ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ 4ನೇ ವಾರ್ಷಿಕೋತ್ಸವ ಮತ್ತು ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 19 ರಂದು ಜರುಗಿತು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ 4ನೇ ವಾರ್ಷಿಕೋತ್ಸವ ಮತ್ತು ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 19 ರಂದು ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಗ್ರಾಹಕರಾದ ಶ್ರೀ ಭಾಸ್ಕರ್ ಪೈ ಮತ್ತು ಶ್ರೀ ರಘುಚಂದ್ರ ಬಳ್ಳಾಲ್ ರವರು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿ ಸಂಘದ ಎಲ್ಲಾ ಸಿಬ್ಬಂದಿಗಳು ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ನೀಡಿತ್ತಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಸದಸ್ಯರಾದ ಶ್ರೀ ರೋನಲ್ಡ್ ಜೋಸೆಫ್ ಸಲ್ದಾನ್ಹ ಮಾತನಾಡಿ ಸಂಘವು ಗ್ರಾಹಕರಿಗೆ ತ್ವರಿತಗತಿಯಲ್ಲಿ ಡಿ.ಸಿ ಆಫೀಸ್ ನ ಹತ್ತಿರದ ಶಾಖೆಯಲ್ಲಿ ಸಂಜೆ 7 ಗಂಟೆಯವರೆಗೂ ಇ-ಸ್ಟ್ಯಾಂಪ್ ಸೇವೆ ನೀಡುತ್ತಿರುವ ಬಗ್ಗೆ ಶ್ಲಾಘಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘವು ಮಾಡಿರುವ ಸಾಧನೆ ಹಾಗೂ ಸಂಘವು ತಮ್ಮ ಗ್ರಾಹಕರಿಗೆ ನಿರಂತರವಾಗಿ ಆಯ್ದ ಸರಕಾರಿ ರಜಾ ದಿನಗಳಲ್ಲೂ ಇ-ಸ್ಟ್ಯಾಂಪ್ ಸೇವೆಯನ್ನು ನೀಡುತಿದ್ದು, ಸಂಘದ ಸದಸ್ಯರ ಅನುಕೂಲಕ್ಕಾಗಿ ವೇಗವಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯಗಳಾದ ಆರ್.ಟಿ.ಜಿ.ಎಸ್, ನೆಫ್ಟ್ ಸೇವೆಯನ್ನು ಸತತವಾಗಿ ನೀಡುತ್ತಾ ಬಂದಿದೆ. ಅಲ್ಲದೆ ಎಲ್‍ಐಸಿ, ರೆಲಿಗೇರ್ ಹೆಲ್ತ್ ಇನ್ಸುರೆನ್ಸ್, ಐಸಿಐಸಿಐ ಲಾಂಬರ್ಡ್ ಜನರಲ್ ಇನ್ಸುರೆನ್ ಕಂಪೆನಿಗಳ ವಿಮಾ ಸೌಲಭ್ಯಗಳು ಅಲ್ಲದೆ ಇದೀಗ ಗ್ರಾಹಕರಿಗೆ ತ್ವರಿತಗತಿಯಲ್ಲಿ ಡೀಜಿಟಲ್ ಡಿಡಿಯನ್ನು ನೀಡುವ ವ್ಯವಸ್ಥೆಯನ್ನೂ ಕೂಡಾ ಪ್ರಾರಂಬಿಸಲಾಗಿದೆ. ಈ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ವಾಮನ್.ಕೆ, ಶ್ರೀ ಆನಂದ ಎಸ್ ಕೊಂಡಾಣ, ಶ್ರೀಮತಿ ಸುಜಯ ಹೇಮಚಂದ್ರ, ಶ್ರೀಮತಿ ಕುಶಲಾಕ್ಷಿ ಯಶವಂತ್, ಸಲಹಾ ಸಮಿತಿ ಸದಸ್ಯರಾದ ಶ್ರೀ ಚಂದ್ರೇಶ್ ಹಾಗೂ ಶ್ರೀ ಸದಾನಂದ ಸುವರ್ಣರವರು ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ ಶಾಖಾಧಿಕಾರಿ ಶ್ರೀಮತಿ ನಮಿತ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ವಂದಿಸಿದರು.