ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 21 ನೇ ನೂತನ ಶಾಖೆಯ ಉದ್ಘಾಟನೆಯು ಅಡ್ಯಾರ್ ಕಟ್ಟೆಯ ಶಾರದಮ್ಮ ಟವರ್ ಕಟ್ಟಡದಲ್ಲಿ ಶುಕ್ರವಾರ ನೇರವೇರಿತು.

ಸಂಘವು ಅತ್ಯಲ್ಪ ಕಾಲದಲ್ಲಿ ಯಶಸ್ವಿ ಸಂಘವಾಗಿ ರೂಪುಗೊಂಡು, ವಿವಿಧ ಕಡೆಗಳಲ್ಲಿ ಶಾಖೆ ತೆರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ಕಲ್ಪಿಸಿದೆ. ಮತ್ತಷ್ಟು ಶಾಖೆಗಳು ಗ್ರಾಹಕರಿಗೆ ಲಭಿಸುವಂತಾಗಲಿ ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಡ್ಯಾರ್ ಇದರ ಅಧ್ಯಕ್ಷ ಯಾದವ ಪೂಜಾರಿ ಭಂಡಾರಮನೆ ಹೇಳಿದರು.
ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘವು 10 ವರ್ಷಗಳಲ್ಲಿ ದ.ಕ ಜಿಲ್ಲೆಯಲ್ಲಿ20 ಶಾಖೆ ತೆರೆದು ಸ್ವಂತ ಕಟ್ಟಡವನ್ನು ಪಡೀಲಿನ ಬೈರಾಡಿಕೆರೆ ಬಳಿ ಲೋಕಾರ್ಪಣೆಗೊಳಿಸಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ತನ್ನ ಕಾರ್ಯವ್ಯಾಪ್ತಿಯಾದ ದ.ಕ. ಜಿಲ್ಲೆಯಲ್ಲಿ 20 ಶಾಖೆಗಳನ್ನು ಹೊಂದಿದೆ. ಈಗ ತನ್ನ ಕಾರ್ಯವ್ಯಾಪ್ತಿಯನ್ನು ಉಡುಪಿ, ಮಡಿಕೇರಿ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗೆ ವಿಸ್ತರಿಸಿದೆ. ಶೀಘ್ರ ಉಡುಪಿ ಜಿಲ್ಲೆಯ ಪಡುಬಿದ್ರಿ, ಕಾಪು ಮತ್ತು ದ.ಕ. ಜಿಲ್ಲೆಯ ಗಂಜಿಮಠ, ನೀರುಮಾರ್ಗ ಸೇರಿ ಒಟ್ಟು 25 ಶಾಖೆ ತೆರೆಯುವ ಗುರಿಯನ್ನು ಹೊಂದಿದೆ ಎಂದರು.
ಭದ್ರತಾ ಕೋಶ ಉದ್ಘಾಟನೆ, ಗಣಕೀಕೃತ ಬ್ಯಾಂಕಿಂಗ್‍ಗೆ ಚಾಲನೆ, ಇ-ಮುದ್ರಾಂಕ ಬಿಡುಗಡೆ, ಉಳಿತಾಯ ಖಾತೆಗೆ ಚಾಲನೆ, ಠೇವಣಿ ಪತ್ರ ಬಿಡುಗಡೆ ಹಾಗೂ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಾಯಿತು.
ಶ್ರೀ ವೀರಾಂಜನೆಯ ಮಂದಿರ ಅಡ್ಶಾರ್ ಅಧ್ಯಕ್ಷ ರಮೇಶ್ ತುಂಬೆ, ಉದ್ಯಮಿ ಸುರೇಂದ್ರ ಕಂಬ್ಳಿ ಅಡ್ಯಾರ್ ಗುತ್ತು, ಅಡ್ಯಾರ್ ಗ್ರಾ.ಪಂ ಅಧ್ಯಕ್ಷೆ ಝೀನತ್ ಬಾನು, ದ.ಕ. ಜಿಲ್ಲಾ ಕೋಳಿ ಸಾಕಣೆದಾರರ ವಿ.ಸ.ಸಂಘದ ಅಧ್ಯಕ್ಷ ದಯಾನಂದ ಅಡ್ಯಾರ್, ಉದ್ಯಮಿ ಹಾಗೂ ಕಟ್ಟಡ ಮಾಲಕ ಜಯಶೀಲ ಅಡ್ಯಂತಾಯ ಅಡ್ಯಾರ್‍ಗುತ್ತು, ಪ್ರಮುಖರಾದ ಪ್ರದೀಪ್ ಶೆಟ್ಟಿ ಅಡ್ಯಾರ್, ಮಹಮ್ಮದ್ ಸಮರ್, ಸುರೇಶ್ ರೈ, ಭುವನೇಶ್ ಪಚ್ಚಿನಡ್ಕ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೌಮ್ಯ ವಿಜಯ್ ವಂದಿಸಿದರು. ನಿತಿನ್ ನಿರೂಪಿಸಿದರು. ಸಂಘದ ನಿರ್ದೇಶಕರಾದ ಪರಮೇಶ್ವರ್ ಪೂಜಾರಿ, ಆನಂದ್ ಎಸ್ ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ , ಮುದ್ದು ಮೂಡುಬೆಳ್ಳೆ, ಬಿ ಪಿ ದಿವಾಕರ್, ಗೋಪಾಲ್ ಎಮ್, ಚಂದ್ರಾವತಿ, ಉಮಾವತಿ ಇದ್ದರು.