ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯು ಸಹಕಾರಿ ಸಂಘದ ಸಿಬ್ಬಂದಿಗಳ ಪದೋನ್ನತಿಗಾಗಿ ಅವಶ್ಯವಿರುವ ಹೆಚ್ಡಿಸಿಎಮ್ ಕೋರ್ಸನ್ನು ದೂರಶಿಕ್ಷಣದ ಮೂಲಕ ನೀಡುತ್ತಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 65 ಶಿಕ್ಷಣಾರ್ಥಿಗಳು ಹೆಚ್ಡಿಸಿಎಮ್ 30ನೇ ಅಧಿವೇಶನದಲ್ಲಿ ಪರೀಕ್ಷೆ ಬರೆದಿರುತ್ತಾರೆ. ಪರೀಕ್ಷೆಗಳು ವಿಶ್ವವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ನಡೆದಿದ್ದು ಇದರಲ್ಲಿ 17 ಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು 28 ಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಅವಿಭಜಿತ ಜಿಲ್ಲೆಗಳಿಗೆ ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ತರಬೇತಿ ಸಮನ್ವಯ ಅಧಿಕಾರಿ ಹಾಗೂ ಉಪನ್ಯಾಸಕರಾದ ಶ್ರೀ ಸುರೇಶ್ ಪಿ.ಎನ್ ಇವರ ತರಬೇತಿ, ಸಹಕಾರ ಮತ್ತು ಪೆÇ್ರೀತ್ಸಾಹ ಶ್ಲಾಘನೀಯವಾಗಿದೆ. ಮುಂದಿನ ಅಧಿವೇಶನದ ಸಹಕಾರ ನಿರ್ವಹಣೆಯಲ್ಲಿ ಉನ್ನತ Diploma (ಹೆಚ್.ಡಿ.ಸಿ.ಎಮ್) ದೂರ ಶಿಕ್ಷಣದ ನೋಂದಾವಣಿ ಪ್ರಕ್ರಿಯೆಯು ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹತ್ತಿರದ ಶಾಖೆಗಳನ್ನು ಸಂಪರ್ಕಿಸಬಹುದು.
Phone; 0824-2430555,4273555, ಮೊ; 8151057555, 8150063555 ಸಂಪರ್ಕಿಸಬಹುದು.