ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬೆಂದೂರ್ವೆಲ್ ಮಂಗಳೂರು, ಮತ್ತು ಕಣಚೂರು ಮೆಡಿಕಲ್ ಕಾಲೇಜ್, ಹಾಸ್ಪಿಟಲ್ & ರಿಸರ್ಚ್ ಸೆಂಟರ್ ನಾಟೆಕಲ್ ಇವರ ಆಶ್ರಯದಲ್ಲಿ ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ಮಂಜನಾಡಿ ಗ್ರಾಮ ಪಂಚಾಯತ್ ಇವರ ಸಹಯೋಗದೊಂದಿಗೆ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಅಭಿಯಾನವನ್ನು ಆಯೋಜಿಸಲಾಯಿತು. ಈ ಸ್ವಚ್ಚತಾ ಅಭಿಯಾನದ ಅಧ್ಯಕ್ಷತೆಯನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ವಹಿಸಿದರು. ಅವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಹಕಾರಿ ಸೇವೆಯ ಜೊತೆಗೆ ಸಾಮಾಜಿಕ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು ಈಗಾಗಲೇ 25ಕ್ಕೂ ಮಿಕ್ಕಿ ಉಚಿತ ವೈದ್ಯಕೀಯ ಶಿಬಿರವನ್ನು ಮಾಡಿರುವುದಾಗಿ ಹಾಗೂ ಪ್ರತಿಯೊಂದು ನೂತನ ಶಾಖೆಗಳನ್ನು ತೆರೆದಾಗ ಮೊದಲ ಆದ್ಯತೆ ಸ್ವಚ್ಚತಾ ಕಾರ್ಯಕ್ರಮಕ್ಕೆ ನೀಡುತ್ತಾ ಬಂದಿರುತ್ತೇವೆ.ನಮ್ಮ ಮನೆ ಸ್ವಚ್ಚವಾಗಿದ್ದರೆ ಪರಿಸರವು ಸ್ವಚ್ಚವಾಗಿರುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಅಬ್ದುಲ್ ರೆಹಮಾನ್, ಎಮ್.ಡಿ., ಕಣಚೂರು ಮೆಡಿಕಲ್ ಕಾಲೇಜ್, ಹಾಸ್ಪಿಟಲ್ & ರಿಸರ್ಚ್ ಸೆಂಟರ್ ರವರು ಮಾತಾನಾಡಿ ನಮ್ಮ ಪರಿಸರವನ್ನು ಶುಚಿಗೊಳಿಸುವುದರ ಮೂಲಕ ರೋಗ ಮುಕ್ತ ಸಮಾಜವನ್ನಾಗಿ ಮಾಡಬೇಕು, ಸಮಾಜದ ಬಾಂಧವರೆಲ್ಲ ಒಟ್ಟು ಸೇರಿ ನಮ್ಮ ಪರಿಸರವನ್ನು ಶುಚಿಗೊಳಿಸುವುದರ ಮೂಲಕ ನಮ್ಮ ಆರೋಗ್ಯದ ರಕ್ಷಣೆ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹಮ್ಮದ್ ರವರು ಮಾತಾನಾಡಿ ಸ್ವಚ್ಚತೆಯ ಬಗ್ಗೆ ಆದ್ಯತೆ ಮನೆಯ ಹಾಗೆ ಪರಿಸರಕ್ಕೆ ಕೊಡಬೇಕು, ಎಲ್ಲಾ ಗ್ರಾಮ ಕೈ ಜೋಡಿಸಿದರೆ ಗ್ರಾಮವು ಸ್ವಚ್ಚವಾಗಿರುತ್ತದೆ ಎಂದರು. ಕಣಚೂರು ಆಸ್ಪತ್ರೆಯ ವೈದ್ಯರಾದ ಡಾ. ಸತೀಶ್ ಮೋರೆ ಇವರು ಸಂದರ್ಭೋಚಿತವಾಗಿ ಮಾತಾನಾಡಿ ಸಾರ್ವಜನಿಕ ಸೇವೆಗೆ ಸದಾ ಬದ್ಧರಾಗಿದ್ದಲ್ಲಿ ಕಮ್ಯೂನಿಟ್ ಹೆಲ್ತ್ ಸೆಂಟರ್ ನ ಮೂಲಕ ಸ್ವಚ್ಚತಾಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ತಿಳಿಸಿದರು, ಈ ಕಾರ್ಯಕ್ರಮದಲ್ಲಿ ಶ್ರೀ ಹನೀಪ್ ಅಧ್ಯಕ್ಷರು, ವರ್ತಕರ ಸಂಘ ನಾಟೆಕಲ್, ಶ್ರೀ ಉಮ್ಮರ್ ಕುನ್ಹಿ ,ಅಧ್ಯಕ್ಷರು, ನಾಟೆಕಲ್ ರಿಕ್ಷಾ ಪಾರ್ಕ್, ಶ್ರೀ ಹನೀಪ್, ಮಾಜಿ ನಿರ್ದೇಶಕರು, ಮ್ಯಕೋ ಕೋ-ಆಪ್ರೇಟಿವ್ ಸೊಸೈಟಿ ಮಂಗಳೂರು, ಶ್ರೀ ಅಬ್ಬಾಸ್, ಸದಸ್ಯರು, ಮಂಜನಾಡಿ ಗ್ರಾಮ ಪಂಚಾಯತ್, ಶ್ರೀಮತಿ ಪ್ರೇಮ, ಸದಸ್ಯರು, ಮಂಜನಾಡಿ ಗ್ರಾಮ ಪಂಚಾಯತ್, ಶ್ರೀ ಸತೀಶ್ ಕುಂಪಲ, ಮಾಜಿ ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್ , ಶ್ರೀ ಚಂದ್ರಶೇಖರ್ ಉಚ್ಚಿಲ್ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರು, ವಿದ್ಯಾರತ್ನ ಎಜುಕೇಶನ್ ಟ್ರಸ್ಟ್(ರಿ.) ದೇರಳಕಟ್ಟೆ ಇದರ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೋಟ್ಟು ಹಾಗೂ ಮಂಜನಾಡಿ ಗ್ರಾಮ ಪಂಚಾಯತ್ ಶ್ರೀ ಇಸ್ಮಾಯಿಲ್ ಬಾವ , ಶ್ರೀ ಹಸೈನರ್, ಶ್ರೀ ಕೆ. ಪಿ. ಆಸ್ರಫ್, ಶ್ರೀ ಕುಂಞ ಬಾವ್, ಶ್ರೀಮತಿ ಸೀತಾ ವಿ ನಾಯಕ್ , ಶ್ರೀಮತಿ ಕೌಶರ್ ಬಾನು ಇವರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರುಗಳಾದ ಶ್ರೀ ವಾಮನ್ ಕೆ. ,ಶ್ರೀ ರಾಮದಾಸ್ ಮರೋಳಿ, ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸುರೇಶ್ ಪೂಜಾರಿ, ಶ್ರೀ ರಾಮನಾಥ್ ಸನಿಲ್, ಶ್ರೀ ಚಂದ್ರಹಾಸ್ ಮರೋಳಿ, ಶ್ರೀಮತಿ ಸುಜಯ ಹೇಮಚಂದ್ರ ಮತ್ತು ಶ್ರೀಮತಿ ಕುಶಾಲಾಕ್ಷಿ ಯಶವಂತ್ , ಸಂಘದ ಸಲಹಾ ಸಮಿತಿ ಸದಸ್ಯರಾದ ಶ್ರೀ ಗೋಪಾಲ್ ಎಮ್. , ಶ್ರೀ ಬಾಬು ಎಸ್ ಕರ್ಕೇರ, ಶ್ರೀ ಸದಾನಂದ ಹಾಗೂ ಶ್ರೀ ಪರುಷೋತ್ತಮ ಅಡ್ಕ, ಹಾಗೂ ಮತ್ತು ಸಿಬ್ಬಂದಿ ವರ್ಗ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಯುವ ಸಂಚಲನ (ರಿ.)ಬೆಳರಿಂಗೆ ಇದರ ಪದಾಧಿಕಾರಿಗಳು ಹಾಗೂ ಕಣಚೂರು ಮೆಡಿಕಲ್ ಕಾಲೇಜ್, ಹಾಸ್ಪಿಟಲ್ & ರಿಸರ್ಚ್ ಸೆಂಟರ್ ನಾಟೆಕಲ್ನ ವಿದ್ಯಾರ್ಥಿಗಳು ಹಾಗೂ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 250 ಮಿಕ್ಕಿ ಸಾರ್ವಜನಿಕರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮಂಜನಾಡಿ ಗ್ರಾಮ ಪಂಚಾಯತ್ನ ಪಿಡಿಓ ಆದ ಶ್ರೀ ಮಂಜಪ್ಪ ಎಚ್.ಎಚ್ ನವರು ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ನಿರೂಪಿಸಿದರು.ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರಿ ನೇಮಿರಾಜ್ ಪಿ. ವಂದಿಸಿದರು.