ಆತ್ಮಶಕ್ತಿ ಪತ್ರಿಕೆಯ ಸಂಪಾದಕರು ಹಾಗೂ ಸ್ಥಾಪಕ ಟ್ರಸ್ಟಿಗಳೂ ಆದ ಶ್ರೀ ವಾಮನ್ ಕೆ. ಇವರು ಈ ಸಂದರ್ಭದಲ್ಲಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟಿನ ವತಿಯಿಂದ ಪ್ರತೀ ವರ್ಷ ಕಡೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ, ಪ್ರಸ್ತುತ ಕೊರೋನ ಸಂಕಷ್ಟ ಕಾಲದಲ್ಲಿ ಆರ್ಥಿಕ ಅಡಚಣೆಯಿಂದ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸಲು ಆಗದೆ ಮೊಟಕುಗೊಳಿಸಿರುವುದನ್ನು ಮನಗಂಡು ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕಾಲೇಜು ಶುಲ್ಕವನ್ನು ಭರಿಸುವುದರ ಮೂಲಕ ಹಾಗೂ ಅನಾರೋಗ್ಯ ಪೀಡಿತರಾದ ಆರ್ಥಿಕವಾಗಿ ಅಡಚಣೆಯಲ್ಲಿರುವ ಬಡ ಕುಟುಂಬವನ್ನು ಗುರುತಿಸಿ ಅವರಿಗೂ ಆರ್ಥಿಕ ಸಹಾಯವನ್ನು ಈ ಬಾರಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಲಾಭಾಂಶದಲ್ಲಿ ಒಂದಂಶವನ್ನು ತನ್ನ ಟ್ರಸ್ಟಿನ ಮೂಲಕ ಇಂತಹ ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದು ಇದರ ಸದುಪಯೋಗಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೀಡುವುದರ ಮೂಲಕ ತನ್ನ ಸಾಮಾಜಿಕ ಸೇವೆಯ ಬದ್ಧತೆಯನ್ನು ಸತತ 9 ವರ್ಷಗಳಿಂದಲೂ ಮಾಡುತ್ತಾ ಬಂದಿರುತ್ತದೆ. ಕೊರೋನಾ ಸಂದರ್ಭಗಳಲ್ಲಿ ಬಡ ಕುಟುಂಬಗಳಿಗೆ ಅನುಕೂಲವಾಗಲು ಚಿನ್ನಾಭರಣ ಅಡಮಾನ ಸಾಲ ಶೇಕಡಾ 4 ಬಡ್ಡಿದರದಲ್ಲಿ ನೀಡಿರುತ್ತೇವೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಮುಂದುವರಿಕೆಗೂ ಸಹಾಯ ಮಾಡಿರುತ್ತೇವೆ ಎಂದು ತಿಳಿಸಿದರು.
ಸಮಾಜ ಸೇವೆಯಲ್ಲಿ ಬಹುವಾಗಿ ಸದ್ದಿಲ್ಲದೆ ತನ್ನನ್ನು ಕ್ರೀಯಾಶೀಲವಾಗಿಸಿಕೊಂಡ ಸದರಿ ಟ್ರಸ್ಟ್ ನ ಈ ಕಾರ್ಯಕ್ರಮದಲ್ಲಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ಪ್ರಾದೇಶಿಕ ಸಹಕಾರ ನಿರ್ವಹಣಾ ಕೇಂದ್ರ ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ಎಸ್.ಆರ್ ಸತೀಶ್ಚಂದ್ರ, ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಹರೀಶ ಆಚಾರ್ಯ, ಮಂಗಳೂರಿನ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀ ಪ್ರವೀಣ್ ಬಿ. ನಾಯಕ್, ಮಂಗಳೂರು ಕೆಥೋಲಿಕ್ ಸಹಕಾರಿ ಬ್ಯಾಂಕ್ (ಲಿ.) ನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ, ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು ಇದರ ತರಬೇತಿ ಸಮನ್ವಯ ಅಧಿಕಾರಿ ಸುರೇಶ್ ಪಿ ಎನ್, ಟ್ರಸ್ಟಿಗಳಾದ,ಶ್ರೀ ಚಂದ್ರಹಾಸ ಮರೋಳಿ , ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಆನಂದ ಎಸ್.ಕೊಂಡಾಣ, ಶ್ರೀ ಸುರೇಶ್ ವಿ.ಪೂಜಾರಿ, ಶ್ರೀಮತಿ ಸುಜಯ ಹೇಮಚಂದ್ರರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಗೋಪಾಲ್ ಎಂ. ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ.ರವರು ವಂದನಾರ್ಪಣೆಗೈದರು.