
ಸಂಘದ ಸದಸ್ಯರಾದ ಶ್ರೀ ಪ್ರವೀಣ್ ಭಂಡಾರಿ ಇವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಶಾಖೆಯ ಪ್ರಾರಂಭದಿAದಲೂ ಉತ್ತಮ ಸೇವೆಯನ್ನು ನೀಡುತ್ತಿದ್ದು, ಗ್ರಾಹಕರ ಬೇಡಿಕೆಗಳನ್ನು ಈಡೇರಿಸುತ್ತಾ ಬರುತ್ತಿದೆ” ಎಂದು ತಿಳಿಸಿದರು.
ಸದಸ್ಯರಾದ ಶ್ರೀ ರವಿ ಎಸ್ ಇವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅತೀ ಕಡಿಮೆ ಅವಧಿಯಲ್ಲಿ ೩೩ ಶಾಖೆಗಳನ್ನು ಹೊಂದಿ, ಉತ್ತಮ ಪ್ರಗತಿಯನ್ನು ಸಾಧಿಸಿರುವುದು ಶ್ಲಾಘನೀಯ. ಇನ್ನೂ ಹೆಚ್ಚಿನ ಆಭಿವೃದ್ದಿ ಹೊಂದಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, “ಸಂಘದ ಮಡಂತ್ಯಾರು ಶಾಖೆಯು ಪ್ರಾರಂಭದಿAದಲು ಲಾಭದೊಂದಿಗೆ ಮುನ್ನಡೆಯುತ್ತಿದೆ. ಶಾಖೆಯು ಗ್ರಾಹಕರಿಗೆ ವ್ಯವಹರಿಸಲು ಸೂಕ್ತವಾದ ಸ್ಥಳವಾಗಿದ್ದು, ಉತ್ತಮ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಹಿರಿಯ ನಾಗರಿಕರಿಗೆ ಅಗತ್ಯ ಸಂದರ್ಭದಲ್ಲಿ ಮನೆ ಮನೆಗೆ ಬೇಟಿ ನೀಡಿ ಸೇವೆಯನ್ನು ನೀಡುತ್ತಿದೆ. ಸಂಘವು ಕಳೆದ ಮಾರ್ಚ್ ವರ್ಷಾಂತ್ಯಕ್ಕೆ ೧೮೨ ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ನೀಡಿದೆ. ಪ್ರಸ್ತುತ ಸಂಘವು ಈ ಆರ್ಥಿಕ ವರ್ಷದಲ್ಲಿ ೨೮೫ ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ವಿತರಿಸಿದ್ದು, ಚಿನ್ನಾಭರಣ ಸಾಲ ನೀಡುವಿಕೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಚಿನ್ನಾಭರಣ ಎಲ್ಲರಿಗೂ ಅಗತ್ಯಗೆ ಇರುವಂತಹದು ಅದರ ಸೌಲಭ್ಯವನ್ನು ಕೂಡ ನಾವು ಜನರಿಗೆ ಆಶ್ರಯವಾಗುವಂತಹ ನಿಟ್ಟಿನಲ್ಲಿ ೦% ಸೇವಾಶುಲ್ಕದಲ್ಲಿ ನೀಡುತ್ತಿದ್ದೇವೆ ಹಾಗೂ ರಜಾ ದಿನಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇ-ಸ್ಟಾಂಪ್ ಸೇವೆಯನ್ನು ನೀಡುತ್ತಿದ್ದೇವೆ. ಸಂಸ್ಥೆಯು ಕೇವಲ ಬ್ಯಾಂಕಿAಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಸಂಘದ ಸದಸ್ಯರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರವನ್ನು ನಿರಂತರವಾಗಿ ನಮ್ಮ ಸಂಘ ಹಮ್ಮಿಕೊಂಡು ಬರುತ್ತಿದೆ. ಜನವರಿ ತಿಂಗಳಲ್ಲಿ ದಿನಾಂಕ ೧೮ ರಂದು ಮಡಂತ್ಯಾರು ಶಾಖೆಯಲ್ಲಿ ಆರೋಗ್ಯ ಶಿಬಿರವನ್ನು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಸಂಘದ ಮಡಂತ್ಯಾರು ಶಾಖೆಯ ಪ್ರಭಾರ ಶಾಖಾಧಿಕಾರಿ ಕುಮಾರಿ ಪ್ರಜ್ನಾ ಸ್ವಾಗತಿಸಿ, ಶಾಖೆಯ ಸಿಬ್ಬಂದಿಯಾದ ಕುಮಾರಿ ಶ್ರಾವ್ಯ ವಂದಿಸಿದರು. ಶಾಖೆಯ ಸಿಬ್ಬಂದಿಯಾದ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.