ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ 22ನೇ ನೀರುಮಾರ್ಗ ಶಾಖೆಯ ಉದ್ಘಾಟನೆ ಸಮೃದ್ಧಿ ಕಟ್ಟಡದಲ್ಲಿ ಶುಕ್ರವಾರ ನೆರವೇರಿತು.


ಶಾಖೆಯನ್ನು ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಬೆಳೆಯುತ್ತಿರುವ ಮಂಗಳೂರು ಮಹಾನಗರವು ಗ್ರಾಮೀಣ ಮಟ್ಟಕ್ಕೂ ವಿಸ್ತರಣೆಯಾಗುತ್ತಿದೆ. ಇಂತಹ ಸಂದರ್ಭ ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘವು ತನ್ನ ಶಾಖೆಗಳನ್ನು ವಿಸ್ತರಿಸುವ ಮೂಲಕ ಮಹತ್ತರ ಕೊಡುಗೆ ನೀಡುತ್ತಿದೆ. ಆತ್ಮಶಕ್ತಿ ಸಂಘವು ಕೇವಲ 10 ವರ್ಷಗಳಲ್ಲೇ 22 ಶಾಖೆ ಸ್ಥಾಪನೆ ಮಾಡಿ ಮಹತ್ತರ ಸಾಧನೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಕೃಷಿ ಹಿನ್ನಲೆಯ ನೀರುಮಾರ್ಗದಲ್ಲಿ ಆತ್ಮಶಕ್ತಿ ಶಾಖೆ ಸ್ಥಾಪನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಆತ್ಮಶಕ್ತಿ ಸಂಸ್ಥೆಯು ಮೈಕ್ರೋ ಸಾಲ ಸೇವೆ ಆರಂಭಿಸಿದ್ದು ಇದರಿಂದ ಸ್ವ ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಅನುಕೂಲವಾಗಿದೆ ಎಂದರು.
ನೀರುಮಾರ್ಗ ಗ್ರಾ.ಪಂ. ಅಧ್ಯಕ್ಷೆ ಧನವಂತಿ ಕಾರ್ಯಕ್ರಮವನ್ನು ಹಾಗೂ ಸಿವಿಲ್ ಕಂಟ್ರಾಕ್ಟರ್ ಆನಂದ್ ಸರಿಪಲ್ಲ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ, ನೀರುಮಾರ್ಗ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸತೀಶ್ ಅಂಚನ್, ಮಾಣೂರು ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಕುಂಞಣ್ಣ ಶೆಟ್ಟಿ, ನೀರುಮಾರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಸೆಲಿನ್ ಡಿಮೆಲ್ಲೋ, ನೀರುಮಾರ್ಗ ಗ್ರಾ.ಪಂ.ಸದಸ್ಯೆ ಕಸ್ತೂರಿ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಅಧ್ಯಕ್ಷ ತುಕರಾಮ, ಉದ್ಯಮಿ ಮಹಮ್ಮದ್ ಹನೀಫ್, ಸಮೃದ್ಧಿ ಕಾಂಪ್ಲೆಕ್ಸ್ ಮಾಲಕ ಶ್ರೀಧರ ಪೂಜಾರಿ,ಆತ್ಮಶಕ್ತಿ ನಿರ್ದೇಶಕರಾದ ಆನಂದ ಎಸ್. ಕೊಂಡಾಣ,ಸೀತಾರಾಮ ಎನ್, ರಮಾನಾಥ ಸನಿಲ್, ಚಂದ್ರಹಾಸ ಮರೋಳಿ, ಚಂದ್ರಾವತಿ ಮತ್ತು ಉಮಾವತಿ ಉಪಸ್ಥಿತರಿದ್ದರು.
ಆತ್ಮಶಕ್ತಿ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ಸ್ವಾಗತಿಸಿದರು. ಸಿಇಒ ಸೌಮ್ಯ ವಿಜಯ್ ವಂದಿಸಿದರು. ನಿತಿನ್ ಮತ್ತು ವಿಶ್ವನಾಥ್ ನಿರೂಪಿಸಿದರು.