ಕರ್ನಾಟಕ ಸರಕಾರದ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಬಿ ರಮಾನಾಥ ರೈ ಯವರು ನವೀಕೃತ, ವಿಸ್ತöÈತ ಹಾಗೂ ಹವಾನಿಯಂತ್ರಿತ ಬಿ.ಸಿ ರೋಡ್ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಆತ್ಮ ಶಕ್ತಿ ಸಂಘವು ಮಂಗಳೂರಿನ ಪಡೀಲ್ ನಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು, ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ೩೩ ಶಾಖೆಗಳನ್ನು ಹೊಂದಿದ್ದು, ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿರುವ ಸಂಘವಾಗಿದೆ. ಇವತ್ತಿನ ಸಮಾರಂಭದಲ್ಲಿ ವೇದಿಕೆಯಲ್ಲಿ ಇರುವ ಹೆಚ್ಚಿನ ಅತಿಥಿ ಗಣ್ಯರು ಸಹಕಾರಿಗಳೇ ಆಗಿದ್ದು, ಈ ಕಾರ್ಯಕ್ರಮವು ಸಹಕಾರಿ ಸಂಘಗಳ ಸೌಹರ್ದತೆಗೆ ಉತ್ತಮ ಉದಾಹರಣೆಯಾಗಿದೆ. ನೂತನ ಶಾಖೆಯಲ್ಲಿ ಗ್ರಾಹಕರಿಗೆ ಇನ್ನಷ್ಟು ಸೌಲಭಗಳು ದೊರೆಯಲಿ” ಎಂದು ಶುಭ ಹಾರೈಸಿದರು.
ದೇಯಿ ಬೈದೈತಿ – ಕೋಟಿ ಚೆನ್ನಯ ಮೂಲಸ್ಥಾನ ಅಭಿವೃಧಿ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ರವರು ಭದ್ರತಾ ಕೋಶವನ್ನು ಉದ್ಘಾಟಿಸಿ ಮಾತನಾಡಿ, “ಆತ್ಮಶಕ್ತಿ ಸಂಘವು ಕೇವಲ ಹದಿನಾಲ್ಕು ವರ್ಷಗಳಲ್ಲಿ ಉತ್ತಮ ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಸಹಕಾರಿ ರಂಗದಲ್ಲಿ ಮಾಡಿರುವ ಸಾಧನೆಗಳು ಶ್ಲಾಘನೀಯ. ಆತ್ಮಶಕ್ತಿ ಸಂಘವು ಇತರ ಸಹಕಾರಿ ಸಂಘ – ಸಂಸ್ಥೆಗಳಿಗೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಯೊನಿಕ್ಸ್ನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಬಂಟ್ವಾಳರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಜನಸಾಮಾನ್ಯರಿಗೆ ಬ್ಯಾಂಕಿAಗ್ ವ್ಯವಸ್ಥೆಯಲ್ಲಿ ಆರ್ಥಿಕ ಶಕ್ತಿಯನ್ನು ತುಂಬುವ ಹಿನ್ನೆಲೆಯಲ್ಲಿ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ. ಸಂಘವು ತನ್ನ ಕಾರ್ಯವೈಖರಿಯಿಂದ ಜಿಲ್ಲೆಯಾದ್ಯಾಂತ ತುಂಬಾ ಉತ್ತಮ ಹೆಸರನ್ನು ಮಾಡಿದೆ. ಸಂಸ್ಥೆ ಇನ್ನಷ್ಟೂ ಜನಸಾಮಾನ್ಯರ ಆರ್ಥಿಕ ಶಕ್ತಿಯನ್ನು ಈಡೇರಿಸುವ ಶಕ್ತಿಯಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬೇಬಿ ಕುಂದರ್ ರವರು ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಸೇವೆಯ ಮುಖಾಂತರ ಜನರಿಗೆ ಶಕ್ತಿಯನ್ನು ನೀಡುತ್ತಿರುವ ಸಂಘವಾಗಿದೆ. ರಾಷ್ಟಿçÃಕೃತ ಬ್ಯಾಂಕುಗಳಿಗೆ ಸರಿಸಮನಾಗಿ ಸೇವೆ ನೀಡುತ್ತಿದೆ. ಸಂಘದ ಅಭಿವೃದ್ದಿಯಲ್ಲಿ ಸಂಘದ ಸಿಬ್ಬಂದಿಗಳ ಪಾತ್ರವು ತುಂಬಾ ಮುಖ್ಯವಾಗಿದೆ” ಎಂದರು.
ಸುಮAಗಳ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ ಲಿ. ಪಾಣೆಮಂಗಳೂರು. ಇದರ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನಾಗೇಶ್ ಕಲ್ಲಡ್ಕ ರವರು ಮಾತನಾಡಿ “ಒಳ್ಳೆಯ ಕಾರ್ಯ ನಿರ್ವಹಣೆ ಹಾಗೂ ತಾಂತ್ರಿಕ ವ್ಯವಸ್ಥೆ ಇದ್ದರೆ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉತ್ತಮ ಉದಾಹರಣೆಯಾಗಿದೆ. ಸಹಕಾರಿಗಳಾದ ನಾವೆಲ್ಲರೂ ಒಟ್ಟಿಗೆ ಯಾವುದೇ ಪೈಪೋಟಿ ಇಲ್ಲದೇ ಸಹಕಾರಿ ರಂಗದಲ್ಲಿ ವ್ಯವಹಾರ ಮಾಡುತ್ತಿದ್ದು, ನಮ್ಮ ಸಂಘಗಳ ನಿಯಮಗಳನ್ನು ಒಪ್ಪಿಕೊಂಡವರು ನಮ್ಮಲ್ಲಿ ವ್ಯವಹಾರ ಮಾಡುತ್ತಾರೆ” ಎಂದರು.
ಬಂಟ್ವಾಳ ಕ್ಯಾಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ.) ಬಿ.ಸಿ ರೋಡ್ ಇದರ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜೀವನ್ ಲಾಯ್ಡ್ ಪಿಂಟೋ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪಾದರಸದಂತೆ ಒಂದು ಚುರುಕಾದ ಸಂಸ್ಥೆಯಾಗಿದ್ದು, ಕೇವಲ ಹದಿನಾಲ್ಕು ವರ್ಷಗಳಲ್ಲಿ ೩೧೦ ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿದೆ. ಗ್ರಾಹಕರಿಗೆ ಇನ್ನೂ ಉತ್ತಮ ಸೇವೆಯನ್ನು ನೀಡುತ್ತಾ ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಖೆಯನ್ನು ತೆರೆಯುವಂತಾಗಲಿ” ಎಂದು ಶುಭ ಹಾರೈಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೊಳಾರ್ ರವರು ಮಾತನಾಡಿ, ಬಿ.ಸಿ ರೋಡ್ ಶಾಖೆಯು ಸಂಘದ ಸದಸ್ಯರ ಅಪೇಕ್ಷೆಯಂತೆ ವಿಸ್ತಾರಗೊಂಡು ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಯಾಗಿ ಪರಿವರ್ತನೆ ಮಾಡಲಾಗಿದೆ. ೨೦೧೨ರಲ್ಲಿ ಬಿಸಿರೋಡ್ ಶಾಖೆಯ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಬಿ ರಮಾನಾಥ ರೈ ಯವರು ನೇರವೆರಿಸಿದ್ದು, ಇದೀಗ ನವೀಕೃತ, ವಿಸ್ತöÈತ ಹಾಗೂ ಹವಾನಿಯಂತ್ರಿತ ಬಿ.ಸಿ ರೋಡ್ ಶಾಖೆಯನ್ನು ಕೂಡ ಶ್ರೀಯುತರೇ ನೆರೆವೆರಿಸಿದ್ದು ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ನೂತನ ಶಾಖೆಯ ಉದ್ಘಾಟನಾ ಪ್ರಯುಕ್ತ ೧೦೦ ದಿನಗಳ ಠೇವಣಿಗಳಿಗೆÂ ವಿಶೇಷ ಬಡ್ಡಿ ದರ ಶೇ. ೮.೫೦, ೫೦೦ ದಿನಗಳ ಠೇವಣಿಗಳಿಗೆÂ ವಿಶೇಷ ಬಡ್ಡಿ ದರ ಶೇ. ೧೦.೦೦ ಹಾಗೂ ೧೦೦೦ ದಿನಗಳ ಠೇವಣಿಗಳಿಗೆÂ ವಿಶೇಷ ಬಡ್ಡಿ ದರ ಶೇ. ೧೦.೫೦ ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. ೧೨,೦೦೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು. ಎಂದು ಹೇಳಿದರು.
ಈ ಸಮಾರಂಭದಲ್ಲಿ ಬಿಸಿರೋಡ್ ಶಾಖೆ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಸದಸ್ಯರನ್ನು ಗೌರವಿಸಲಾಯಿತು.
ಈ ಸಮಾರಂಭದಲ್ಲಿ ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಂಟ್ವಾಳ. ಇದರ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸುಭಾಷ್ಚಂದ್ರ ಜೈನ್ ರವರು, ಕಾವಳಮೂಡುರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಅಂಚನ್, ಬಿ.ಸಿ ರೋಡ್ ಶಾಖೆಯ ಕಟ್ಟಡ ಮಾಲಿಕರಾದ ಸನ್ಮಾನ್ಯ ಶ್ರೀ ವಿಶ್ವನಾಥ ಪೂಜಾರಿ, ಮತ್ತಿತ್ತರರು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಆನಂದ್ ಎಸ್. ಕೊಂಡಾಣ, ಶ್ರೀ ಸೀತಾರಾಮ್ ಎನ್, ಶ್ರೀ ಮುದ್ದು ಮೂಡಬೆಳ್ಳೆ, ಶ್ರೀ ಗೋಪಾಲ್ ಎಮ್. ಶ್ರೀಮತಿ ಚಂದ್ರಾವತಿ ಮತ್ತಿತ್ತರರು ಪಾಲ್ಗೊಂಡಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ ರವರು ವಂದಿಸಿದರು.
ಸಹಾಯಕ ಪ್ರಭಂದಕರಾದ ಶ್ರೀ ವಿಶ್ವನಾಥ್ ಹಾಗೂ ಶಾಖಾಧಿಕಾರಿ ಶ್ರೀಮತಿ ಸುರಕ್ಷಾ ಡಿ. ರವರು ಕಾರ್ಯಕ್ರಮವನ್ನು ನಿರೂಪಿಸಿದರು.