ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಸಿಬ್ಬಂದಿಗಳಿಗೆ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ಕಾರ್ಯಗಾರವು ಮಂಗಳೂರು ಇನ್‍ಸ್ಟಿಟ್ಯೂಟ್ ಆಪ್ ಆಂಕೊಲಾಜಿ, ಸ್ಪೇಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಪಂಪುವೆಲ್ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 22.10.2022 ರಂದು ಸಂಘದ ಪ್ರಧಾನ ಕಚೇರಿ ನಗರದ ಪಡೀಲ್‍ನ ಆತ್ಮಶಕ್ತಿ ಸೌಧದ ಸಭಾಂಗಣದಲ್ಲಿ ಜರುಗಿತು.


ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಇನ್‍ಸ್ಟಿಟ್ಯೂಟ್ ಆಪ್ ಆಂಕೊಲಾಜಿಯ ನಿರ್ದೇಶಕರು ಹಾಗೂ ಸೀನಿಯರ್ ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಕೃಷ್ಣಪ್ರಸಾದ್‍ರವರು ಕ್ಯಾನ್ಸರ್ ರೋಗ ಬರಲು ಕಾರಣ, ಅದನ್ನು ತಡೆಗಟ್ಟುವಿಕೆ ಹಾಗೂ ನಿವಾರಣೆಯ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಾ. ಕೃಷ್ಣಪ್ರಸಾದ್‍ರವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್, ನಿರ್ದೇಶಕರುಗಳಾದ ಶ್ರೀ ಚಂದ್ರಹಾಸ ಮರೋಳಿ , ಶ್ರೀ ಗೋಪಾಲ್ ಎಮ್. ಶ್ರೀಮತಿ ಉಮಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಮಂಗಳೂರು ಇನ್‍ಸ್ಟಿಟ್ಯೂಟ್ ಆಪ್ ಆಂಕೊಲಾಜಿ, ಸ್ಪೇಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಶ್ರೀ ದುರ್ಗದಾಸ್ ಅಡಪ, ಶ್ರೀ ರಾಜೇಶ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.