
ಈ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಮಡಂತ್ಯಾರು, ಇದರ ಅಧ್ಯಕ್ಷರಾದ ಶ್ರೀ ಮ್ಯಾûಕ್ಸಿಮ್ ಅಲ್ಬುಕರ್ಕ್ರವರು ಉದ್ಘಾಟಿಸಿ ಮಾತನಾಡಿ, “ಕಣ್ಣಿನ ಹಾಗೂ ದಂತದ ಪರೀಕ್ಷೆ ಕಾಲ ಕಾಲಕ್ಕೆ ಮಾಡುವುದು ಅತ್ಯಗತ್ಯ. ಇನ್ನು ಮುಂದೆಯೂ ನಿರಂತರವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಇಂತಹ ಕಾರ್ಯಕ್ರಮಗಳನ್ನು ನಡೆಸಲಿ, ಸಾರ್ವಜನಿಕರಿಗೂ ಇದರ ಉಪಯೋಗವಾಗಲಿ ಎಂದು ಹೇಳಿದರು.
ಜೆಸಿಐ ಮಡಂತ್ಯಾರು ಇದರ ಅಧ್ಯಕ್ಷರಾದ ಶ್ರೀಮತಿ ಸಾಯಿಸುಮ ಎಂ. ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ನಮ್ಮೂರ ಜನರ ಆರೋಗ್ಯದ ಸಮಸ್ಯೆಗಳಿಗೆ ಹತ್ತಿರದಲ್ಲೇ ಪರಿಹಾರ ಸಿಗಬೇಕೆನ್ನುವ ಉದ್ದೇಶದಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ” ಎಂದು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಪಿ.ಆರ್.ಒ ಶ್ರೀ ಭರತ್ ಕುಮಾರ್ ರವರು ಶಿಬಿರದಲ್ಲಿ ಲಭ್ಯವಿರುವ ದಂತ ವೈದ್ಯಕೀಯ ಸೇವೆಗಳಾದ ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು ಹಾಗೂ ಶುಚಿಗೊಳಿಸುವುದು, ರೋಗಗ್ರಸ್ಥ ಹಲ್ಲುಗಳನ್ನು ಕೀಳುವುದರ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೇವಲ ಬ್ಯಾಂಕಿAಗ್ ಮಾತ್ರವಲ್ಲದೆ, ಜನರ ಆರೋಗ್ಯದ ದೃಷ್ಟಿಯಿಂದ ಶಾಖೆಗಳ ವಾರ್ಶಿಕೋತ್ಸವದಂದು ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುತ್ತಿದೆ. ನಮ್ಮ ಆರೋಗ್ಯದ ಬಗ್ಗೆ ಮುಂಜಾಗೃತ ವಹಿಸಿದರೆ ನಮ್ಮ ಆರೋಗ್ಯ ಒಳ್ಳೆಯ ರೀತಿಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಲು ಸಹಕಾರವನ್ನು ಕೋರಿದರು. ಅದೇ ರೀತಿ ಇಂತಹ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ ದೇರಳಕಟ್ಟೆಯ ಆಡಳಿತ ವರ್ಗ, ವೈದ್ಯರು, ಸಿಬ್ಬಂದಿ ವರ್ಗ, ಕೈ ಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ, ಕಾರ್ಯಕ್ರಮವನ್ನು ನಡೆಸಲು ಸ್ಥಳಾವಕಾಶವನ್ನು ನೀಡಿರುವ ದುರ್ಗಾ ಕಾಂಪ್ಲೆಕ್ಸ್ನ ಮಾಲಿಕರಾದ ಶ್ರೀ ಎಮ್. ತಿಮ್ಮಪ್ಪ ಗೌಡ ಹಾಗೂ ಸಿಬ್ಬಂದಿ ವರ್ಗದವರಿಗೂ ಕೃತಜ್ನತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಗೋಪಾಲ್ ಎಮ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರಾದ ಡಾ. ಮಿ¥s಼À್ರ, ಡಾ. ಖಾಲಿದ್, ಡಾ. ಗಿರಿಧರ್, ಹೈಸ್ಕೂಲ್ ರಿಯೂನಿಯನ್ ಮಡಂತ್ಯಾರು ಇದರ ಕಾರ್ಯದರ್ಶಿಯಾದ ಶ್ರೀ ಸಂಪತ್ ಕುಮಾರ್ ಹಾಗೂ ಕಲಾ ಸಭಾಂಗಣ ಶ್ರೀ ದುರ್ಗಾ ಕಾಂಪ್ಲೆಕ್ಸ್ನ ಮಾಲಿಕರಾದ ಶ್ರೀ ಎಮ್ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ೧೪೦ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಉಚಿತ ನೇತ್ರ ತಪಾಸಣಾ, ದಂತ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಹಾಗೂ ಉಚಿತ ಔಷಧಿ ವಿತರಣೆಯನ್ನು ನಡೆಸಲಾಯಿತು ಹಾಗೂ ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ವಿತರಣೆ ಯನ್ನು ಮಾಡಲಾಯಿತು.
ಈ ಕಾರ್ಯಕ್ರಮವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖಾಧಿಕಾರಿ ಶ್ರೀಮತಿ ಧನಲಕ್ಷಿ÷್ಮ ಯವರು ಸ್ವಾಗತಿಸಿ, ಪ್ರಭಾರ ಶಾಖಾಧಿಕಾರಿ ಕುಮಾರಿ ಪ್ರಜ್ನ ಯವರು ವಂದಿಸಿದರು, ಶಾಖೆಯ ಸಿಬ್ಬಂದಿಯಾದ ಕುಮಾರಿ ಹರ್ಷಿತಾ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.