ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬೆಂದೂರ್‍ವೆಲ್ ಮಂಗಳೂರು ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ಜಪ್ಪಿನಮೊಗರು, ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಉಚಿತ ಕನ್ನಡಕ ವಿತರಣಾ ಸಮಾರಂಭವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಜರುಗಿತು.

ಈ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಒಟ್ಟು 15 ಜನರಿಗೆ ಕಣ್ಣಿನ ಪೂರೆಯ ಶಸ್ತ್ರ ಚಿಕೆತ್ಸೆಯನ್ನು ಪ್ರಸಾದ್ ನೇತ್ರಾಲಯದಲ್ಲಿ ಉಚಿತವಾಗಿ ನಡೆಸಿದ್ದು, 150 ಜನರಿಗೆ ಉಚಿತವಾಗಿ ಕನ್ನಡಕವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಹಾಗು ನಿಕಟಪೂರ್ವ ಶಾಸಕರಾದ ಶ್ರೀ ಜೆ.ಆರ್ ಲೋಬೋ ಇವರು ವಿತರಿಸಿದರು. ಮುಂದಿನ ದಿನಗಳಲ್ಲಿಯೂ ಇಂತಹ ಶಿಬಿರಗಳ ಸದುಪಯೋಗವನ್ನು ಪಡೆಯುವಂತೆ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ಜಪ್ಪಿನಮೊಗರು ಇದರ ಆರೋಗ್ಯ ಸಂಚಾಲಕರಾದ ಶ್ರೀ ರಂಜನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆಯಾದ ಶ್ರೀಮತಿ ಉಷಾ ಸಿ ಬೋಳಾರ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ವೀಣಾ ಮಂಗಳ, ಶ್ರೀಮತಿ ಶೋಭ ಪೂಜಾರಿ, ಶ್ರೀ ಸಂದೇಶ್ ಸಾಲ್ಯಾನ್, ಶ್ರೀ ಪ್ರವೀಣ್‍ಚಂದ್ರ ಆಳ್ವ, ನಿಕಟಪೂರ್ವ ಕಾಪೆರ್ರೇಟರ್ ಶ್ರೀ ಸುರೇಂದ್ರ ಜೆ, ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜೆ.ನಾರಾಯಣ ಪೂಜಾರಿ ಹಾಗೂ ಕಾರ್ಯದರ್ಶಿ ಶ್ರೀಮತಿ ಜಯಲಕ್ಷಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ಜಪ್ಪಿನಮೊಗರು, ಇದರ ಅಧ್ಯಕ್ಷರಾದ ಶ್ರೀ ಜೆ. ದೀನೆಶ್ ಅಂಚನ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿಯಾದ ಶ್ರೀ ಚಿತ್ರಾಕ್ಷ ಪೂಜಾರಿ ವಂದಿಸಿದರು. ಆಂತರಿಕ ಲೆಕ್ಕಪರಿಶೋದಕರಾದ ಶ್ರೀ ಚೇತನ್ ಕುಮಾರ್ ಹಾಗು ಶ್ರೀ ಚಂದ್ರಹಾಸ ಕಟ್ಟಪುಣಿ ಕಾರ್ಯಕ್ರಮ ನೀರ್ವಹಿಸಿದರು.