ಸಂಘದ ಅಧ್ಯಕ್ಷರು ಮಾತನಾಡಿ 10 ವರ್ಷದ ಮೊದಲು ಇ-ಸ್ಟಾಂಪಿಂಗ್ ಗಾಗಿ ಆರಂಭವಾದ ಈ ಶಾಖೆಯು ಈಗ ಬ್ಯಾಂಕಿಂಗ್ ಸೇವೆಯಲ್ಲೂ ಅಗ್ರಸ್ಥಾನಿ ಯಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಶಾಖೆ ಯನ್ನು ತೆರೆಯುವ ಉದ್ದೇಶದೊಂದಿಗೆ , ಬ್ಯಾಂಕಿಂಗ್ ಸೇವೆಯನ್ನು ಆಧುನೀಕರಣಗೊಳಿಸುವ ಇಚ್ಚೆಯನ್ನು ವ್ಯಕ್ತಪಡಿಸಿದರು. ಸಂಘದ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸಿದ ಸಂಘದ ಆಡಳಿತ ಮಂಡಳಿ, ಹಾಗೂ ಸಿಬ್ಬಂದಿ ವರ್ಗವನ್ನು ಪ್ರಶಂಶಿಸಿದರು.
ಸಂಘದ ಗ್ರಾಹಕರಾದ ಶ್ರೀಯುತ ಗಿರಿಯಪ್ಪ ಕುಲಾಯಿ ಇವರು ಇ-ಸ್ಟಾಂಪಿಂಗ್ ವಿತರಣೆಯಲ್ಲಿ ಸಂಘದ ಸಾಧನೆಯನ್ನು ಶ್ಲಾಘಿಸಿದರು. ಹಾಗೂ ಸದಸ್ಯರಾದ ಶ್ರೀಯುತ ಜಗದೀಶ ರವರು ಸಂಘದ ಬೆಳವಣಿಗೆಯ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಂಘವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ರಮಾನಾಥ ಸನಿಲ್, ಶ್ರೀ ಬಿ ಪಿ ದಿವಾಕರ, ಶ್ರೀ ಗೋಪಾಲ ಎಮ್, ಶ್ರೀಮತಿ ಉಮಾವತಿ ಹಾಗೂ ಸಲಹಾ ಸಮಿತಿ ಸದಸ್ಯರಾದ ಶ್ರೀ ಜಗದೀಶ್ ಕೊಟ್ಯಾನ್, ಶ್ರೀ ಲಕ್ಶ್ಮಣ್ ಸಾಲ್ಯಾನ್, ಶ್ರೀ ಕೆ ರಾಜೀವ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು. ಶಾಖಾಧಿಕಾರಿ ಯಾದ ಶ್ರೀಮತಿ ಸುಮನ ಸ್ವಾಗತಿಸಿ, ಸಹಾಯಕ ಪ್ರಬಂಧಕ ಶ್ರೀ ವಿಶ್ವನಾಥ ರವರು ವಂದಿಸಿದರು. ಶಾಖಾಧಿಕಾರಿ ಕುಮಾರಿ ಪ್ರಜ್ನ ಸನಿಲ್ ಕಾರ್ಯಕ್ರಮ ನಿರೂಪಿಸಿದರು.