ಉದ್ಘಾಟಿಸಿ ಮಾತನಾಡಿದ ಬಿ.ಸದಾನಂದ್‍ರವರು ತುಂಬೆ ಪರಿಸರದ ಜನರಿಗೆ ಸಹಕಾರಿಯಾಗುವ ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಮಾತನಾಡಿ 18ನೇ ನೂತನ ತುಂಬೆ ಶಾಖೆಯ ಪ್ರಾರಂಭದ ಪ್ರಯುಕ್ತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡನ್ನು ಉಚಿತವಾಗಿ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದು ಎಲ್ಲರೂ ಇದರ ಸದುಪಯೋಗವನ್ನು ಪಡೆಯುವಂತೆ ಸೂಚಿಸಿದರು. ಈಗಾಗಲೇ ಎಲ್ಲಾ ಶಾಖೆಗಳಲ್ಲೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಗ್ರಾಹಕರು ಹಾಗೂ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಂಡಿರುತ್ತಾರೆ. ಅದೇ ರೀತಿ ನಮ್ಮ ಶಾಖೆಗಳಲ್ಲಿ ಈಗಾಗಲೇ ಚಿನ್ನದ ನೈಜತೆಯನ್ನು ಪರೀಕ್ಷಿಸುವ ಯಂತ್ರವನ್ನು ಪ್ರಾರಂಭಿಸಿದ್ದು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಕನಿಷ್ಠ ದರದೊಂದಿಗೆ ಈ ಸೇವೆಯನ್ನು ನೀಡಲಿದ್ದು ಸದಸ್ಯರು ಮಾತ್ರವಲ್ಲದೇ ಸಾರ್ವಜನಿಕರು ಹಾಗೂ ಚಿನ್ನಾಭರಣ ತಯಾರಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಈ ಯಂತ್ರವನ್ನು ಅಳವಡಿಸುವುದರ ಮೂಲಕ ಹೊಸ ಆಭರಣ ಸಾಲ “ಒಂದು ನಿಮಿಷದಲ್ಲಿ ಚಿನ್ನಾಭರಣ ಸಾಲ” ಎನ್ನುವ ಯೋಜನೆಯನ್ನು ಪ್ರಾರಂಬಿಸಲಿದ್ದು ಇದು ಗ್ರಾಹಕ ಸ್ನೇಹಿ ಸಾಲವಾಗಿರುತ್ತದೆ. ಪ್ರಸ್ತುತ ಆರ್ಥಿಕ ಸಾಲಿನಲ್ಲಿ ರೂ.700 ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸಿದ್ದು ಲಾಭದಾಯಕವಾಗಿ ಮುಂದುವರಿದು ರಾಜ್ಯದಲ್ಲೇ ವಿಶೇಷವಾಗಿ ಗುರುತಿಸಲ್ಪಟ್ಟ ಸಂಸ್ಥೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ವಾಮನ್ ಕೆ., ಸೀತಾರಾಮ್ ಎನ್., ಸುರೇಶ್ ವಿ. ಪೂಜಾರಿ, ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ ಹಾಗೂ ಶ್ರೀಮತಿ ಸುಜಯ ಹೇಮಚಂದ್ರ ಉಪಸ್ಥಿತರಿದ್ದರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯಾ ವಿಜಯ್ ಸ್ವಾಗತಿಸಿದರು, ಲೆಕ್ಕಿಗ ವಿಶ್ವನಾಥ್ ವಂದಿಸಿದರು, ನಿತಿನ್ ಕಾರ್ಯಕ್ರಮವನ್ನು ನಿರೂಪಿಸಿದರು.