ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಬಂಟ್ವಾಳದ ನ್ಯಾಯವಾದಿ ಶ್ರೀಮತಿ ಶೈಲಜಾರಾಜೇಶ್ “ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಲು ಖಂಡಿತಾ ಸಾಧ್ಯವಿಲ್ಲ, ಯಾಕೆಂದರೆ ಮನೆ, ಕುಟುಂಬ, ಕಚೇರಿ, ಮಕ್ಕಳು, ಕೆಲಸ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೆಣ್ಣಿನ ಶಕ್ತಿಗೆ ಅದರದ್ದೇ ಆದ ಮಹತ್ವವಿದೆ. ಇದೇ ಕಾರಣಕ್ಕೆ ಹೆಣ್ಣಿಗೆ ಒಂದು ದಿನ ಮೀಸಲಿಟ್ಟು ಆಕೆಯ ಶ್ರಮ, ನಿಸ್ವಾರ್ಥ ಕೆಲಸವನ್ನು ಗೌರವಿಸಲಾಗುತ್ತದೆ. ಇದು ಪ್ರತಿಯೊಬ್ಬರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸುವ ಹೆಣ್ಣಿಗೆ ಧ್ಯನವಾದ ಹೇಳುವ ಅವಕಾಶವೂ ಹೌದು ಎಂದರು.”
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಂಘದ ವತಿಯಿಂದ ವಿಶೇಷ ಕೊಡುಗೆಯಾಗಿ ನೀಡಿದ ಬಹುಮಾನನ್ನು ಸಂಘದ ಶಾಖೆಯಲ್ಲಿ ವ್ಯವಹರಿಸಿದ ಮುಲ್ಕಿ ಶಾಖೆಯ ಗ್ರಾಹಕರಾದ ನೇಹ ಪ್ರಥಮ ಬಹುಮಾನವನ್ನು, ದ್ವಿತೀಯ ಬಹುಮಾನವನ್ನು ಪುತ್ತೂರು ಶಾಖೆಯ ಮಮತಾ ಹಾಗೂ ತೃತೀಯ ಬಹುಮಾನ ಅಳದಂಗಡಿ ಶಾಖೆಯ ಜಯಂತಿಯವರನ್ನು ಲಕ್ಕಿ ಡ್ರಾ ಮಾಡುವ ಮೂಲಕ ಆರಿಸಿ ಬಹುಮಾನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ಸಂಘದ ನಿರ್ದೇಶಕರಾದ ರಮನಾಥ್ ಸನಿಲ್, ಚಂದ್ರಹಾಸ್ ಮರೋಳಿ, ದಿವಾಕರ ಪಿ. ಬಿ., ಗೋಪಾಲ ಎಂ., ಉಮಾವತಿ, ಸಿ.ಇ.ಒ ಸೌಮ್ಯಾ ವಿಜಯ್, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷರಾದ ವಾಮನ್ ಕೆ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಸ್ವಾಗತಿಸಿ, ಸಹಾಯಕ ಪ್ರಬಂಧಕರಾದ ಶ್ರೀ ವಿಶ್ವನಾಥ್ ಇವರು ವಂದಿಸಿದರು.ಮಾನವ ಸಂಪನ್ಮೂಲ ಅಧಿಕಾರಿಯಾದ ದೀಪಿಕಾ ಸನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು.