ಸಂಘದ ಸದಸ್ಯರಾದ ಶ್ರೀ ಸದಾಶಿವ ಪೂಜಾರಿ ಮತ್ತು ಶ್ರೀ ಮೋಹನ್ದಾಸ್ ಕೆ ಮಾತನಾಡಿ ಸಂಘವು ನೀಡುತ್ತಿರುವ ಸೇವೆಗೆ ಮತ್ತು ಸಿಬ್ಬಂದಿಗಳು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಸದಸ್ಯರಾದ ಶ್ರೀಮತಿ ಜಯಕುಮಾರಿ ಮಾತನಾಡಿ ಸಂಘವು ಹೆಚ್ಚು ಶಾಖೆಗಳನ್ನು ತೆರೆದು ಗ್ರಾಹಕರಿಗೆ ಇನ್ನೂ ಉತ್ತಮ ರೀತಿಯ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಸಂಘ ಮಾಡಿರುವ ಸಾಧನೆ ಮತ್ತು ಸರ್ವತೋಮುಖ ಪ್ರಗತಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸತತ 4 ವರ್ಷಗಳಿಂದ “ಸಾಧನ ಪ್ರಶಸ್ತಿ”, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಇವರಿಂದ ಇ-ಸ್ಟಾಂಪ್ ಸೇವೆಗೆ ಸತತ 7 ವರ್ಷಗಳಿಂದ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ, ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸತತ ಮೂರು ಬಾರಿ “ರಾಜ್ಯ ಪ್ರಶಸ್ತಿ” ಮತ್ತು “ಎಕ್ಸ್ಲೆನ್ಸ್ ಇನ್ ಬೆಸ್ಟ್ ಕೋ-ಆಪರೇಟಿವ್ ಸೊಸೈಟಿ” ರಾಷ್ಟ್ರಿಯ ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಸಂಘದ ಸದಸ್ಯರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯಗಳಾದ ಆರ್ಟಿಜಿಎಸ್, ನೆಫ್ಟ್, ಡಿಡಿ , ವೆಸ್ಟರ್ನ್ ಯೂನಿಯನ್ ,ಎಲ್ಐಸಿ, ರೆಲಿಗೇರ್ ಹೆಲ್ತ್ ಇನ್ಸೂರೆನ್ಸ್ ,ಆರೋಗ್ಯ ಕಾರ್ಡ್, ಬಸ್ ಟಿಕೇಟ್ ಬುಕ್ಕಿಂಗ್, ಐಸಿಐಸಿಐ ಲಾಂಬರ್ಡ್ ಜನರಲ್ ಇನ್ಸುರೆನ್ ಕಂಪೆನಿಗಳ ವಿಮಾ ಸೌಲಭ್ಯಗಳು ಅಲ್ಲದೆ ಇದೀಗ ಗ್ರಾಹಕರಿಗೆ ತ್ವರಿತಗತಿಯಲ್ಲಿ ಡಿಜಿಟಲ್ ಡಿಡಿಯನ್ನು ನೀಡುವ ವ್ಯವಸ್ಥೆಯನ್ನೂ ಕೂಡಾ ಪ್ರಾರಂಭಿಸಲಾಗಿದ್ದು ಇದರ ಸದುಪಯೋಗ ಪಡೆಯಲು ಗ್ರಾಹಕರಲ್ಲಿ ವಿನಂತಿಸಿದರು. ಮಂಗಳೂರಿನ ಪಡೀಲ್ನಲ್ಲಿ ನೂತನ ಪ್ರಧಾನ ಕಛೇರಿಗೆ ನಿವೇಶನ ಖರೀದಿಸಿದ್ದು ಮತ್ತು ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣವನ್ನು ಮಾಡಲಾಗುವುದು” ಎಂದು ಗ್ರಾಹಕರಿಗೆ ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ವಾಮನ್ ಕೆ., ಶ್ರೀ ರಾಮ್ದಾಸ್ ಮರೋಳಿ, ಶ್ರೀ ಜಿ.ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್ ಕೊಂಡಾಣ , ಶ್ರೀ ರಮನಾಥ್ ಸನಿಲ್, ಶ್ರೀ ಚಂದ್ರಹಾಸ್ ಮರೋಳಿ, ಶ್ರೀಮತಿ ಸುಜಯ ಹೇಮಚಂದ್ರ, ಶ್ರೀ ಕುಶಲಾಕ್ಷಿ ಯಶವಂತ್ ಮತ್ತು ಸಲಹಾ ಸಮಿತಿ ಸದಸ್ಯರಾದ ಶ್ರೀ ಚಂದ್ರೇಶ್ ಹಾಗೂ ಶ್ರೀ ಬಿ.ಪಿ ದಿವಾಕರ್ ಉಪಸ್ಥಿತರಿದ್ದರು. ಸಂಘದ ಶಾಖಾಧಿಕಾರಿ ಕುಮಾರಿ ಶ್ವೇತಾ.ಎಮ್ ಸ್ವಾಗತಿಸಿ , ಮುಖ್ಯಕಾರ್ಯನೀರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ವಂದಿಸಿದರು.