ನೂತನ ಶಾಖೆಯನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಉದ್ಘಾಟಿಸಿ ಮಾತನಾಡಿ ಆತ್ಮಶಕ್ತಿ ಸಹಕಾರಿ ಸಂಘವು ತನ್ನ ಬ್ಯಾಂಕಿಂಗ್ ವ್ಯವಹಾರದೊಂದಿಗೆ ಇನ್ನಿತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುತ್ತದೆ. ಇದಕ್ಕೆ ಇಂದಿನ ಉಚಿತ ಆರೋಗ್ಯ ತಪಾಸಣಾ ಶಿಬಿರವು ಉದಾಹರಣೆಯಾಗಿರುತ್ತದೆ. ಆತ್ಮಶಕ್ತಿ ಸಹಕಾರಿ ಸಂಘವು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ನೂತನ ಶಾಖೆಗೆ ಶುಭವನ್ನು ಹಾರೈಸಿದರು.
ನೂತನ ಶಾಖೆಯನ್ನು ದ್ವೀಪ ಪ್ರಜ್ವಲನೆ ಮಾಡಿದ ಅಲಂಕಾರು ಗುಡ್ಡೆ ಭಂಡಾರ ಮನೆಯ ಅರ್ಚಕರಾದ ಶ್ರೀ ಜಯರಾಮ ಯಾನೆ ಅಂತ ಪೂಜಾರಿ ಮಾತನಾಡಿ ನೂತನ ಕೆ ಸಿ ರೋಡ್ ಶಾಖೆಯು ಬಹಳ ವ್ಯವಸ್ಥಿತವಾಗಿ ಮೂಡಿಬಂದಿದೆ, ದೈವದೇವರು ಇನ್ನಷ್ಟು ಶಾಖೆಗಳನ್ನು ತೆರೆಯಲು ಶಕ್ತಿಯನ್ನು ನೀಡಲಿ ಹಾಗೂ ಸಂಘವು ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂದು ಆಶೀರ್ವಾದಿಸಿದರು.
ನೂತನ ಶಾಖೆಯ ಭದ್ರತಾಕೋಶ ಉದ್ಘಾಟನೆ ಮಾಡಿದ ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ-ಕೋಟಿ ಚೆನ್ನಯ ಮೂಲಸ್ಥಾನ ಇದರ ಮೊಕ್ತೇಸರರಾದ ಶ್ರೀ ಚಂದ್ರಶೇಖರ ಉಚ್ಚಿಲ್ ಇವರು ಮಾತನಾಡಿ ಆತ್ಮಶಕ್ತಿ ಸಹಕಾರಿ ಸಂಘವು ಹಣಕಾಸಿನ ಅಗತ್ಯತೆ ಇರುವ ಜನರಿಗೆ ಆರ್ಥಿಕ ಬೆಂಬಲ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಇದರ ಮುಖಾಂತರ ಸಹಕಾರ ಕ್ಷೇತ್ರಗಳ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಆತ್ಮಶಕ್ತಿ ಸಹಕಾರಿ ಸಂಘವು ಗ್ರಾಹಕರ ವಿಶ್ವಾಸ ಗಳಿಸಿ ಜನರ ಮನ್ನಣೆಗೆ ಪಾತ್ರವಾಗಿದೆ ಎಂದರು
ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕಕಾರದ ಶ್ರೀ ಯು. ಟಿ. ಖಾದರ್ ಭಾಗವಹಿಸಿ ಮಾತನಾಡಿ ಆತ್ಮಶಕ್ತಿ ಸಹಕಾರಿ ಸಂಘವು ಹಂತ ಹಂತವಾಗಿ ಬೆಳೆದು ಕೆಲವೇ ವರ್ಷಗಳಲ್ಲಿ ಹಲವಾರು ಶಾಖೆಗಳನ್ನು ತೆರೆದು ಉಳ್ಳಾಲ ಕ್ಷೇತ್ರದಲ್ಲಿ ಅತೀ ಹೆಚ್ಚು ಶಾಖೆಯನ್ನು ಹೊಂದುವ ಮೂಲಕ ಸರ್ವಧರ್ಮ ಜನರ ವಿಶ್ವಾಸಗಳಿಸಿ ಸಂಘವು ಇಡೀ ಸಮಾಜಕ್ಕೆ ಮಾದರಿಯಾಗಿದೆ. ಆತ್ಮಶಕ್ತಿ ಸಹಕಾರಿ ಸಂಘವು ಶೀಘ್ರದಲ್ಲಿ ತನ್ನ 50ನೇ ಶಾಖೆಯನ್ನು ಕೂಡ ಈ ಕ್ಷೇತ್ರದಲ್ಲಿ ತೆರೆಯಲಿ ಎಂದು ಆಶಯವನ್ನು ವ್ಯಕ್ತಿಪಡಿಸಿದರು.
ಗಣಕೀಕೃತ ಬ್ಯಾಂಕಿಂಗ್ಗೆ ಚಾಲನೆ ನೀಡಿದ ಒಲವಿನ ಹಳ್ಳಿ ಪುನರ್ವಸತಿ ಕೇಂದ್ರದ ಆಡಳಿತದಾರರಾದ ಸಿಸ್ಟರ್ ಸ್ಟೆಲ್ಲಾ ಕುವೆಲ್ಲೊ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಲಪಾಡಿ ಗ್ರಾಮ ಪಂಚಾಯತ್ನ ಸದಸ್ಯರಾದ ಶ್ರೀ ಅಬ್ದುಲ್ ರಹಿಮಾನ್, ಫಲಾಹ್ ಶಿಕ್ಷಣ ಸಂಸ್ಥೆ, ಕೆ.ಸಿ.ನಗರ ತಲಪಾಡಿ ಇದರ ಅಧ್ಯಕ್ಷರಾದ ಶ್ರೀ ಹಾಜಿ ಯು. ಬಿ. ಮೊಹಮ್ಮದ್, ಶಾರದಾ ವಿದ್ಯಾನಿಕೇತನ ತಲಪಾಡಿ ಇದರ ಮ್ಯಾನೇಜರ್ ಆದ ಶ್ರೀ ಪ್ರಫುಲ್ ಕುಮಾರ್, ಶ್ರೀ ಕೋರ್ದಬ್ಬು ಹಾಗೂ ಪರಿವಾರ ದೈವಗಳ ದೇವಸ್ಥಾನ ಕೆ ಸಿ ರೋಡ್ ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ, ಕಟ್ಟಡದ ಮಾಲಿಕರಾದ ಶ್ರೀ ಅಬ್ಬಾಸ್ ಉಚ್ಚಿಲ್, ತಲಪಾಡಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಶ್ರೀಯುತ ಖಾದರ್ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.
ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸೀತಾರಾಮ್ ಎನ್, ಶ್ರೀ ರಮಾನಾಥ ಸನಿಲ್, ಶ್ರೀ ಚಂದ್ರಹಾಸ ಮರೋಳಿ, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ದಿವಾಕರ ಬಿ. ಪಿ., ಶ್ರೀ ಗೋಪಾಲ್ ಎಮ್., ಶ್ರೀಮತಿ ಉಮಾವತಿ, ಎಜಿಎಂ ಶ್ರೀ ವಿಶ್ವನಾಥ, ಶಾಖಾಧಿಕಾರಿ ಶ್ರೀಮತಿ ಹರಿಣಾಕ್ಷಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ವಂದಿಸಿದರು. ಮಾನವ ಸಂಪನ್ಮೂಲ ಅಧಿಕಾರಿಯಾದ ಶ್ರೀಮತಿ ದೀಪಿಕಾ ಸನಿಲ್ ಕಾರ್ಯಕ್ರಮ ನಿರೂಪಿಸಿದರು.