ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ 9 ವರ್ಷ ಗಳಿಂದ ಇಂತಹ ಶಿಬಿರವನ್ನು ಏರ್ಪಡಿಸುತ್ತಿದ್ದು, ವೈದ್ಯಕೀಯ ತಪಾಸಣೆಯು ಕೇವಲ ಶಿಬಿರಗಳಿಗೆ ಸೀಮಿತವಾಗಬಾರದು, ಶಿಬಿರದಲ್ಲಿ ವೈದ್ಯರು ನೀಡಿದ ಸಲಹೆಗಳನ್ನು ಪಡೆದು ,ತಮ್ಮ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭದಲ್ಲೇ ತಿಳಿದು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು.ಈ ಉದ್ದೇಶದಿಂದ ನಾವು ಇಂತಹ ಉಚಿತ ದಂತ ಶಿಬಿರಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದರು.
ಈ ಕಾರ್ಯಕ್ರಮದಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೆಶಕರುಗಳಾದ ಶ್ರೀ ಬಿ.ಪಿ.ದಿವಾಕರ್ , ಶ್ರೀಮತಿ ಉಮಾವತಿ ಹಾಗೂ ಶ್ರೀನಿವಾಸ ಇನ್ಸ್ಟ್ಯೂಟ್ ಆ¥sóï ಡೆಂಟಲ್ ಸಾಯನ್ ಇದರ ವೈದ್ಯರಾದ ಡಾ|| ಕೆ ರೇಷ್ಮ ಪೈ, ಡಾ|| ವಿಧ್ಯಾ ಕೆ ,ಅತಿಥಿಗಳಾಗಿ ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಾದ ಶ್ರೀ ಪ್ರದೀಪ್ ಕುಮಾರ್ ಸುವರ್ಣ, ಶ್ರೀ ಬಾಲಕೃಷ್ಣ ಸುವರ್ಣ, ಶ್ರೀ ವಿನೋದ್ ಕುಮಾರ್ ಸಾಲ್ಯಾನ್, ಶ್ರೀ ಅಶೋಕ್ ಪೂಜಾರಿ, ಶ್ರೀ ಸಂದೀಪ್ ಅಮೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 150 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಉಚಿತ ದಂತ ಚಿಕಿತ್ಸೆಯ ಪ್ರಯೋಜನವನ್ನು ಪಡೆದುಕೊಂಡರು. ಬಜ್ಪೆ ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಹರ್ಷಿತ ಸ್ವಾಗತಿಸಿ , ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ವಂದಿಸಿದರು. ಶಾಖಾಧಿಕಾರಿ ಶ್ರೀಮತಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.