ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪ್ರಧಾನ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಧ್ವಜಾರೋಹಣ ನೆರವೇರಿಸಿದರು.

ಸಂಘದ ದಶಮಾನೋತ್ಸವದ ಪ್ರಯುಕ್ತ ರಾಷ್ಟ್ರಕ್ಕಾಗಿ ಸೇವೆಗೈದ ಹತ್ತು ಮಂದಿ ಯೋಧರಾದ ಶ್ರೀ ಉಮೇಶ್ ಕೊರಗೋಡ್, ಶ್ರೀ ವಿಲಾಸ್, ಶ್ರೀ ಸುಧಾಕರ್ ಎಮ್, ಶ್ರೀ ಶಿವರಾಮ್, ಶ್ರೀ ನಾಯಕ್ ಶಂಕರ್, ಶ್ರೀ ಹನುಮಂತ್ ಬೆಳಿಕುಪ್ಪಿ, ಶ್ರೀ ಗಮ್ ನಾಮ್ ದೇವ್, ಡಾ. ದೊಡ್ಡ ನಂಜಯ್ಯ ಎಚ್. ಎಮ್, ಶ್ರೀ ಅಶೋಕ್ ಕುಮಾರ್, ಶ್ರೀ ಆನಂದ್ ಪೂಜಾರಿ ರವರು ಆತ್ಮ ಸನ್ಮಾನ ಗೌರವವನ್ನು ಸ್ವೀಕರಿಸಿದರು.
ಯೋಧರಾದ ಶ್ರೀ ವಿಲಾಸ್ ಗೌರವ ಸ್ವೀಕರಿಸಿ ಮಾತನಾಡಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತಾವು ಪಾಲ್ಗೊಂಡಿದ್ದ ಕಾರ್ಯಚರಣೆ ಹಾಗೂ ಯೋಧರ ಅಂದಿನ ಪರಿಸ್ಥಿತಿಯನ್ನು ಪ್ರಸ್ತಾಪಿಸಿ ಬಾವುಕರಾದರು. ಸ್ವಾತಂತ್ರ್ಯ ದಿನಾಚರಣೆಯ ಶತಮಾನೋತ್ಸವ ಸುಸಂದರ್ಭದಲ್ಲಿ ಸಂಘವು 100 ಮಂದಿ ಯೋಧರನ್ನು ಗೌರವಿಸುವಂತಾಗಲಿ ಎಂದರು.
ಯೋಧರಾದ ಡಾ. ದೊಡ್ಡ ನಂಜಯ್ಯ ಎಚ್. ಎಮ್. ರವರು ಮಾತನಾಡಿ ಕರಾವಳಿಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಹೇಳಿದರು.
ಯೋಧರಾದ ಶ್ರೀ ನಾಯಕ್ ಶಂಕರ್ ಮಾತನಾಡಿ ಅಂದು ನಮಗೆ ನಮ್ಮ ಹಿರಿಯ ಯೋಧರು ತರಬೇತಿ ನೀಡಿದ್ದು, ಆ ಮೂಲಕ ಈಗ ನಾವು ನಮ್ಮ ಸೇನೆಯ ಆಕಾಂಕ್ಷಿಗಳಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷರಾದ “ಸಹಕಾರ ರತ”್ನ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ರಾಷ್ಟ್ರದ ಹಲವು ಯುದ್ಧದಲ್ಲಿ ಭಾಗವಹಿಸಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ಯೋಧರನ್ನು ಸನ್ಮಾನಿಸುವುದು ನಮ್ಮ ಭಾಗ್ಯವೆಂದರು.
ಸಂಘದ ನಿರ್ದೇಶಕರಾದ ಶ್ರೀ ಪರಮೇಶ್ವರ್ ಜಿ ಪೂಜಾರಿ, ಶ್ರೀ ಸೀತರಾಮ್ ಎನ್, ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ರಮಾನಾಥ್ ಸನಿಲ್, ಶ್ರೀ ಚಂದ್ರಹಾಸ್ ಮರೋಳಿ, ಶ್ರೀ ಬಿ.ಪಿ. ದಿವಾಕರ್, ಶ್ರೀ ಗೋಪಾಲ್ ಎಂ. ಶ್ರೀಮತಿ ಉಮಾವತಿ ಮತ್ತು ಶ್ರೀಮತಿ ಚಂದ್ರಾವತಿ, ಬ್ರಹ್ಮ ಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಸಂಪಾದಕರಾದ ಶ್ರೀ ವಾಮನ್ ಕೆ, ಟ್ರಸ್ಟಿ ಬಾಬು ಎಸ್ ಕರ್ಕೇರ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಶ್ರೀ ಮುದ್ದು ಮೂಡುಬೆಳ್ಳೆ ಪ್ರಸ್ತಾವಿಕ ಭಾಷಣ ಮಾಡಿದರು. ಸಂಘದ ಸಿಬ್ಬಂದಿ ಶ್ರೀ ನಿತಿನ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ. ವಂದಿಸಿದರು.