ಸ್ಥಳಾಂತರ ಶಾಖೆಯನ್ನು ಉದ್ಘಾಟಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ವೈ. ಶೆಟ್ಟಿಯವರು ಮಾತನಾಡಿ, ಸಹಕಾರ ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಜನರಿಗೆ ಹೆಚ್ಚಿನ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುವುದರ ಮೂಲಕ ಜನರ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಡಿಮೆ ಅವಧಿಯಲ್ಲಿ ತನ್ನ 19 ಶಾಖೆಯನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಜನಮನ್ನಣೆ ಗಳಿಸಿದೆ. ಈ ಸಂಘವು ಇನ್ನಷ್ಟು ಉನ್ನತಿ ಪಡೆದು ನೂರಾರು ಶಾಖೆಗಳನ್ನು ತೆರೆದು ಜನಪ್ರಿಯಗೊಳ್ಳಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್‍ರವರು ಮಾತಾನಾಡಿ, ನಮ್ಮ ಸಂಘವು ಬ್ಯಾಂಕಿಂಗ್ ಸೇವೆಯ ಜೊತೆಗೆ ಹಿರಿಯರೂ, ಮಾಜಿ ಕೇಂದ್ರ ಸಚಿವರಾದ ಶ್ರೀ ಜನಾರ್ಧನ ಪೂಜಾರಿಯವರ ಆಶಯದಂತೆ ಜನರಿಗೆ ಉದ್ಯೋಗಾವಕಾಶವನ್ನು ನೀಡುವ ಸಂಘವಾಗಿ ಮೂಡಿ ಬಂದಿದೆ. ಸಂಘದ ಸ್ವಂತ ಕಟ್ಟಡವು ಸೆಪ್ಟೆಂಬರ್ 12ಕ್ಕೆ ಉದ್ಘಾಟನೆಗೊಳ್ಳಲಿದ್ದು, ಕೇವಲ 9 ವರ್ಷದ ಅವಧಿಯಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದ ಸ್ವಂತ ಕಟ್ಟಡವನ್ನು ಹೊಂದಿರುವ ರಾಜ್ಯದ ಏಕಮಾತ್ರ ಸಹಕಾರಿ ಸಂಘವಾಗಿ ಮೂಡಿಬರಲಿದೆ. ಸಂಘವು ವಿತರಿಸುವ ಹತ್ತು ಸಾವಿರ ರೂಪಾಯಿಯ ಮೈಕ್ರೋ ಲೋನ್ ಸಣ್ಣ ವ್ಯಾಪಾರಿಗಳಿಗೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಂಜಿಮೊಗರು ಮೊಗೇರ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ಕೊಂಚಾಡಿಯವರು ಸಂಘದ ಬ್ಯಾಂಕಿಂಗ್ ಸೇವೆಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಸಂಘಕ್ಕೆ ಶುಭ ಕೋರಿದರು.
ಈ ಸಮಾರಂಭದಲ್ಲಿ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ಚಂದ್ರ ಕೆ., ಮ.ನ.ಪಾ, ಪಂಜಿಮೊಗರು ವಾರ್ಡಿನ ಕಾಪೆರ್Çರೇಟರ್ ಅನಿಲ್ ಕುಮಾರ್, ಗುರುಶಕ್ತಿ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಕುಮಾರ್, ಸಂಘದ ನಿರ್ದೆಶಕರಾದ ಶ್ರೀ ವಾಮನ್ ಕೆ., ಶ್ರೀ ಜಿ. ಪರಮೇಶ್ವರ್ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸೀತಾರಾಮ್ ಎನ್., ಶ್ರೀ ರಮಾನಾಥ್ ಸನಿಲ್, ಶ್ರೀ ಚಂದ್ರಹಾಸ್ ಮರೋಳಿ, ಶ್ರೀಮತಿ ಸುಜಯ ಹೇಮಚಂದ್ರ, ಶ್ರೀಮತಿ ಕುಶಲಾಕ್ಷಿ ಯಶವಂತ್, ಸಲಹಾ ಸಮಿತಿ ಸದಸ್ಯರಾದ ಶ್ರೀ ಗಣೇಶ್ ಸನಿಲ್, ಶ್ರೀ ಶಿವಾನಂದ ಸನಿಲ್, ಸಂಘದ ಲೆಕ್ಕಿಗರಾದ ಶ್ರೀ ವಿಶ್ವನಾಥ, ಶಾಖಾಧಿಕಾರಿ ಶ್ರೀಮತಿ ಸುಜಾತ ಮೊದಲಾದವರು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ಬಿ. ನಾಯಕ್ ರವರು ಸಂಘಕ್ಕೆ ಭೇಟಿ ನೀಡಿ ಶುಭಹಾರೈಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್‍ರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ರವರು ವಂದಿಸಿದರು. ಹಾಗೂ ಸಂಘದ ಸಿಬ್ಬಂದಿ ಶ್ರೀ ನಿತಿನ್ ರವರು ಕಾರ್ಯಕ್ರಮ ನಿರೂಪಿಸಿದರು.