ಮಂಗಳೂರು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ 25ನೇ ನೂತನ ಕಾಪು ಶಾಖೆಯನ್ನು ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮರಾಟ ಮಹಾಮಂಡಳದ ಅದ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಭಾನುವಾರ ಶಾಖೆಯನ್ಜು ಉದ್ಘಾಟಿಸಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಉನ್ನತ ಸಾಧನೆಯನ್ನು ಮಾಡಿದ್ದು ಆರಂಭಗೊಂಡ ಕೇವಲ 10ವರ್ಷದಲ್ಲಿಯೇ 25ನೇ ಶಾಖೆಯನ್ನು ಕಾಪುವಿನಲ್ಲಿ ತೆರೆಯುವ ಮೂಲಕ ಜನರ ಪ್ರೀತಿ ವಿಶ್ವಾಸಗಳಿಸಿದೆ. ಆ ಮೂಲಕ ಸಹಕಾರ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಯನ್ನು ಮಾಡಿದಂತಾಗಿದೆ. ಈ ಸಹಕಾರ ಸಪ್ತಾಹದ ಸಂಧರ್ಭದಲ್ಲಿಯೂ ಸಮವಸ್ತ್ರಧಾರಿಗಳಾಗಿ ಪಾಲ್ಗೊಂಡಿದ್ದು ಸಪ್ತಾಹಧ ಮೆರುಗು ನೀಡಿದೆ ಎಂದರು.


ಮುಖ್ಯ ಅತಿಥಿಯಾಗಿದ್ದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡುವ ಅತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘವು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸೇವೆಯ ಮೂಲಕ ಜನ ಮಾನಸದಲ್ಲಿ ಅಚ್ಚಲಿಯದೆ ಉಳಿವಂತಾಗಿದ್ದು,ಇದೀಗ 25ನೇ ಶಾಖೇಯನ್ನು ಕಾಪುವಿನಲ್ಲಿ ತೆರೆಯುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯ. ಕೇವಲ ಬ್ಯಾಂಕಿಂಗ್ ಕ್ಷೇತ್ರ ಮಾತ್ರವಲ್ಲದೇ ವಿವಿಧ ಸಾಮಾಜಿಕ ಬದ್ದತೆಯ ಸೇವಾ ಕೆಲಸ ಕಾರ್ಯಗಳಲ್ಲಿಯೂ ಕೈ ಜೋಡಿಸಿ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಕೊರೋನ ಆರ್ಥಿಕ ಮುಗ್ಗಟ್ಟು ಇದ್ದರೂ ಅತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘವು ಗುಣಮಟ್ಟದ ಸೇವೆಯ ಅದ್ಭುತ ರೀತಿಯಲ್ಲಿ ಆರ್ಥಿಕ ಚಟುವಟಿಕೆ ನಡೆಸುತ್ತಿದೆ. 10ವರ್ಷದಲ್ಲಿ 25 ಶಾಖೆಗಳನ್ನು ಹೊಂದಿರುವ ಸಂಸ್ಥೆಯು ಮುಂದೆ ಕರಾವಳಿಯ ಜಿಲ್ಲೆಯ ಎಲ್ಲೆಡೆ ಜನಮೆಚ್ಚುವ ಸಹಕಾರಿ ಸಂಘವಾಗಿ ಮೂಡಿ ಬರುವಂತಾಗಲಿ ಎಂದು ಶುಭ ಹಾರೈಸಿದರು.
ಮಂಗಳೂರು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅದ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮರಾಟ ಮಹಮಂಡಳದ ಅದ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ. ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಕೆ ವಾಸುದೇವ ಶೆಟ್ಟಿ, ಉದ್ಯಮಿ ಮನೋಹರ್ ಎಸ್ ಶೆಟ್ಟಿ, ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘ ಅದ್ಯಕ್ಷ ಕಾಪು ದಿವಾಕರ ಶೆಟ್ಟಿ, ಮಂಗಳೂರು ಸಹಕಾರ ಸಂಘಗಳ ಅಧಿಕಾರಿ ಸುದೀರ್ ಕುಮಾರ್, ಕಾಪು ಮಹಾಬಲ ಮಾಲ್‍ನ ಆಡಳಿತ ನಿರ್ದೇಶಕ ಯೋಗೀಶ್ ಶೆಟ್ಟಿ, ಕಾಪು ಬಿಲ್ಲವರ ಸಹಾಯಕ ಸಂಘದ ಮಾಜಿ ಅದ್ಯಕ್ಷ ಮಾಧವ ಆರ್ ಪಾಲನ್, ಕಾಪು ಪುರಸಭೆ ಸದಸ್ಯೆ ಸರಿತಾ ಪೂಜಾರಿ, ಕಟ್ಟಡದ ಮಾಲಕರು ಉಮಾನಾಥ್ ಕೆ ಬಂಗೇರ ಕಾಪು ವೇದಿಕೆಯಲ್ಲಿದ್ದರು. ಆತ್ಮಶಕ್ತಿ ಪತ್ರಿಕೆಯ ಸಂಪಾದಕ ವಾಮನ್ ಕೆ, ಎಸ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಲ್ಯೊಟ್ಟು, ರಾಜೇಶ್ ರಾವ್ ಪಾಂಗಾಳ, ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಪರಮೇಶ್ವರ್ ಪೂಜಾರಿ .ಆನಂದ್ ಎಸ್ ಕೊಂಡಾನ್,ಸೀತಾರಾಮ್ ಎನ್, ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ, ಮುದ್ದು ಮೂಡುಬೆಳ್ಳೆ, ದಿವಾಕರ್ ಬಿ ಪಿ, ಚಂದ್ರಾವತಿ, ಉಮಾವತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು .
ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅದ್ಯಕ್ಷ ಚಿತ್ತರಂಜನ್ ಬೋಳಾರ್ ಪ್ರಾಸ್ತಾವನೆಯೊಂದಿಗೆ ಸ್ವಾಗತಿಸಿದರು.ಉಪಾದ್ಯಕ್ಷ ನೇಮಿರಾಜ್ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.