ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತುಂಬೆ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಸಂಘದ ಗ್ರಾಹಕರಾದ ಶ್ರೀ ಮೋಹನ್ ಕುಲಾಲ್, ಶ್ರೀ ಗುರುಪ್ರಸಾದ್, ಶ್ರೀ ಅಬ್ದುಲ್ ರಹಿಮಾನ್ ಹಾಗೂ ಶ್ರೀ ಗಿರೀಶ್‌ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸಂಘದ ಗ್ರಾಹಕರಾದ ಶ್ರೀ ಮೊಹಮ್ಮದ್ ಶರೂನ್‌ರವರು ಮಾತನಾಡಿ ಸಂಘವು ತ್ವರಿತಗತಿಯಲ್ಲಿ ಚಿನ್ನಾಭರಣ ಸಾಲ ಸೇವೆ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೋರ್ವ ಸಂಘದ ಗ್ರಾಹಕರು ಹಾಗೂ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರವೀಣ್ ಬಿ ತುಂಬೆ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಶ್ರೀ ಚಿತ್ತರಂಜನ್ ಬೋಳಾರ್‌ರವರ ದಕ್ಷ ನಾಯಕತ್ವದಲ್ಲಿ ಬಂಡೆ ಕಲ್ಲಿನಲ್ಲಿಯೂ ನೀರು ತೆಗೆಯುವಂತಹ ಸಾಹಸ ಪ್ರವೃತ್ತಿಯಿಂದ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಘವು ನಿರುದ್ಯೋಗಿಗಳಿಗೆ ಉದ್ಯೋಗವಕಾಶವನ್ನು ಕಲ್ಲಿಸಿಕೊಟ್ಟಿದೆ. ಸಂಘದ ಅಭಿವೃದ್ಧಿ ಹಾಗೂ ಸಿಬ್ಬಂದಿಗಳು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘದ ಸದಸ್ಯರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಸಂಘದ ಶಾಖೆಗಳಲ್ಲಿ ಕೋರ್ ಬ್ಯಾಂಕಿAಗ್ ಸೇವೆಯನ್ನು ಅಳವಡಿಸಲಾಗಿದೆ. ಈ ಸೇವೆಯಿಂದಾಗಿ ಸಂಘದ ಯಾವುದೇ ಶಾಖೆಯಲ್ಲಿ ಗ್ರಾಹಕರು ವ್ಯವಹರಿಸಬಹುದು. ಇನ್ನಿತರ ಸೇವೆಗಳಾದ ಯಾವುದೇ ರಾಷ್ಟಿಕ್ರತ ಹಾಗೂ ಇತರ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡುವ ಸೌಲಭ್ಯಗಳಾದ ಆರ್.ಟಿ.ಜಿ.ಎಸ್, ನೆಫ್ಟ್, ಡಿ.ಡಿ ವೆಸ್ಟರ್ನ್ ಯೂನಿಯನ್ ,ಎಲ್‌ಐಸಿ, ಕೇರ್ ಹೆಲ್ತ್ ಇನ್ಸೂರೆನ್ಸ್ , ಮಣಿಪಾಲ ಆರೋಗ್ಯ ಕಾರ್ಡ್, ಮುಂತಾದ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಹಾಗೂ ಅತೀ ಶೀಘ್ರದಲ್ಲಿ 5 ಶಾಖೆಗಳನ್ನು ಅಡ್ಯಾರ್, ನೀರುಮಾರ್ಗ, ಗಂಜಿಮಠ, ಪಡುಬಿದ್ರಿ ಹಾಗೂ ಕಾಪುವಿನಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಚಂದ್ರಹಾಸ ಮರೋಳಿ, ಶ್ರೀ ಗೋಪಾಲ್ ಎಮ್, ಉಪಸ್ಥಿತರಿದ್ದರು. ತುಂಬೆ ಶಾಖೆಯ ಶಾಖಾಧಿಕಾರಿ ಶ್ರೀಮತಿ ಭವ್ಯ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ವಂದಿಸಿದರು ಹಾಗೂ ಸಂಘದ ಸಿಬ್ಬಂದಿ ಶ್ರೀ ನಿತಿನ್ ಕಾರ್ಯಕ್ರಮ ನಿರೂಪಿಸಿದರು.