ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇವರ ಸಮನ್ವಯದಲ್ಲಿ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು ಇವರಿಂದ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ (ಎಚ್.ಡಿ.ಸಿ.ಎಮ್) ೩೬ನೇ ಅಧಿವೇಶನದ ಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ “ಆತ್ಮಶಕ್ತಿ ಸೌಧ” ಸಭಾ ಭವನ ಬೈರಾಡಿಕೆರೆ, ಪಡೀಲ್‌ನಲ್ಲಿ ಜರಗಿತು.


ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ಪ್ರಸ್ತುತ ಸಹಕಾರ ಕಾಯ್ದೆ ಮತ್ತು ನಿಯಮಗಳಲ್ಲಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿ ಹಾಗೂ ನೌಕರರನ್ನು ಉನ್ನತ ಹುದ್ದೆಗೆ ಪದೋನ್ನತಿ ಪಡೆಯಬೇಕಾದರೆ ಅವರ ಅರ್ಹತೆಯಲ್ಲಿ ಹೈಯರ್ ಡಿಪ್ಲೋಮ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಎಚ್.ಡಿ.ಸಿ.ಎಮ್) ಕೋರ್ಸನ್ನು ಸರಕಾರ ನಿಗದಿಪಡಿಸಿರುವುದರಿಂದ ಮುಂದಿನ ದಿನಗಳಲ್ಲಿ ಈ ಶಿಕ್ಷಣ ಅತೀ ಅಗತ್ಯವಿರುತ್ತದೆ. ಈ ಅಗತ್ಯವನ್ನು ಮನಗಂಡು ಸಂಘದ ಸಮನ್ವಯದಲ್ಲಿ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು ಇವರ ಮೂಲಕ ಜಿಲ್ಲೆಯ ಸಹಕಾರ ಸಂಘದ ಹಿರಿಯ ಸಿಬ್ಬಂದಿಗಳಿಗೆ ಮತ್ತು ಇತರ ಎಲ್ಲಾ ಸಿಬ್ಬಂದಿಗಳಿಗೆ ಈ ಕೋರ್ಸನ್ನು ಪ್ರಾರಂಭಿಸಲಾಗಿದೆ. ಇದು ಎಲ್ಲಾ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಅನುಕೂಲಕರವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ತರಬೇತಿ ಸಮನ್ವಯ ಅಧಿಕಾರಿ ಶ್ರೀ ಪಿ.ಎನ್ ಸುರೇಶ್ ರವರಿಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ದಶಮಾನೋತ್ಸವದ ಪ್ರಯುಕ್ತ ಹಾಗೂ ಶಿಕ್ಷಣಾರ್ಥಿಗಳ ವತಿಯಿಂದ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಎಸ್.ಕೆ ಗೋಲ್ಡ್ಸ್ಮಿತ್ ಇಂಡಸ್ಟಿçÃಯಲ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾಯನಿರ್ವಹಣಾಧಿಕಾರಿ ಶ್ರೀ ಯಜ್ಞೇಶ್ವರ, ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಸಹಾಯಕ ಪ್ರಬಂಧಕರಾದ ಶ್ರೀ ನಿತಿನ್ ಶೆಟ್ಟಿ, ಶ್ರೀ ದೇವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುದೇಶ್ ಪೂಜಾರಿ ಹಾಗೂ ಶ್ರೀಮತಿ ಸ್ವಪ್ನ ಉಪಸ್ಥಿತರಿದ್ದರು.