ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ಸಹಕಾರಿ ಸಂಘದ 5 ಶಾಖೆಗಳನ್ನು ನನ್ನ ಕ್ಷೇತ್ರದಲ್ಲಿಯೇ ಉದ್ಘಾಟಿಸಿದ ಹೆಮ್ಮೆ ನನಗಿದೆ. ಸಹಕಾರಿ ರಂಗದಲ್ಲಿ ಗ್ರಾಹಕರ ಕಾಳಜಿ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ. ಇದಕ್ಕೆ ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘವು ಉತ್ತಮ ನಿದರ್ಶನವಾಗಿದೆ. ಗ್ರಾಹಕರಿಗೆ ಬ್ಯಾಂಕಿನ ರೀತಿಯಲ್ಲಿ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಹಕಾರಿಯು ರಾಷ್ಟ್ರಮಟ್ಟದಲ್ಲಿ ಬೆಳುಗುವಂತಾಗಲಿ ಎಂದರು.
ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ! ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಆತ್ಮಶಕ್ತಿ ಸಹಕಾರಿ ಸಂಘವು ಅತೀ ಕಡಿಮೆ ಅವಧಿಯಲ್ಲಿ ಸಾಧಿಸಿರುವ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಇನ್ನೂ ಹೆಚ್ಚಿನ ಶಾಖೆಗಳನ್ನು ಹೊಂದಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘವು ಸಂಘದ ಸದಸ್ಯರಿಗೆ ಉಳಿತಾಯ ಮನೋಬಾವನೆಯನ್ನು ಮೂಡಿಸುವುದರ ಜೊತೆಗೆ ಚಿನ್ನಾಭರಣ ಮೌಲ್ಯದ ಮೇಲೆ ಶೇ. 90 ರಷ್ಟು ಚಿನ್ನಾಭರಣ ಸಾಲ, ಆಸ್ತಿ ಅಡಮಾನ ಸಾಲ, ವಾಹನ ಸಾಲ, ಜಾಮೀನು ಸಾಲ ಮುಂತಾದ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಸಂಘದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಪ್ರಯೋಜನಕಾರಿಯಾದ ಡಿಡಿ, ನೆಪ್ಟ್, ಆರ್.ಟಿ.ಜಿ.ಎಸ್ ಯಂತಹ ಹಣ ವರ್ಗಾವಣೆ, ಇ-ಸ್ಟಾಂಪಿಂಗ್ ವ್ಯವಸ್ಥೆ, Western Union ಮೂಲಕ ವಿದೇಶದಿಂದ ಹಣ ಪಡೆಯಲು, ದೇಶಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ, ರುಪೇ ಡೆಬಿಟ್ ಕಾರ್ಡ್ ಮೂಲಕ ಹಣ ನಗದೀಕರಣ ಸೇವೆ ಮುಂತಾದ ಸೌಲಭ್ಯಗಳು ಈ ನೂತನ ಶಾಖೆಯಲ್ಲಿ ಲಭ್ಯವಿದ್ದು , ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು ಹಾಗೂ ಆತ್ಮಶಕ್ತಿ ಸಹಕಾರಿಯು ಮಾದರಿ ಸಂಸ್ಧೆಯಾಗಿ ಬೆಳೆಯುವುದಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಹಾಗೂ ಸದಸ್ಯರ ಸಹಕಾರವೇ ಕಾರಣವಾಗಿದೆ. ಹತ್ತನೇ ವರ್ಷದ ಸಂಭ್ರಮದಲ್ಲಿ ಸ್ವಂತ ಕಟ್ಟಡದ ಕನಸು ಶೀಘ್ರ ನೆರವೇರಲಿದೆ ಎಂದರು.
ಸಂಘವು ತನ್ನ ಕಾರ್ಯವ್ಯಾಪ್ತಿಯನ್ನು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಹೊಂದಿದ್ದು, ಪ್ರಸ್ತುತ ತುಂಬೆ ಶಾಖೆಯು ಸೇರಿದಂತೆ ಒಟ್ಟು 18 ಶಾಖೆಗಳನ್ನು ಹೊಂದಿದೆ. ಸಂಘವು ಪ್ರಾರಂಭದಿಂದಲೂ ಅಡಿಟ್ ವರ್ಗೀಕರಣದಲ್ಲಿ ಎ ಶ್ರೇಣಿ ಪಡೆಯುತ್ತಾ ಬಂದಿದ್ದು, 2019-20 ನೇ ಸಾಲಿನಲ್ಲಿ ರೂ. 535 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, 134.98 ಲಕ್ಷ ಲಾಭ ಗಳಿಸಿದೆ. ಸಂಘವು ಸತತ ಶೇ. 15 ಡಿವಿಡೆಂಟ್ ನೀಡುತ್ತಾ ಬಂದಿದೆ. ಪ್ರಸ್ತುತ ಆರ್ಥಿಕ ಸಾಲಿನಲ್ಲಿ ಈಗಾಗಲೇ ಸಂಘವು ರೂ. 700 ಕೋಟಿಗೂ ಮಿಕ್ಕಿ ದಾಖಲೆಯ ವ್ಯವಹಾರವನ್ನು ನಡೆಸಿದೆ. ಎಪ್ರಿಲ್ ಅಂತ್ಯಕ್ಕೆ ನೂತನ ಎರಡು ಶಾಖೆಗಳನ್ನು ತೆರೆಯಲಾಗುವುದು ಎಂದು ಸಂಘದ ಅಧಕ್ಷರಾದ ಚಿತ್ತರಂಜನ್ ಬೋಳಾರ್ ರವರು ತಿಳಿಸಿದರು.
ಜಿ.ಪಂ. ಸದಸ್ಯರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದ.ಕ ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಬಂಟ್ವಾಳ ತಾ.ಪಂ. ಸದಸ್ಯರಾದ ಗಣೇಶ್ ಸುವರ್ಣ, ತುಂಬೆ ಗ್ರಾ.ಪಂ.ಅದ್ಯಕ್ಷರಾದ ಪ್ರವೀಣ್ ಬಿ. ತುಂಬೆ, ತುಂಬೆ ಗ್ರಾ.ಪಂ. ಸದಸ್ಯರಾದ ಗಣೇಶ್ ಸಾಲಿಯಾನ್, ಮೊಹಮ್ಮದ್ ಜುಹೂರ್, ವಿಶ್ವಕರ್ಮ ಸಹಕಾರಿ ಬ್ಯಾಂಕಿನ ಅಧ್ಯಕ್ಶರಾದ ಹರೀಶ್ ಆಚಾರ್, ಎಸ್.ಕೆ ಬಿಲ್ಡರ್ಸ್‍ನ ಮಾಲಕರಾದ ಸಂತೋಶ್ ಕುಮಾರ್ ಕೊಟ್ಟಿಂಜ, ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘದ ನಿರ್ದೆಶಕರಾದ ವಾಮನ್ ಕೆ, ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸುರೇಶ್ ವಿ. ಪೂಜಾರಿ ಸೀತಾರಾಮ್ ಎನ್., ರಮಾನಾಥ್ ಸನಿಲ್, ಸುಜಯ್ ಹೇಮಚಂದ್ರ, ಕುಶಾಲಾಕ್ಷಿ ಯಶವಂತ್, ಶಾಖಾಧಿಕಾರಿ ನಮಿತಾ ರಂಜಿತ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ನೇಮಿರಾಜ್ ಪಿ. ವಂದಿಸಿದರು. ಸಂಘದ ಸಿಬ್ಬಂದಿ ನಿತಿನ್ ಕಾರ್ಯಕ್ರಮ ನಿರೂಪಿಸಿದರು.