ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಮುಲ್ಕಿ ಶಾಖೆ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮುಲ್ಕಿ ಇವರ ಜಂಟಿ ಸಹಯೋಗದೊಂದಿಗೆ ಮಾತಾ ಅಮೃತಾನಂದಮಯಿ ಮಠ, ಬೋಳೂರು ಹಾಗೂ ಸಮುದಾಯ ದಂತ ವಿಭಾಗ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಮತ್ತು ಆಸ್ಪತ್ರೆ ಅತ್ತಾವರ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿಯ ನುರಿತ ವೈದ್ಯರ ತಂಡದವರಿOದ ಉಚಿತ ವೈದ್ಯಕೀಯ ತಪಾಸಣಾ, ದಂತ ಚಿಕಿತ್ಸಾ ಮತ್ತು ಕಣ್ಣಿನ ತಪಾಸಣೆ ಶಿಬಿರವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಮುಲ್ಕಿಯ ನಾಗರಾಜ್ ಟವರ್ಸ್, ಬಿಲ್ಲವ ಸಮಾಜ ಸೇವಾ ಸಂಘದ ಎದುರುಗಡೆ ಜರುಗಿತು.

ಸಂಘದ ಹಿರಿಯ ಸದಸ್ಯರು ಹಾಗೂ ಮಾರ್ಗದರ್ಶಕರಾದ ಡಾ. ಹರೀಶ್ಚಂದ್ರ ಪಿ. ಸಾಲ್ಯಾನ್ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಹಲವಾರು ಬಡ ಜನರಿಗೆ ಸಹಾಯವಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂಸ್ಥೆಯು ವಿವಿಧ ಜನೋಪಯೋಗಿ ಕಾರ್ಯಕ್ರಮಗಳಿಂದ ಇನ್ನೂ ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.
ಲಯನ್ಸ್ ಕ್ಲಬ್ ಮುಲ್ಕಿ ಇದರ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಹೆಬ್ಬಾರ್ ಇವರು ಮಾತನಾಡಿ ಹೆಚ್ಚಿನ ಜನರು ಉಚಿತ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿ ಸಂಘದ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ, ನಮ್ಮ ಸಂಘವು ಇಂದು 29ನೇ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದು, ಈ ಶಿಬಿರದ ಮೂಲಕ ವೈದ್ಯಕೀಯ ಸೇವೆ ನೀಡುತ್ತಿರುವ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಸೇವಾ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಆಯುಷ್ಮಾನ್ ಭಾರತ ಮುಂತಾದ ಸರಕಾರದ ವೈದ್ಯಕೀಯ ಸೌಲಭ್ಯದ ಸೇವೆಯನ್ನೂ ಕೂಡ ಆಯೋಜಿಸುವುದರ ಮೂಲಕ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುವುದು. ಸಹಕಾರಿ ಸಂಘದಿoದ ದೊರೆಯುವ ವಿವಿಧ ಸೌಲಭ್ಯಗಳನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಶಿಬಿರದಲ್ಲಿ ಸುಮಾರು ೩೦೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಅಲ್ಲದೇ ಅಗತ್ಯವುಳ್ಳ ಹೆಚ್ಚಿನ ಶಿಬಿರಾರ್ಥಿಗಳಿಗೆ ಕನ್ನಡಕವನ್ನು ಸ್ಥಳದಲ್ಲಿಯೇ ಉಚಿತವಾಗಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತಾ ಅಮೃತಾನಂದಮಯಿ ಮಠ, ಬೋಳೂರು ಇಲ್ಲಿನ ವೈದ್ಯರಾದ ಡಾ. ದೇವದಾಸ್ ಹಾಗೂ ಡಾ. ಅಶೋಕ್ ಶೆಣೈ ಮತ್ತು ಸಮುದಾಯ ದಂತ ವಿಭಾಗ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಮತ್ತು ಆಸ್ಪತ್ರೆ ಅತ್ತಾವರ ಇಲ್ಲಿನ ವೈದ್ಯರಾದ ಡಾ. ಯಶಸ್ವಿನಿ ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರಾದ ಡಾ. ರಮ್ಯ, ಪಿ.ಆರ್.ಓ ಸಯ್ಯದ್, ಲಯನ್ಸ್ ಕ್ಲಬ್ ಮುಲ್ಕಿಯ ಕಾರ್ಯದರ್ಶಿಯಾದ ಶ್ರೀ ವಿನೋದ್ ಸಾಲ್ಯಾನ್, ಲಿಯೋ ಕ್ಲಬ್ ಮುಲ್ಕಿಯ ಅಧ್ಯಕ್ಷೆಯಾದ ಕುಮಾರಿ ಸಾಧನಾ ಹೆಬ್ಬಾರ್ ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಉಪಾಧ್ಯಕ್ಷರಾದ ನೇಮಿರಾಜ್ ಪಿ. ನಿರ್ದೇಶಕರುಗಳಾದ ಶ್ರೀ ವಾಮನ್ ಕೆ., ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ರಮಾನಾಥ್ ಸನಿಲ್, ಶ್ರೀ ಚಂದ್ರಹಾಸ್ ಮರೋಳಿ ಮತ್ತು ಸಲಹಾ ಸಮಿತಿ ಸಮಿತಿ ಸದಸ್ಯರಾದ ಶ್ರೀ ಬಾಬು ಎಸ್. ಕರ್ಕೇರ, ಶ್ರೀ ಗೋಪಾಲ್ ಎಮ್., ಶ್ರೀಮತಿ ಸರೋಜಿನಿ ಸುವರ್ಣ, ಶ್ರೀ ವಿಜಯ್ ಕುಮಾರ್ ಕುಬೆವೂರು ಮತ್ತು ಶ್ರೀಮತಿ ಕುಶಲಾಕ್ಷಿ ಮುಂತಾದವರು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿಯಾದ ಶ್ರೀಮತಿ ಸೌಮ್ಯಲತಾ ಇವರು ಸ್ವಾಗತಿಸಿದರು, ಮುಲ್ಕಿ ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಸ್ವಾತಿ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಿಬ್ಬಂದಿ ಕುಮಾರಿ ಭಾಗ್ಯಶ್ರೀ ವಂದಿಸಿದರು.