ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಅತೀ ಕಿರು ಅವಧಿಯಲ್ಲಿ 100 ಕೋಟಿಗೂ ಮಿಕ್ಕಿ ಠೇವಣಿಯನ್ನು ಸಂಗ್ರಹಿಸಿ, ಅತೀ ಕಡಿಮೆ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈಯಲು ಸಿಬ್ಬಂದಿ ವರ್ಗದವರೇ ಕಾರಣ. ಈ ಸಿಬ್ಬಂದಿ ವರ್ಗದವರ ಗ್ರಾಹಕರೊಂದಿಗಿನ ಭಾಂದವ್ಯವನ್ನು ಹೆಚ್ಚಿಸಿ, ಇನ್ನೂ ಉತ್ತಮ ಸೇವೆಯನ್ನು ನೀಡಲು ಪ್ರತೀ ವರುಷದಂತೆ ಈ ವರುಷವೂ ಆಯೋಜಿಸಿರುವ ಸಿಬ್ಬಂದಿ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಹೆಚ್ಚಿನ ಮಾಹಿತಿ ಪಡೆದು, ಈ ತರಬೇತಿ ಕಾರ್ಯಗಾರವು ಯಶಸ್ವಿಯಾಗಲು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪವರ್‍ಸಾಪ್ಟ್ ಸಂಸ್ಥೆಯ ಮಾಲೀಕರಾದ ಶ್ರೀ ಪ್ರಕಾಶ್ ಆಚಾರ್ಯ ಇವರು ಬ್ಯಾಂಕಿಂಗ್ ಸಾಫ್ಟ್‍ವೇರ್‍ನಲ್ಲಿ ನೂತನ ತಂತ್ರಜ್ನಾನ ಅಳವಡಿಕೆ, ನೀರ್ವಹಣೆ ಹಾಗೂ ಸಾಫ್ಟ್‍ವೇರ್ ದುರುಪಯೋಗದಂತೆ ತಡೆಯುವ ಬಗ್ಗೆ ಮಾಹಿತಿ ನೀಡಿದರು.
ಸೈಮೋನಿಯ ಅಪ್ಲಾಯನ್ಸಿಸ್ ಇದರ ಪ್ರತಿನಿಧಿಯಾದ ಶ್ರೀ ಯಾದವ್ ಶೆಟ್ಟಿ ಇವರು ಸಂಘದ ಶಾಖೆಗಳ ಸುರಕ್ಷತಾ ವಿಷಯವಾಗಿ ಪೈರ್ ಆಂಡ್ ಸೆಪ್ಟಿ ಬಗ್ಗೆ ಮುಖ್ಯವಾಗಿ ಬೆಂಕಿ ನಂದಿಸುವ ಯಂತ್ರದ ಪ್ರಾತ್ಯಕ್ಷಿತೆಯನ್ನು ಹಾಗೂ ಬೆಂಕಿ ಅನಾಹುತ ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಅಗತ್ಯವಾದ ಮುನ್ನಚ್ಚೆರಿಕೆಗಳ ಬಗ್ಗೆ ಹಾಗೂ ಬೆಂಕಿ ನಂದಿಸುವ ಯಂತ್ರವನ್ನು ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿದರು.
ನಿವ್ರತ್ತ ಬ್ಯಾಂಕ್ ಅಧಿಕಾರಿ, ಹಿರಿಯ ಹಾಗೂ ಖ್ಯಾತ ನ್ಯಾಯವಾದಿಯಾದ ಶ್ರೀ ವಸಂತ್ ಅಡ್ಯಂತಾಯ ಇವರು ಸಹಕಾರ ಕ್ಷೇತ್ರದಲ್ಲಿ ವ್ಯವಹಾರದಲ್ಲಿ ಕಾನೂನು ನಿಯಮಪಾಲನೆ ಹಾಗೂ ಪ್ರಸ್ತುತ ಬದಲಾವಣೆಗೊಂಡಿರುವ ಕಾನೂನು ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಸರ್ವಜ್ನ IAS ಅಕಾಡೆಮಿಯ ಮುಖ್ಯಸ್ಥರಾದ ಶ್ರೀ ಸುರೇಶ್ ಎಂ. ಎಸ್. ಇವರು ಗ್ರಾಹಕರೊಂದಿಗೆ ಭಾಂದವ್ಯ ಹಾಗೂ ಮಾನವ ಸಂಪನ್ಮೂಲದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಹಾಗೂ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ಇವರು ಸಂಘದ ಶಾಖೆಗಳ ಭದ್ರತಾ ಹಾಗೂ ಸುರಕ್ಷಾ ಸಾಧನಗಳ ನೀರ್ವಹಣೆ ಹಾಗೂ ಸದುಪಯೋಗದ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿದರು.
ಸಿಬ್ಬಂದಿ ಕಾರ್ಯಗಾರವನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ನಿರ್ವಹಿಸಿದರು.