ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಉಳ್ಳಾಲ ಶಾಖೆ, ಬಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ (ರಿ.) ಮತ್ತು ಮಹಿಳಾ ಘಟಕ, ಬಂಡಿಕೊಟ್ಯ, ಉಳ್ಳಾಲ, ವಿದ್ಯಾರಣ್ಯ ಯುವಕ ವೃಂದ (ರಿ) ಮತ್ತು ವಿದ್ಯಾರಣ್ಯ ಕಲಾವೃಂದ, ಉಳ್ಳಾಲ ಇವರ ಜಂಟಿ ಸಹಯೋಗದೊಂದಿಗೆ ಮಾತಾ ಅಮೃತಾನಂದಮಯಿ ಮಠ, ಬೋಳೂರು , ಸಮುದಾಯ ದಂತ ವಿಭಾಗ ಯೆನೆಪೆಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣೆ ಹಾಗೂ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಶಿಬಿರವು ಸಮುದಾಯ ಭವನ , ಉಳ್ಳಾಲ ನಗರಸಭೆ ಇಲ್ಲಿ ನಡೆಯಿತು. ಈ ಆರೋಗ್ಯ ಶಿಬಿರ ಕಾರ್ಯಕ್ರಮದ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಉಳ್ಳಾಲ ಶಾಖೆಯಲ್ಲಿ ನಡೆಯಿತು.ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ನಮ್ಮಸಂಘದ ಪ್ರತಿ ಶಾಖೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸುತ್ತಾ ಬಂದಿದ್ದೇವೆ. ಹಾಗೆಯೇ ಉಳ್ಳಾಲದಲ್ಲಿಯೂ ಪ್ರತಿ ವರ್ಷ ಉಚಿತ ವೈದ್ಯಕೀಯ ಶಿಬಿರ ನಡೆಸಿ ಅದರಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಉಚಿತವಾಗಿ ಕನ್ನಡಕವನ್ನು ನೀಡುತ್ತಿದ್ದೇವೆ. ಈ ಕನ್ನಡಕದ ವೆಚ್ಚವನ್ನು ಅವಿನಾಶ್ ಗ್ಯಾಸ್ ಎಜನ್ಸೀಸ್ ಉಳ್ಳಾಲ ಇದರ ಶ್ರೀ ಮಾಲಕರಾದ ಬಿ.ಡಿ ಗೋಪಾಲರವರು ವಹಿಸಿದ್ದಾರೆ ಅವರನ್ನು ಸಂಘದ ವತಿಯಿಂದ ಅಭಿನಂದಿಸುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ವಾಮನ್ ಕೆ , ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸೀತಾರಾಮ ಎನ್ ಹಾಗೂ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ವಿಶ್ವನಾಥ್ ಇವರು 130 ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕವನ್ನು ವಿತರಿಸಿದರು.
ಉಳ್ಳಾಲ ಶಾಖೆಯ ಶಾಖಾಧಿಕಾರಿ ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿ, ಗುಮಾಸ್ತೆಯಾದ ಶ್ರೀಮತಿ ಕ್ರಪಾಲಿ ವಂದಿಸಿದರು.