ಗ್ರಾಮೀಣ ಪ್ರದೇಶಗಳು ಈಗ ಬೃಹತ್ ವೇಗದಲ್ಲಿ ಮತ್ತು ಪ್ರತಿಯೊಂದು ಅಂಶದಲ್ಲೂ ಅಭಿವೃದ್ಧಿ ಹೊಂದುತ್ತಿವೆ. ಸಹಕಾರಿ ಸಂಘಗಳು ಇದರಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಗ್ರಾಮೀಣ ಅಭಿವೃದ್ಧಿಯನ್ನು ಬೆಂಬಲಿಸಲು, ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘವು ಪರಸ್ಪರ ಸಹಾಯ ಮತ್ತು ಸ್ವ-ಸಹಾಯದ ಕಲ್ಪನೆಯನ್ನು ಅನುಸರಿಸುತ್ತದೆ. ಆತ್ಮಶಕ್ತಿ ಸಹಕಾರಿ ಸಂಘದ ಸೇವೆ ಬ್ಯಾಂಕಿಗೆ ಮಾತ್ರ ಸೀಮಿತವಲ್ಲದೇ ಸಾಮಾಜಿಕವಾಗಿ ಮುಂದುವರಿದಿದೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಹೇಳಿದರು.


ಅವರು ಅಳದಂಗಡಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 28 ನೇ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
2012 ರ ಜನವರಿ 30 ರಂದು ನಮ್ಮ ಸಂಘದ ಪ್ರಥಮ ಶಾಖೆಯನ್ನು ಮಾಜಿ ಕೇಂದ್ರ ಸಚಿವರು, ಹಿರಿಯರಾದ ಜನಾರ್ದನ ಪೂಜಾರಿಯವರು ಉದ್ಘಾಟಿಸಿ ಇಂದು ಅಲ್ಪಾವಧಿಯಲ್ಲೇ ಉಭಯ ಜಿಲ್ಲೆಯಲ್ಲಿ ಜನ ಉಪಯೋಗಕ್ಕಾಗಿ 28 ಶಾಖೆಗಳನ್ನು ಆರಂಭಿಸಿದ್ದೇವೆ. ಇದೆಲ್ಲಾ ಪ್ರತಿಯೋರ್ವರ ಶ್ರಮದಿಂದ ನಡೆದಿದೆ ಎಂದರು.
ನೂತನ ಶಾಖೆಯನ್ನು ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ಉದ್ಘಾಟಿಸಿ ಮಾತನಾಡಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.ದೇಶದ ಅಭಿವೃದ್ಧಿಗೆ ಇಂತಹ ಸಹಕಾರಿ ಸಂಘಗಳ ಕೊಡುಗೆ ಅಪಾರವಾದದ್ದು ಎಂದರು.
ದೀಪ ಪ್ರಜ್ವಲನೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ ನೇರವೇರಿಸಿ ಮಾತನಾಡಿ ಆತ್ಮಶಕ್ತಿ ಸಹಕಾರಿ ಸಂಘ ಸಾಧನೆಯ ಉತ್ತುಂಗದಲ್ಲಿದೆ. ಅಳದಂಗಡಿ ಪರಿಸರದಲ್ಲಿ ಸುಮಾರು ಹಣಕಾಸಿನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಈ ಸಂಸ್ಥೆಗೆ ನಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಭದ್ರತಾ ಕೋಶ ಉದ್ಘಾಟನೆಯನ್ನು ಅಳದಂಗಡಿಯ ಖ್ಯಾತ ವೈದ್ಯರಾದ ಡಾ. ಎನ್.ಎಂ ತುಳಪುಳೆ ನೇರವೇರಿಸಿ ಮಾತನಾಡಿ ಈ ಬ್ಯಾಂಕಿನ ಕಾರ್ಯವೈಖರಿ ಅತ್ಯಂತ ಪ್ರಖರವಾದದ್ದು. ಕೆಲವೇ ವರ್ಷದಲ್ಲಿ 28 ಶಾಖೆಗಳನ್ನು ತೆರದದ್ದು ಮಹತ್ತರ ಸಾಧನೆ. ಹಣಕಾಸು ಚಟುವಟಿಕೆಯೊಂದಿಗೆ ಮಹಿಳಾ ಸಬಲೀಕರಣ,ಸಾಮಾಜಿಕ ಕೆಲಸ ಬದ್ದತೆ ಶ್ಲಾಘನೀಯ ಎಂದರು.

ಅಳದಂಗಡಿ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು ಮೈಕ್ರೊ ಸಾಲಕ್ಕೆ ಚಾಲನೆ ನೀಡಿ ಒಳ್ಳೆಯ ಉದ್ದೇಶವಿಟ್ಟು ಕೆಲಸ ಮಾಡಿದ ಫಲವಾಗಿ ಇಂದು ಆತ್ಮಶಕ್ತಿ ಸಹಕಾರಿ ಸಂಘ 10 ವರ್ಷದಲ್ಲಿ 28 ಶಾಖೆಗಳನ್ನು ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರಲ್ಲಿ ಬೆಳಕು ಚೆಲ್ಲಿದೆ. ದೇವಸ್ಥಾನಕ್ಕೆ ಭಕ್ತರು ಬರಬೇಕಾದರೇ ಅಲ್ಲಿ ಆರ್ಚಕರು ಹೇಗೋ ಅದೇ ರೀತಿ ಬ್ಯಾಂಕಿಗೆ ಗ್ರಾಹಕರು ಬರುವಾಗ ಸಿಬ್ಬಂದಿಗಳ ನಗುಮೊಗದ ಸೇವೆ ಕೂಡ ಮುಖ್ಯ ಎಂದರು.
ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು ಮಾತನಾಡಿ ಅಳದಂಗಡಿ ಭಾಗದಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲಾ. ಕೃಷಿಕರೆ ಹೆಚ್ಚಾಗಿರುವುದರಿಂದ ಜನರಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯ ಈ ಸಂಘವು ನೀಡುವಂತಾಗಲಿ. ಗ್ರಾಹಕರ ಸಹಕಾರದೊಂದಿಗೆ ಬ್ಯಾಂಕ್ ಅಭಿವೃದ್ಧಿ ಹೊಂದಲಿ ಎಂದರು.
ವೇದಿಕೆಯಲ್ಲಿ ಅಳದಂಗಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ, ಅಳದಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ನಿಕಟಪೂರ್ವಧ್ಯಕ್ಷ ಸುಧೀರ್ ಆರ್ ಸುವರ್ಣ, ಕುದ್ಯಾಡಿಗುತ್ತು ಕಟ್ಟಡ ಮಾಲಕ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸ್ವಾಗತಿಸಿ, ಉಪಾಧ್ಯಕ್ಷ ನೇಮಿರಾಜ್ ಪಿ ವಂದಿಸಿದರು. ಶಾಖಾಧಿಕಾರಿಗಳಾದ ಶ್ರೀಮತಿ ಧನಲಕ್ಷ್ಮೀ ಹಾಗೂ ಶ್ರೀಮತಿ ರಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್ ಕೊಂಡಾಣ, ಸೀತರಾಮ್ ಎನ್, ರಮಾನಾಥ ಸನಿಲ್, ಗೋಪಾಲ್ ಎಮ್. ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಎಜಿಎಂ ವಿಶ್ವನಾಥ, ಶಾಖಾಧಿಕಾರಿ ಕಾವ್ಯಶ್ರೀ ಅನಿಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.