ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಬೆಂದೂರ್ ವೆಲ್ ಶಾಖೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಜಪ್ಪಿನಮೊಗರು ಇವರ ಜಂಟಿ ಸಹಯೋಗದೊಂದಿಗೆ ಮಾತಾ ಅಮೃತಾನಂದಮಯಿ ಮಠ, ಬೋಳೂರು, ಸಮುದಾಯ ದಂತ ವಿಭಾಗ ಯೆನೆಪೆಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ದಂತ ಚಿಕಿತ್ಸಾ ಶಿಬಿರ, ಉಚಿತ ಕಣ್ಣಿನ ತಪಾಸಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಬ್ರಹ್ಮಶ್ರೀನಾರಾಯಣಗುರು ಸೇವಾ ಸಂಘ(ರಿ.) ಜಪ್ಪಿನಮೊಗರು, ಇದರ ಅಧ್ಯಕ್ಷರಾದ ಶ್ರೀ ಜೆ. ದಿನೇಶ್ ಅಂಚನ್ ಇವರ ಅಧ್ಯಕ್ಷತೆಯಲ್ಲಿ ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಮಾತಾ ಅಮೃತಾನಂದಮಯಿ ಮಠದ ವ್ಯೆದ್ಯರ ತಂಡದ ಡಾ! ದೇವದಾಸ್, ಮಾತಾ ಅಮೃತಾನಂದಮಯಿ ಮಠವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ವ್ಯೆದ್ಯಕೀಯ ಶಿಬಿರವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ, ಜೊತೆಗೆ ಹಲವಾರು ಅಶಕ್ತ ರೋಗಿಗಳಿಗೆ ಶಸ್ತ್ರಚಿಕೆತ್ಸೆಯನ್ನು ಮಾಡಿಸುತ್ತಾ ಬಂದಿದೆ. ಇಂತಹ ಶಿಬಿರಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ತುಂಬಾ ಪ್ರಯೋಜನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಶ್ರೀನಾರಾಯಣಗುರು ಸೇವಾ ಸಂಘ(ರಿ.) ಜಪ್ಪಿನಮೊಗರು, ಇದರ ಅಧ್ಯಕ್ಷರಾದ ಶ್ರೀ ಜೆ. ದಿನೇಶ್ ಅಂಚನ್ ಇವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಡೆಸುವ ಉಚಿತ ವೈದ್ಯಕೀಯ ಶಿಬಿರದಿಂದ ಜಪ್ಪಿನಮೊಗರು ಪರಿಸರದ ಜನರಿಗೆ ತುಂಬಾ ಪ್ರಯೋಜನಕರವಾಗಿದೆ ಹಾಗೂ ಮುಂದೆಯೂ ಇಂತಹ ಸಮಾಜಮುಖಿ ಕೆಲಸವನ್ನು ಮಾಡಲಿ ಎಂದು ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ನಿರ್ದೇಶಕರಾದ ಶ್ರೀ ವಾಮನ್ ಕೆ., ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಚಂದ್ರಹಾಸ್ ಮರೋಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಪ್ರ) ಶ್ರೀ ವಿಶ್ವನಾಥ್, ಯೆನೆಪೆಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯರಾದ ಡಾ. ವಿಶಾಲ್, ಸಾರ್ವಜನಿಕ ಸಂಪರ್ಕಾಧಿಕಾರಿ ಭರತ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಇದರ ಸಾರ್ವಜನಿಕ ಸಂಪರ್ಕಾಧಿಕಾರಿ ಸಯ್ಯದ್, ಮಾತಾ ಅಮೃತಾನಂದಮಯಿ ಮಠದ ವ್ಯೆದ್ಯರಾದ ಡಾ! ಅಶೋಕ್ ಶೆಣೈ, ಬ್ರಹ್ಮಶ್ರೀನಾರಾಯಣಗುರು ಸೇವಾ ಸಂಘ (ರಿ.) ಜಪ್ಪಿನಮೊಗರು ಇದರ ಆರೋಗ್ಯ ಸಂಚಾಲಕರಾದ ಶ್ರೀ ರಂಜನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಸೆ ಶ್ರೀಮತಿ ಉಷಾ ಸಿ ಬೋಳಾರ್ ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಶರಾದ ಶ್ರೀ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ಬ್ರಹ್ಮಶ್ರೀನಾರಾಯಣಗುರು ಸೇವಾ ಸಂಘ (ರಿ.) ಜಪ್ಪಿನಮೊಗರು ಇದರ ಕೋಶಾಧಿಕಾರಿ ಶ್ರೀ ಚಂದ್ರಹಾಸ ಕಟ್ಟಪುಣಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಶ್ರೀನಾರಾಯಣಗುರು ಸೇವಾ ಸಂಘ(ರಿ.) ಜಪ್ಪಿನಮೊಗರು ಇದರ ಕಾರ್ಯದರ್ಶಿ ಮನೋಜ್ ಪೂಜಾರಿ ವಂದಿಸಿದರು.