಟು ಶಾಖೆಯ ವತಿಯಿಂದ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ (ರಿ.), ಭಟ್ನಗರ ತೊಕ್ಕೊಟ್ಟು ಇವರ ಅಮೃತ ಮಹೋತ್ಸವದ ಪ್ರಯುಕ್ತ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿ0ದ ಉಚಿತ ದಂತ ತಪಾಸಣೆ ಮತ್ತು ಎ.ಜೆ. ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೈನ್ಸ್, ಮಂಗಳೂರು ಇವರ ನುರಿತ ತಜ್ಞ ವೈದ್ಯರ ತಂಡದವರಿ0ದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರವು ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ (ರಿ.), ಭಟ್ನಗರ ತೊಕ್ಕೊಟ್ಟು ಇದರ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷ÷್ಯತೆಯಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ (ರಿ.) ಇದರ ಮುಖ್ಯ ಶಿಕ್ಷಕರಾದ ಶ್ರೀ ಜಯಾನಂದ ಅಂಚನ್‌ರವರು ಉದ್ಘಾಟಿಸಿದರು. ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಗಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟ್ನ ಅಮೃತ ಮಹೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಸಹಯೋಗದೊದಿಗೆ ಇಂತಹ ಅಚ್ಚುಕಟ್ಟಾದ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸುತ್ತಿದ್ದೇವೆ. ಇದಕ್ಕೆ ಸಹಕಾರ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಮಾಡೂರು ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಮಂದಿರ (ರಿ.) ಮಾಡೂರು ಹಾಗೂ ಶ್ರೀ ವನದುರ್ಗಾ ಅಯ್ಯಪ್ಪ ಭಜನಾ ಮಂದಿರ (ರಿ.) ಇವರ ಜಂಟಿ ಸಹಯೋಗದೊಂದಿಗೆ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿ0ದ ಉಚಿತ ದಂತ ತಪಾಸಣೆ ಮತ್ತು ಎ.ಜೆ. ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೈನ್ಸ್, ಮಂಗಳೂರು ಇವರ ನುರಿತ ತಜ್ಞ ವೈದ್ಯರ ತಂಡದವರಿ0ದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರವು ಮಾತೃಶ್ರೀ ಕಾಂಪ್ಲೆಕ್ಸ್, ಮಾಡೂರು ಶಾಖೆಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಶ್ರೀ ವನದುರ್ಗಾ ಅಯ್ಯಪ್ಪ ಭಜನಾ ಮಂದಿರ (ರಿ.) ಇಲ್ಲಿಯ ಗುರುಸ್ವಾಮಿಯಾದ ಶ್ರೀ ಭಾಸ್ಕರ್ ರವರು ಉದ್ಘಾಟಿಸಿದರು. ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ವೈದ್ಯರಾದ ಡಾ| ಪ್ರಮಾದ ಪ್ರಭಾಕರ್ ಮಾತನಾಡಿ “ಸಮಾಜದ ಎಲ್ಲಾ ಜನರು ಉದ್ಯೋಗದ ಜೊತೆ ತಮ್ಮ ಆರೋಗ್ಯದ ಕಾಳಜಿಯನ್ನು ನೋಡಿಕೊಳ್ಳಬೇಕು. ಈ ಶಿಬಿರದಲ್ಲಿ ದಂತ ತಪಾಸಣೆ, ಹುಳುಕು ಹಲ್ಲುಗಳ ಭರ್ತಿ, ಶುಚಿಗೊಳಿಸುವುದು, ಕೀಳುವುದು ಮತ್ತು ಹಲ್ಲುಗಳ ತಪಾಸಣೆ ಮಾಡಿಸಿ, ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವತಿಯಿಂದ ಕೆ.ವಿ.ಕೆ. ಸೇವಾ ಸಮಿತಿ, ಕಸಿಹಿತ್ಲು, ಜಪ್ಪಿನಮೊಗರು, ಲಯನ್ಸ್ ಕ್ಲಬ್ ಕುಡ್ಲ, ಲಯನ್ಸ್ ಕ್ಲಬ್ ಮಂಗಳೂರು, ಪಂಪುವೆಲ್, ಕಲ್ಪವೃಕ್ಷ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಸಮುದಾಯ ದಂತ ಆರೋಗ್ಯ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು , ಇವರ ನುರಿತ ತಜ್ಞ ವೈದ್ಯರ ತಂಡದೊ0ದಿಗೆ ಉಚಿತ ದಂತ ತಪಾಸಣೆ ಮತ್ತು ನೇತ್ರ ತಪಾಸಣಾ ಶಿಬಿರವು ಕೆ.ವಿ.ಕೆ ಮೈದಾನ, ಕಸಿಹಿತ್ಲು ಜಪ್ಪಿನಮೊಗರು ಇಲ್ಲಿ ಜರುಗಿತು .

ಈ ಕಾರ್ಯಕ್ರಮವನ್ನು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಜಯರಾಜ್ ಪ್ರಕಾಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ನಮ್ಮ ಇಂದಿನ ಜೀವನ ಶೈಲಿಯಲ್ಲಿ ಅತೀ ಹೆಚ್ಚು ವಿಷಕಾರಿ ವಸ್ತುಗಳನ್ನು ಸೇವಿಸುತ್ತಿದ್ದೇವೆ. ಈ ಕಾರಣದಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ, ಯಾವಾಗ ಯಾವ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಿನ ಕಾಲದಲ್ಲಿ ಶೇಕಡ 80 ರಷ್ಟು ಜನ ಔಷದಿಗೆ ಅವಲಂಬಿತವಾಗಿ ಬದುಕುತ್ತಿದ್ದಾರೆ. ಆದುದ್ದರಿಂದ ನಾವು ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ವ್ಯಾಯಾಮ […]