ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ|ಭರತ್ ಶೆಟ್ಟಿ ಮಾತನಾಡಿ , ಆತ್ಮಶಕ್ತಿ ವಿವಿದೋಧ್ಧೇಶ ಸಹಕಾರಿ ಸಂಘ ಮುಂಚೂಣಿಯಲ್ಲಿ ಇದ್ದು ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದೆ ಹಾಗೂ ಸಂಘದ ಸಿಬ್ಬಂದಿಗಳ ಸರಳತೆ ಹಾಗೂ ಶಿಸ್ತಿನ ಬಗ್ಗೆ ಶ್ಲಾಘನೆ ಮಾಡಿದರು .ಮುಂದುವರಿದು ಮಾತನಾಡುತ್ತಾ ಸಾಲ ನೀಡುವಿಕೆಯಲ್ಲಿ ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಸಂಘಗಳಲ್ಲಿ ಸ್ಪರ್ಧಾತ್ಮಕ ಬೆಳವಣಿಗೆ ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, 10 ವರ್ಷಗಳಲ್ಲಿ ನಮ್ಮ ಸಂಘದ 24 ಶಾಖೆಗಳು ಉದ್ಘಾಟನೆಗೊಂಡಿವೆ. ಅತೀ ಶೀಘ್ರದಲ್ಲಿ ಸಂಘದ 25ನೇ ಶಾಖೆಯು ಕಾಪುವಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ನೋಣಯ್ಯ ಕೋಟ್ಯಾನ್ ಅವರು ಭದ್ರತಾ ಕೋಶವನ್ನು ಉದ್ಘಾಟಿಸಿದರು.
ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ ಗಣಕೀಕೃತ ಬ್ಯಾಂಕಿಂಗ್ ಗೆ ಚಾಲನೆ ನೀಡಿದರು.
ಬಗರ ಹುಕಂ ಅಕ್ರಮ ಸಕ್ರಮ ಸಮಿತಿ ಸದ್ಯಸರಾದ ಶೋಹನ್ ಅತಿಕಾರಿ ಅವರು ನಿರಖು ಠೇವಣಿ ಪತ್ರ ಬಿಡುಗಡೆ ಮಾಡಿದರು.
ಬಿಲ್ಲವ ಸಮಾಜ ಸೇವಾ ಸಂಘ ಪೆರಾರ ಗಂಜಿಮಠ ಗೌರವಾಧ್ಯಕ್ಷ ಶ್ರೀ ಕೃಷ್ಣ ಅಮೀನ್ ಅವರು ಉಳಿತಾಯ ಖಾತೆಗೆ ಚಾಲನೆ ನೀಡಿದರು.
ನೋಟರಿ ವಕೀಲರಾದ ಶ್ರೀಮತಿ ಪುನೀತ ಅವರು ಇ ಮುದ್ರಾಂಕ ಸೇವೆಗೆ ಚಾಲನೆ ನೀಡಿದರು
ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಗಂಜಿಮಠ ಇದರ ಅಧ್ಯಕ್ಷ ಶ್ರೀ ಜನಾರ್ಧನ ಒಡ್ಡೂರು ಇವರು ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಿದರು.
ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಸುನಿಲ್ ಮನೋಜ್ ಫೆರ್ನಾಂಡಿಸ್ ಅವರು ಆವರ್ತನ ಠೇವಣಿ ಪತ್ರ ಬಿಡುಗಡೆ ಮಾಡಿದರು.
ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಮುದಾ ನಾಯ್ಕ್, ಸದಸ್ಯರಾದ ಮಹಮ್ಮದ್ ಜಹೂರ್, ಮೊಹಮ್ಮದ್ ಸಾದಿಕ್, ರೋಹಿತಾಕ್ಷೀ ತಾಲೂಕು ಪಂಚಾಯತ್ ಮಾಜಿ ಸದಸ್ಯ ಶ್ರೀ ಜಿ.ಸುನಿಲ್ ಸಂಘದ ನಿರ್ದೇಶಕರುಗಳಾದ ಶ್ರೀಯುತ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸೀತಾರಾಮ ಎನ್, ಶ್ರೀ ರಮಾನಾಥ್ ಸನಿಲ್, ಶ್ರೀ ಚಂದ್ರಹಾಸ ಮರೋಳಿ,
ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ಗೋಪಾಲ ಎಂ , ಶ್ರೀಮತಿ ಉಮಾವತಿ, ಶಾಖಾಧಿಕಾರಿ ಸುಜಾತ ಮತ್ತಿತತರು ಉಪಸ್ಥಿತರಿದ್ದರು.
ಶಾಖೆ ತೆರೆಯುವಲ್ಲಿ ವಿಶೇಷ ಸಹಕಾರ ನೀಡಿದ ವಕೀಲ ಅಕ್ಷಯ್ ಕೋಟ್ಯಾನ್, ಸೋಹನ್ ಅತಿಕಾರಿ ಹಾಗೂ ಜಯಂತ್ ಅವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆದ ಶ್ರೀಮತಿ ಸೌಮ್ಯ ವಿಜಯ್ ಅವರು ಸ್ವಾಗತಿಸಿದರು, ನಿರ್ದೇಶಕ ಶ್ರೀಯುತ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದರು, ಸಂಘದ ಉಪಾಧ್ಯಕ್ಷರಾದ ಶ್ರೀಯುತ ನೇಮಿರಾಜ್ ಪಿ ಅವರು ವಂದಿಸಿದರು. ಮಾನವ ಸಂಪನ್ಮೂಲ ಅಧಿಕಾರಿ ದೀಪಿಕಾ ಸನಿಲ್ ಹಾಗು ಶಾಖಾಧಿಕಾರಿ ಶ್ರೀಮತಿ ಧನಲಕ್ಷ್ಮಿ ರವರು ಕಾರ್ಯಕ್ರಮ ನಿರ್ವಹಿಸಿದರು