ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಮಂಗಳೂರು ಇವರ ಸಮನ್ವಯದಲ್ಲಿ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು ಇವರಿಂದ ಸಹಕಾರ ನಿರ್ವಹಣೆಯಲ್ಲಿ ಉನ್ನತ Diploma 19ನೇ ಅಧಿವೇಶನದ Rank ವಿಜೇತರಿಗೆ ಪದಕ ಪ್ರಧಾನ ಸಮಾರಂಭವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು, ಇದರ ನಿರ್ದೇಶಕರಾದ ಶ್ರೀ ಎಸ್.ಆರ್. ಸತೀಶ್ಚಂದ್ರರವರು ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿ 25 ವರ್ಷದ ಹಿಂದೆ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ 3 ದಿನದ ತರಬೇತಿ ಶಿಬಿರದಲ್ಲಿ ಪಾಲ್ಕೊಂಡಿಯಿರುವುದನ್ನು ಸ್ಮರಸಿ ಪ್ರಸ್ತುತ ಇದರ ಸದಸ್ಯರಾಗಿರುವುದೂ ಹೆಮ್ಮೆಯ ವಿಷಯ ಎಂದರು, ಭಾರತ ದೇಶದಲ್ಲಿ ಹಾಲಿನ ಸಹಕಾರಿ ಸಂಘಗಳು ಬೆಳೆದು ಬಂದ ಹಾದಿ ಹಾಗೂ ಪ್ರಸ್ತುತ ಸಹಕಾರಿಗಳು ವರ್ಷವಿಡಿ ತಮ್ಮ ವಿವಿಧ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ನಾಯಕ್ ಇವರು ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ಸಹಕಾರ ನಿರ್ವಹಣೆಯಲ್ಲಿ ಉನ್ನತ ಮತ್ತು ಅಗತ್ಯತೆ ಬಗ್ಗೆ ವಿವರಿಸುತ್ತ ಸಹಕಾರಿ ಸಿಬ್ಬಂದಿಗಳು ತಮ್ಮ ಪದ್ದೋನ್ನತಿ ಹೊಂದಲು ಈ ತರಬೇತಿಯು ಸರಕಾರ ವಿಧಿಸಿರುವ ಮಾನದಂಡವಾಗಿರುತ್ತದೆ ಇದರ ಪ್ರಯೋಜನವನ್ನು ಸಿಬ್ಬಂದಿಗಳು ಪಡೆಯಬೇಕು ಎಂದರು. ತರಬೇತಿ ಸಮನ್ವಯಧಿಕಾರಿ ಹಾಗೂ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು, ಇದರ ಉಪನ್ಯಾಸಕರಾದ ಶ್ರೀ ಸುರೇಶ್ ಪಿ.ಎನ್. ಮಾತನಾಡಿ ಸಹಕಾರಿ ಸಂಘಗಳ ಉಗಮ ಹಾಗೂ ಅವುಗಳ ಅಭಿವದ್ಧಿಯ ಬಗ್ಗೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ 19ನೇ ಅಧಿವೇಶನದ ಪ್ರಥಮ Rank ವಿಜೇತರಾದ ಪದವು ವ್ಯವಸಾಯ ಸಹಕಾರಿ ಸಂಘದ ಸಿಬ್ಬಂದಿಯಾದ ಕು. ದೀಕ್ಷಾ ಇವರಿಗೆ ಚಿನ್ನದ ಪದಕ, ದ್ವಿತೀಯ Rank ವಿಜೇತರಾದ ಕರಾವಳಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾದ ಕು. ಪ್ರಜ್ನ.ಕೆ ಇವರಿಗೆ ಬೆಳ್ಳಿಯ ಪದಕ ನೀಡಿ ಗೌರವಿಸಲಾಯಿತು. ವಿಶೇಷ ಶ್ರೇಣಿ ಪಡೆದ ಶಿಕ್ಷಣಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಮಂಗಳೂರು ಇದರ ನಿರ್ದೇಶಕರಾದ ಶ್ರೀ ವಾಮನ್ ಕೆ, ಶ್ರೀ ಜಿ. ಪರಮೇಶ್ವರ್ ಪೂಜಾರಿ, ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸುರೇಶ್ ವಿ ಪೂಜಾರಿ, ಶ್ರೀ ಚಂದ್ರಹಾಸ್ ಮರೋಳಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ನಿರೂಪಿಸಿದರು. ಸಂಘದ ಶಾಖಾಧಿಕಾರಿ ಚೈತ್ರ ಕುಮಾರಿ ಜೆ. ಎನ್ ಪದವಿ ಪದಕ ವಿಜೇತರ ಪಟ್ಟಿಯನ್ನು ವಚಿಸಿದರು, ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್‍ರವರು ಸ್ವಾಗತಿಸಿ, ಸಂಘದ ಉಪಾಧ್ಯಾಕ್ಷರಾದ ಶ್ರೀ ನೇಮಿರಾಜ್ ಪಿ. ವಂದಿಸಿದರು.