ಸಹಕಾರ ಕ್ಷೇತ್ರದ ವಿವಿಧ ಚಿಂತನೆಯ ಜೊತೆಗೆ ಸಾಮಾಜಿಕವಾದ ಕಾರ್ಯಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಅದ್ಭುತವಾದುದನ್ನು ಸಾಧಿಸಿ ಜನರ ಪ್ರೀತಿಗೆ ಪಾತ್ರವಾಗಿ ಯಶಸ್ವಿಯಾಗಿ ಕೆಲಸ ಮಾಡಬಹುದು ಎಂಬುದನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ತೋರಿಸಿದೆ. ಸ್ವಷ್ಟವಾದ ನಾಯಕತ್ವ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸಾಮಾಜಿಕ ಚಿಂತನೆಯ ಮನೋಭಾವ, ಪರಸ್ಪರ ಸಹಕಾರ ಇದಕ್ಕೆ ಪ್ರಮುಖ ಕಾರಣ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಶ್ರೀ ಯು.ಟಿ. ಖಾದರ್ ಹೇಳಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ಪಡೀಲಿನ ಆತ್ಮಶಕ್ತಿ ಸೌಧದಲ್ಲಿ ಭಾನುವಾರ ಉಚಿತ 100ನೇ ಆರೋಗ್ಯ ಶಿಬಿರ – ಆರೋಗ್ಯ ಸೇವಾ ಸಂಗಮದ ಅಂಗವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ ಹಾಗೂ ವೈದ್ಯರಿಗೆ, ಆರೋಗ್ಯ ಸೇವಾ ಕಾರ್ಯಕರ್ತರಿಗೆ ಅಭಿನಂದನಾ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.


ಪ್ರಜಾಪ್ರಭುತ್ವ ಎಂಬುದು ವಿಧಾನಸೌಧದಲ್ಲಿ ಮಾತ್ರ ಇರುವುದಲ್ಲ, ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಜಾರಿಯಾಗುವುದು ಸಹಕಾರಿ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಾಮಾಜಿಕ ಕೆಲಸ ಕರ‍್ಯಗಳಲ್ಲಿ ತೊಡಗಿಸಿಕೊಂಡು ಪರಸ್ಪರ ಸಹಕಾರ ಮನೋಭಾವ ತೋರಿಸಿದಾಗ ಪ್ರಜಾಪ್ರಭುತ್ವದ ಕಲ್ಪನೆಗಳು ಯಶಸ್ವಿಯಾಗುತ್ತವೆ. ಜನರ ಮಧ್ಯೆ ಕೆಲಸ ಮಾಡಿಕೊಂಡು ಉಚಿತವಾಗಿ ಆರೋಗ್ಯ ತಪಾಸಣೆಯ ಜೊತೆಗೆ ಜನರ ನಡುವೆ ಪರಸ್ಪರ ಪ್ರೀತಿ ವಿಶ್ವಾಸವನ್ನು ತುಂಬುವ ಕೆಲಸವನ್ನು ಆತ್ಮಶಕ್ತಿ ಸಹಕಾರ ಸಂಘ ಮಾಡುತ್ತಿದೆ. ರೋಗ ಬಂದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬರದಂತೆ ತಡೆಯುವ ಕೆಲಸಗಳು ಇಂತಹ ಆರೋಗ್ಯ ಶಿಬಿರಗಳ ಮೂಲಕ ನಡೆಯುತ್ತಿದೆ ಎಂದು ಶ್ಲಾಘಿಸಿದರು. ಜನರು ಇಂಥ ಸೇವಾಕರ‍್ಯಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಕರ‍್ಯಕ್ರಮವನ್ನು ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಆರೋಗ್ಯ ಸೇವೆಯ ಮೂಲಕ ಸಾಮಾನ್ಯ ಜನರಿಗೆ ನೆರವಾಗುತ್ತಿರುವುದು ಶ್ಲಾಘನೀಯ. ನಾವು ಮಾಡುವ ಸೇವಾಕರ‍್ಯವು ನಮ್ಮಲ್ಲಿರುವ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಸಮಾಜದಲ್ಲಿ ಸುಧಾರಣೆ, ಪರಿವರ್ತನೆ ತರಲೂ ಇದರಿಂದ ಸಾಧ್ಯವಿದೆ. ಆತ್ಮಶಕ್ತಿ ಸಹಕಾರ ಸಂಘದಿAದ ಇನ್ನಷ್ಟು ಉತ್ತಮ ಸೇವಕರ‍್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, “೨೦೧೨ರ ಜ.೩೦ರಂದು ಕೇಂದ್ರದ ಮಾಜಿ ಸಚಿವ ಶ್ರೀ ಬಿ. ಜನಾರ್ದನ ಪೂಜಾರಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಅಂದು ಅವರ ಆಶಯದಂತೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಮಾಜಮುಖಿಯಾಗಿ ೧೪ ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಅಲ್ಪ ಕಾಲಾವಧಿಯಲ್ಲೇ ಇಂದು ೩೩ ಶಾಖೆಗಳನ್ನು ಹೊಂದಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಕಾರಣ. ಸಾಮಾಜಿಕ ಚಟುವಟಿಕೆಯ ಭಾಗವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದು ಹೇಳಿದರು.

ವೈದ್ಯರುಗಳಾದ ಡಾ.ಮನೀಷ್ ರೈ ಹಾಗೂ ಡಾ. ಪ್ರಶಾಂತ್ ಬಿ. ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ವೈದ್ಯಕೀಯ ರಂಗದಲ್ಲಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರಾದ ಡಾ. ಲಕ್ಷ್ಮೀಕಾಂತ್ ಛಾತ್ರ, ಡಾ. ಅಣ್ಣಯ್ಯ ಕುಲಾಲ್, ಡಾ.ಸದಾನಂದ ಪೂಜಾರಿ, ಡಾ. ನಾರಾಯಣ ಟಿ. ಅಂಚನ್, ಡಾ. ರೋಷನ್ ಎಮ್. ಡಾ. ರಾಜೇಶ್ ಎಸ್. ಎಮ್., ಡಾ. ಆನಂದ ಬಂಗೇರ, ಡಾ. ವಸಂತಿ ಎ. ಬಂಗೇರ, ಡಾ. ಆಶಿತ್ ಎಮ್ ವರದರಾಜ್, ಡಾ. ಹೃಷಿಕೇಶ್ ಅಮೀನ್, ಡಾ. ಕಿರಣ್ ಕುಮಾರ್ ಪಿ.ಕೆ, ಡಾ. ಇಮ್ರಾನ್ ಪಾಷಾ, ಡಾ. ಶರತ್ ಕುಮಾರ್ ರಾವ್ ಜೆ. ಡಾ. ಸುಚಿತ್ರಾ ಕೆ. ರಾವ್, ಡಾ. ದೇವದಾಸ್ ಕೆ. ಪುತ್ರನ್, ಡಾ. ಬದ್ರಿನಾಥ್ ತಲ್ವಾರ್, ಡಾ. ರಮ್ಯ ಶೆಣೈ, ಡಾ. ಅಶ್ವಿನಿ ಶೆಟ್ಟಿ, ಡಾ. ಸದಾನಂದ ಎಲ್ ಭಟ್, ಡಾ. ಸುಷ್ಮಾ ಎಸ್ ಭಟ್, ಡಾ. ಅಪೂರ್ವ ಕೊಟ್ಯಾನ್ ಮುಂತಾದ ೨೫ ವೈದ್ಯರನ್ನು ಸನ್ಮಾನಿಸಲಾಯಿತು.

ಸಂಘವು ನಡೆಸಿರುವ ೧೦೦ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿರುವ ೯೦ ಸಂಘ- ಸಂಸ್ಥೆಗಳನ್ನು ಹಾಗೂ ೧೦ ವೈದ್ಯಕೀಯ ಸಂಸ್ಥೆ ಮತ್ತು ಮಾದ್ಯಮದವರನ್ನು ಗೌರವಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೂರಿಂಜೆ, ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಅಧೀಕ್ಷಕ ಡಾ| ಶಿವಪ್ರಕಾಶ್ ಡಿ.ಎಸ್., ಐಎಂಎ ರಾಜ್ಯ ಉಪಾಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಮಾಜಿ ಮೇಯರ್ ಶ್ರೀ ಶಶಿಧರ ಹೆಗ್ಡೆ, ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಅಧ್ಯಕ್ಷ ಡಾ| ಆನಂದ ಬಂಗೇರ, ಐಎಂಎ ಮಂಗಳೂರು ಅಧ್ಯಕ್ಷ ಡಾ| ಸದಾನಂದ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಶ್ರೀಮತಿ ಪ್ರತಿಭಾ ಕುಳಾಯಿ, ಆರಕ್ಷಕ ಅಧೀಕ್ಷಕ ಶ್ರೀ ಕುಮಾರಚಂದ್ರ, ಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷ ಶ್ರೀ ಸುರೇಶ್ ಅಮೀನ್, ಆತ್ಮಶಕ್ತಿ ಸಹಕಾರ ಸಂಘದ ನಿರ್ದೇಶಕರಾದ ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸೀತಾರಾಮ ಎನ್., ಶ್ರೀ ರಮಾನಾಥ ಸನಿಲ್, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ದಿವಾಕರ್ ಬಿ.ಪಿ., ಶ್ರೀ ಗೋಪಾಲ್ ಎಂ., ಶ್ರೀಮತಿ ಚಂದ್ರಾವತಿ, ಶ್ರೀಮತಿ ಉಮಾವತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯಾ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.

ಈ ಶಿಬಿರವು ಸಂಘದ ೧೦೦ನೇ ಶಿಬಿರವಾಗಿದ್ದು, ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ, ಎನ್.ಜಿ.ವಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ಹಾಗೂ ಮಡಿಲು ಸೇವಾ ತಂಡ ಪಡೀಲ್ , ಮಂಗಳೂರು ಇವರುಗಳ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಬೆಳಗ್ಗೆ ೯.೩೦ರಿಂದ ಮಧ್ಯಾಹ್ನದ ತನಕ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಈ ಶಿಬಿರವನ್ನು ಯೆನಪೊಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸಮುದಾಯ ದಂತ ಆರೋಗ್ಯ ವಿಭಾಗ, ದೇರಳಕಟ್ಟೆ, ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ನಾಟೆಕಲ್, ಮಂಗಳೂರು, ಪ್ರಾದೇಶಿಕ ರಕ್ತ ಪೂರಣ ಕೇಂದ್ರ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು, ಬಸವ ಆಕ್ಯೂ ಅಕಾಡೆಮಿ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ನಡೆಸಲಾಯಿತು. ವಿಶೇಷ ತಜ್ಞ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಸ್ತನ ಪರೀಕ್ಷೆ, ಗರ್ಭ ಕಂಠ ತಪಾಸಣೆ, ಯುರೋಪ್ಲೆಮೆಂಟ್ರಿ ಪರೀಕ್ಷೆ, ಆಯುರ್ವೇದ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣೆ, ದಂತಾ ಚಿಕಿತ್ಸಾ , ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ, ಮಧುಮೇಹ ತಪಾಸಣೆ, ಕೀಲು ಗಂಟು ನೋವು ತಪಾಸಣೆ ಸಹಿತ ವಿವಿಧ ಪರೀಕ್ಷೆಗಳು, ಕಲರ್ ಥೇರಪಿ, ನಡೆಯಿತು. ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಚಿತ್ತರಂಜನ್ ಬೋಳಾರ್ ರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ರವರು ವಂದಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ನ ಜೊತೆ ಕಾರ್ಯದರ್ಶಿ ಶ್ರೀ ವಿಶ್ವನಾಥ ರೆಂಜಾಳ ಹಾಗೂ ಸಂಘದ ಶಾಖಾಧಿಕಾರಿ ಶ್ರೀಮತಿ ಧನಲಕ್ಷಿ÷್ಮ ರವರು ಕರ‍್ಯಕ್ರಮ ನಿರೂಪಿಸಿದರು.