ಬ್ಯಾಂಕಿಂಗ್ , ಆರೋಗ್ಯ, ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಕೊಡುಗೆ ಅಪಾರವಾದುದು. ಅದೇ ರೀತಿ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲು ಸಹಕಾರಿ ರಂಗವೇ ಕಾರಣ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ಪಡುಬಿದ್ರಿ ಮುಖ್ಯ ರಸ್ತೆಯ ಧನ್ವಂತರಿ ಕೃಪಾ ಅಂಚನ್ ಸಂಕೀರ್ಣದಲ್ಲಿ ಆರಂಭಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 23ನೇ ಪಡುಬಿದ್ರಿ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ, ಅತೀ ಕಡಿಮೆ ಅವಧಿಯಲ್ಲಿ 23 ಶಾಖೆಗಳನ್ನು ಹೊಂದುವ ಮೂಲಕ ಬಲಿಷ್ಠಗೊಂಡ ಸಂಸ್ಥೆಯು ಅತೀ ಶೀಘ್ರವಾಗಿ 100 ಶಾಖೆಗಳನ್ನು ಹೊಂದುವಂತಾಗಲಿ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ , ದಶಮಾನೋತ್ಸವ ಸಂಭ್ರಮದಲ್ಲಿರುವ ಆತ್ಮಶಕ್ತಿ ಸಂಘವು ಅತೀ ಶೀಘ್ರದಲ್ಲಿ ಸಂಘದ 24ನೇ ಶಾಖೆ ಗಂಜಿಮಠದಲ್ಲಿ ಮತ್ತು 25ನೇ ಶಾಖೆ ಕಾಪುವಿನಲ್ಲಿ ಆರಂಭಿಸಲಿದೆ ಎಂದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಸಂಘದ ಭದ್ರತಾ ಕೋಶ ಉದ್ಘಾಟಿಸಿದರು. ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಗಣಕೀಕೃತ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಿದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಝ್ ಇ-ಮುದ್ರಾಂಕ ಸೇವೆಗೆ ಚಾಲನೆ ನೀಡಿದರು. ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ರಮಾಕಾಂತ ರಾವ್ ಉಳಿತಾಯ ಯೋಜನೆಗೆ ಚಾಲನೆ ನೀಡಿದರು. ಹೆಜಮಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ನಿರಖು ಠೇವಣಿ ಯೋಜನೆಗೆ ಚಾಲನೆ ನೀಡಿದರು. ಪಡುಬಿದ್ರಿ ಅಂಚನ್ ಅಯುರ್ವೇದಿಕ್ ಇಂಡಸ್ಟ್ರೀಸ್ ಮಾಲೀಕರಾದ ಡಾ. ಎನ್. ಟಿ. ಅಂಚನ್ ವಿಶೇಷ ಚಿನ್ನಾಭರಣ ಸಾಲ ಯೋಜನೆಗೆ ಚಾಲನೆ ನೀಡಿದರು.
ಪಲಿಮಾರು ಗ್ರಾ.ಪಂ. ಪೂರ್ವಾಧ್ಯಕ್ಷ ಜಿತೇಂದ್ರ ಫುರ್ಟಾಡೋ ರವರು ಆವರ್ತನ ಖಾತೆಗೆ ಚಾಲನೆ ನೀಡಿದರು. ಆತ್ಮಶಕ್ತಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ ಎನ್, ರಮಾನಾಥ ಸನಿಲ್, ಚಂದ್ರಹಾಸ್ ಮರೋಳಿ, ದಿವಾಕರ ಬಿ. ಪಿ., ಗೋಪಾಲ ಎಮ್., ಚಂದ್ರಾವತಿ, ಉಮಾವತಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ಸಂಘದ ಸಿಬ್ಬಂದಿ ನಿತಿನ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಧಿಕಾರಿ ಸೌಮ್ಯ ವಿಜಯ್ ವಂದಿಸಿದರು.