ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ವತಿಯಿಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ ಮಂಗಳೂರು ಇಲ್ಲಿಗೆ ನಿತ್ಯ ಕುಡಿಯುವ ನೀರು ಶುದ್ದೀಕರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಡುಗೆಯಾಗಿ ಕುಡಿಯುವ ನೀರು ಶುದ್ದೀಕರಣ ಯಂತ್ರವನ್ನು ಹಸ್ತಾಂತರಿಸುವ ಕಾರ್ಯಕ್ರಮವು ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಇತ್ತೀಚೆಗೆ ಜರುಗಿತು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಕುಡಿಯುವ ನೀರು ಶುದ್ದೀಕರಣ ಯಂತ್ರವನ್ನು ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಶ್ರಿ ಚಿತ್ತರಂಜನ್ ಕೆ ಇವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ರಮಾನಾಥ್ ಸನಿಲ್, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ಗೋಪಾಲ್ ಎಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಮ್ಯಾನೇಜರ್ ಶ್ರೀ ಜೆ. ಕಿಶೋರ್ ಮಜಿಲ, ಟ್ರಸ್ಟಿಗಳಾದ ಶ್ರೀ ಜಗದೀಪ್ ಡಿ. ಸುವರ್ಣ, ಶ್ರೀ ವಿಠಲ್ ಎ, ಶ್ರೀ ವಾಮನ, ಕ್ಷೇತ್ರದ ಮುಖಂಡರಾದ ಶ್ರೀ ಮೋಹನ್ ನೆಕ್ಕೆರೆಮಾರ್, ಶ್ರೀ ವಸಂತ ಪೂಜಾರಿ, ಶ್ರೀ ಪ್ರಕಾಶ್ ಗರೋಡಿ, ಅರ್ಚಕರಾದ ಶ್ರೀ ಮನೋಜ್ ಶಾಂತಿ, ಶ್ರೀ ಹರೀಶ್ ಶಾಂತಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ಗೋಪಾಲ್ ಪೂಜಾರಿ ವೀರನಗರ, ನಿಕಟಪೂರ್ವ ಮ.ನ.ಪಾ ಸದಸ್ಯರಾದ ಶ್ರೀ ಸಂದೀಪ್ ಗರೋಡಿ, ಮತ್ತಿತರರು ಹಾಜರಿದ್ದರು .
ಸಂಘವು ಕೇವಲ ಆರ್ಥಿಕ ಚಟುವಟಿಕೆಗಳಿಗಷ್ಟೆ ಸೀಮಿತವಾಗಿರದೆ ಸಮಾಜಸೇವೆಯಲ್ಲಿ ಕೂಡಾ ತನ್ನ ಸೇವಾಕಾರ್ಯವನ್ನು ವಿಸ್ತರಿಸಿಕೊಂಡಿದೆ. ಮುಖ್ಯವಾಗಿ ೯೭ಕ್ಕೂ ಮಿಕ್ಕಿ ಉಚಿತ ವೈದ್ಯಕೀಯ ಶಿಬಿರ, ೭೫೦ಕ್ಕೂ ಮಿಕ್ಕಿ ಕಣ್ಣಿನ ಶಸ್ತ್ರಚಿಕಿತ್ಸೆ, ೨೦,೦೦೦ಕ್ಕೂ ಮಿಕ್ಕಿ ಉಚಿತ ಕನ್ನಡಕ ವಿತರಣೆ, ಉಚಿತ ಔಷಧಿ ವಿತರಣೆ, ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅರ್ಹ ವಿದ್ಯಾರ್ಥಿಗಳಿಗೆ ಐ.ಎ.ಎಸ್/ ಕೆ.ಎ.ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಉಚಿತ ಪ್ರೇರಣಾ ಶಿಬಿರ ಆಯೋಜನೆ, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮಾದರಿ ಪ್ರಶ್ನೋತ್ತರಗಳನ್ನು ದಿನಪತ್ರಿಕೆಗಳ ಸಹಯೋಗದೊಂದಿಗೆ ವಿತರಣೆ, ಸಾರ್ವಜನಿಕರ ಉಪಯೋಗಕ್ಕಾಗಿ ಬಸ್ಸು ತಂಗುದಾಣ ನಿರ್ಮಾಣ, ದಶಮಾನೋತ್ಸವ ಸಂದರ್ಭದಲ್ಲಿ ಅರ್ಹ ಬಡ ಕುಟುಂಬದ ಸಂಘದ ಸದಸ್ಯರ ಮನೆ ನಿರ್ಮಾಣ, ಶಾಲೆಗಳಿಗೆ ಪಿಠೋಪಕರಣ ವಿತರಣೆ ಇತ್ಯಾದಿ ಸಮಾಜ ಮುಖಿ ಕಾರ್ಯಕ್ರಮಗಳ ಅನುಷ್ಟಾನಗೊಳಿಸಿದೆ. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ ಮಂಗಳೂರು ಇಲ್ಲಿಗೆ ಬರುವ ಭಕ್ತಾದಿಗಳಿಗೆ ನಿತ್ಯ ಕುಡಿಯುವ ಬಿಸಿ ಹಾಗೂ ತಂಪಾದ ಶುದ್ದ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕೊಡುಗೆಯಾಗಿ ಕುಡಿಯುವ ನೀರು ಶುದ್ದೀಕರಣ ಯಂತ್ರವನ್ನು ಹಸ್ತಾಂತರಗೊಳಿಸಲಾಗಿದೆ.