ಮುಖ್ಯ ಅತಿಥಿಗಳಾಗಿ ಕಿಮ್ಸ್ನ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಡಾ|| ಟಿ ಎಂ, ಅಂಜನಪ್ಪ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಂತರಾಷ್ಟ್ರೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾದ ಉಮಾ ರೆಡ್ಡಿ, ಬೆಂಗಳೂರು ವಿಸ್ತಾರ ನ್ಯೂಸ್ನ ಉಪಾಧ್ಯಕ್ಷರಾದ ಶ್ರೀ ನವನೀತ್ ಸಿ.ಎಂ, ಯುಕೊ ಬ್ಯಾಂಕಿನ ಕರ್ನಾಟಕ ವಲಯದ ಡಿಜಿಎಮ್ ಶ್ರೀ ಮನೋಜ್ ಕುಮಾರ್ ಸಾಹು, ಬೆಂಗಳೂರಿನ ಗ್ಲೋಬಲ್ ಪಿ.ಸಿ.ಸಿ.ಎಸ್ ಇದರ ಸಂಸ್ಥಾಪಕರಾದ ಶ್ರೀ ಪ್ರಭಾಕರ್ ವೈ.ಬಿ. , ಐಕಾನ್ಸ್ ಆಫ್ ಇಂಡಿಯನ್ ಬುಸಿನೆಸ್ ಮ್ಯಾಗಸಿನ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀನಿವಾಸ ತಿಮ್ಮಯ್ಯ, ಕರ್ನಾಟಕ ರಾಜ್ಯ ಟೂರಿಸ್ಟ್ ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ರಾಧಕೃಷ್ಣ ಹೊಳ್ಳ, ಹೆಸರಾಂತ ಶಿಕ್ಷಣ ತಜ್ನರಾದ ಶ್ರೀ ಕೃಪಾಕರ ನಾರಾಯಣ ಸ್ವಾಮಿ, ಬೆಂಗಳೂರಿನ ಹೆಸರಾಂತ ನಟಿ ಕುಮಾರಿ ರೂಪಿಕ, ಮತ್ತಿತ್ತರರು ಉಪಸ್ಥಿತರಿದ್ದರು. ಕಿರುತೆರೆಯ ಖ್ಯಾತ ನಿರೂಪಕಿ ದಿವ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಸಹಕಾರ ಕ್ಷೇತ್ರದ ಜೊತೆಗೆ ಸಾಮಾಜಿಕ, ಧಾರ್ಮಿಕ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಅನೇಕ ರಾಷ್ಟ್ರೀಯ, ರಾಜ್ಯ ಮಟ್ಟದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಇವರಿಗೆ 2016ರಲ್ಲಿ 63ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿ, ರಾಷ್ಟ್ರೀಯ “ಬಸವಶ್ರೀ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ, ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, “ಸಹಕಾರ ರತ್ನ ಪ್ರಶಸ್ತಿ” ಜೊತೆಯಲ್ಲಿ ಸಂಘ -ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಇವರನ್ನು ಹಲವಾರು ಸಹಕಾರ ಸಂಘ- ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ. ಪ್ರಸ್ತುತ “ಐಐಬಿ ಬೆಸ್ಟ್ ಬುಸಿನೆಸ್ ಲೀಡರ್ಶಿಪ್ ಅವಾರ್ಡ್ -2023” ಪ್ರಶಸ್ತಿ ಇವರ ಸಾಧನೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಸಂಘದ ಸಕ್ರೀಯ ಚಟುವಟಿಕೆಯೊಂದಿಗೆ ಅಧ್ಯಕ್ಷರ ಕ್ರಿಯಾಶೀಲತೆಯು ಉಲ್ಲೇಖನೀಯ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮೂರನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಇವರು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ (ನಿ.) ಬೆಂಗಳೂರು ಇದರ ಆಡಳಿತ ಮಂಡಳಿಗೆ ಮೈಸೂರು ವಿಭಾಗದಿಂದ ಕರಾವಳಿ ಕ್ಷೇತ್ರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾದವರು. ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ,, ದ. ಕ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಮಂಗಳೂರು ಇದರ ನಿರ್ದೇಶಕರಾಗಿ ಅವಿರೋಧ ಆಯ್ಕೆ, ದ.ಕ. ಜಿಲ್ಲಾ ಸಗಟು ಮಾರಾಟ ಸಹಕಾರ ಸಂಘ ಇದರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.