ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಿ.ಸಿ ರೋಡ್ ಶಾಖೆಯ ೧೩ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಬಿ.ಸಿ ರೋಡ್ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ವಾಸು ಬಿ, ಶ್ರೀ ವೆಂಕಟರಮಣ ಎ, ಶ್ರೀ ರೊನಲ್ಡ್ ಡಿ ಸೋಜ, ಶ್ರೀ ಹುಬೆರ್ಟ್ ಲೋಬೋ ಹಾಗೂ ಶ್ರೀ ರಮೇಶ್ ಸೋಮಯಾಜಿ ಯವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.


ಸದಸ್ಯರಾದ ಶ್ರೀ ಹುಬೆರ್ಟ್ ಲೋಬೊ ಇವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಸಹಕಾರ ರಂಗದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದರಲ್ಲಿ ಸಂಘದ ಸಿಬ್ಬಂದಿಗಳ ಪಾತ್ರವು ಅತು÷್ಯತ್ತಮವಾಗಿರುವುದರಿಂದ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ” ಎಂದರು.
ಸAಘದ ಸದಸ್ಯರಾದ ಶ್ರೀ ರೊನಾಲ್ಡ್ ಡಿ ಸೋಜ ಇವರು ಮಾತನಾಡಿ “ ಸಂಘದ ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಈ ಶಾಖೆಯು ಚಿಕ್ಕದಾಗಿರುವುದರಿಂದ ವ್ಯವಹರಿಸಲು ಇಕ್ಕಟ್ಟಾಗಿರುವುದರಿಂದ ಶಾಖೆಯನ್ನು ವಿಸ್ತರಿಸಬೇಕು. ಗ್ರಾಹಕರ ಸಭೆಯನ್ನು ಮುಂದಿನ ದಿನಗಳಲ್ಲಿ ಸಭಾಂಗಣದಲ್ಲಿ ಮಾಡಿದ್ದಲ್ಲಿ ಇನ್ನೂ ಉತ್ತಮ ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, “ಸಂಘದ ಬಿ.ಸಿ ರೋಡ್ ಶಾಖೆಯು ಪ್ರಾರಂಭದಿAದಲು ಗ್ರಾಹಕರ ಸಹಕಾರದಿಂದ ಲಾಭದೊಂದಿಗೆ ಮುನ್ನಡೆಯುತ್ತಿದೆ. ಬಿ.ಸಿ ರೋಡ್ ಶಾಖೆಯಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿ ಇದ್ದು ಇಲ್ಲಿ ಸ್ಥಳದ ಕೊರತೆ ಇರುವುದರಿಂದ ಶಾಖೆಯನ್ನು ಸ್ಥಳಾಂತರಗೊಳಿಸಲು ಉತ್ತಮ ಸ್ಥಳವನ್ನು ಹುಡುಕುತ್ತಿದ್ದೇವೆ ಎಂದರು. ಸಂಘವು ಕಳೆದ ಮಾರ್ಚ್ ವರ್ಷಾಂತ್ಯಕ್ಕೆ ೧೮೨ ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ನೀಡಿದೆ. ಈಗಾಗಲೇ ಸಂಘವು ಈ ಸಾಲಿನ ಅರ್ಧ ಆರ್ಥಿಕ ವರ್ಷದಲ್ಲಿ ೧೫೩ ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ವಿತರಿಸಿದ್ದು, ಚಿನ್ನಾಭರಣ ಸಾಲ ನೀಡುವಿಕೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಚಿನ್ನಾಭರಣ ಎಲ್ಲರಿಗೂ ಅಗತ್ಯಗೆ ಇರುವಂತಹದು ಅದರ ಸೌಲಭ್ಯವನ್ನು ಕೂಡ ನಾವು ಜನರಿಗೆ ಅಶ್ರಯವಾಗುವಂತಹ ನಿಟ್ಟಿನಲ್ಲಿ ೦% ಸೇವಾಶುಲ್ಕದಲ್ಲಿ ನೀಡಿರುತ್ತೇವೆ. ಸಂಸ್ಥೆಯು ಕೇವಲ ಬ್ಯಾಂಕಿAಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಆರೋಗ್ಯ ಶಿಬಿರವನ್ನು ನಮ್ಮ ಸಂಘ ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಬಿ.ಸಿ ರೋಡ್ ಶಾಖೆಯಲ್ಲಿಯೂ ಕೂಡ ವ್ಯವಸ್ತಿತವಾದ ಆರೋಗ್ಯ ಶಿಬಿರವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀ ರಮಾನಾಥ ಸನಿಲ್, ಶ್ರೀ ಗೋಪಾಲ್ ಎಂ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಸಂಘದ ಬಿ.ಸಿ ರೋಡ್ ಶಾಖೆಯ ಸಿಬ್ಬಂದಿಯಾದ ಕುಮಾರಿ ಶ್ರಾವ್ಯ ಸ್ವಾಗತಿಸಿ, ಸಂಘದ ಸದಸ್ಯರಾದ ಶ್ರೀ ರೊನಾಲ್ಡ್ ಡಿ’ಸೋಜ ವಂದಿಸಿದರು. ಶಾಖಾಧಿಕಾರಿ ಶ್ರೀಮತಿ ಸುರಕ್ಷಾ ಸಮಿತ್ ಕಾರ್ಯಕ್ರಮ ನಿರೂಪಿಸಿದರು.