ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 27ನೇ ಶಾಖೆಯನ್ನು ಮಡಂತ್ಯಾರಿನ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಉದ್ಟಾಟಿಸಿ ಮಾತನಾಡಿದರು.
ಸಂಘವು ದಶಮಾನೋತ್ಸವ ಆಚರಿಸುತ್ತಿರುವ ವೇಳೆ 27ನೇ ಶಾಖೆ ತೆರೆದು ಜನಮನ್ನಣೆ ಗಳಿಸಿದೆ. ಸಿಬ್ಬಂದಿಯ ಪ್ರಾಮಾಣಿಕ ಸೇವೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವಂತೆ ಮಾಡಿದೆ. ಭವಿಷ್ಯದಲ್ಲಿ ಇನ್ನಷ್ಟು ಶಾಖೆ ತೆರೆಯುವ ಶಕ್ತಿ ನೀಡಲಿ ಎಂದರು.
ಗಣಕ ಯಂತ್ರ ಉದ್ಟಾಟಿಸಿದ ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಈ ಸಂಘವು ತನ್ನ ಸೇವಾ ತತ್ಪರತೆಯಿಂದ ಭವಿಷ್ಯದ ನಂಬಿಕಾರ್ಹ ಸಂಸ್ಥೆಯಾಗಿ ಬೆಳೆಯುವ ವಿಶ್ವಾಸವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘವು ವ್ಯವಹಾರದ ದೃಷ್ಟಿಕೋನದ ಜತೆಗೆ ತಮ್ಮ ಚಾರಿಟೇಬಲ್ ಮೂಲಕ ಸೇವಾ ನಿಧಿಗೂ ಮಹತ್ವ ನೀಡಿದೆ. ವಿದ್ಯಾರ್ಥಿಗಳಿಗೆ, ಆಶಕ್ತರಿಗೆ ಸಂಘದ ಲಾಭಾಂಶದಲ್ಲಿ ಪ್ರತಿವರ್ಷ ನೆರವು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅಳದಂಗಡಿ, ಮಾಣಿ, ಕೆ.ಸಿ.ರೋಡ್ ನಲ್ಲಿ ನೂತನ ಶಾಖೆ ತೆರೆಯಲು ಪ್ರಯತ್ನಿಸಲಿದೆ ಎಂದು ಹೇಳಿದರು.
ಅತಿಥಿಗಳು ಬ್ಯಾಂಕ್ ನಿರಖು ಠೇವಣಿ ಪತ್ರ, ಆವರ್ತನಾ ಶಾಖೆ, ಉಳಿತಾಯ ಖಾತೆ, ಇ ಮುದ್ರಾಂಕ ಸೇವೆಗೆ ಚಾಲನೆ ಸೇರಿದಂತೆ ಮೈಕ್ರೋಸಾಲ ವಿತರಣೆ ಮಾಡಲಾಯಿತು.
ಮಾಲಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಸುಸ್ಸಾನ, ಶ್ರೀ ಗುರುದೇವ ವಿ. ಸ. ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಕೊರಿಂಜ ದೇವಸ್ಥಾನ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಮಡಂತ್ಯಾರು ಗ್ರಾ.ಪಂ ಸದಸ್ಯ ವಿಶ್ವಾನಾಥ ಪೂಜಾರಿ, ಉದ್ಯಮಿಗಳಾದ ಪ್ರಶಾಂತ್ ಎಂ ಪಾರೆಂಕಿ, ಬಿ ಹೈದರ್, ಕಟ್ಟಡ ಮಾಲಕ ಎಂ.ತಿಮ್ಮಪ್ಪ ಗೌಡ, ನಿರ್ದೇಶಕರಾದ ಜಿ ಪರಮೇಶ್ವರ , ಆನಂದ ಎಸ್ ಕೊಂಡಣ, ಸೀತಾರಾಮ ಎನ್, ರಮನಾಥ ಸನಿಲ್, ದಿವಾಕರ ಬಿ ಪಿ, ಗೋಪಾಲ್ ಎಂ , ಚಂದ್ರಾವತಿ, ಉಮಾವತಿ, ಸಿಇಒ ಸೌಮ್ಯ ವಿಜಯ್, ಶಾಖಾಧಿಕಾರಿ ಸುರಕ್ಷಾ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶ್ರೀ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು.