ಕೊಪ್ಪಳ ಜಿಲ್ಲೆ ಕುಕನೂರಿನ ಕನ್ನಡ ಸಾಹಿತ್ಯ, ಅಭಿವೃದ್ಧಿ ಟ್ರಸ್ಟ್ ಹಾಗೂ ಮೈಸೂರಿನ ಚಿತ್ಕಲಾ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅಖಿಲ ಕರ್ನಾಟಕ ೫ನೇ ಸಾಂಸ್ಕೃತಿಕ ಸಮ್ಮೇಳನ ಹಾಗೂ ಸಾಹಿತ್ಯೋತ್ಸವ- 2023 ಎಂಬ ಕಾರ್ಯಕ್ರಮ ಸೆಪ್ಟೆಂಬರ್ 10 ರ ಭಾನುವಾರದಂದು ಮೈಸೂರಿನಲ್ಲಿ ನಡೆಯಿತು.


“ವಿಜಯನಗರದಿಂದ ಮೈಸೂರು ಕಡೆಗೆ ಒಂದು ಸಾಂಸ್ಕೃತಿಕ ಪಯಣ – ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ಕಾಯಕ್ರಮವು ಮೈಸೂರಿನ ಕುತ್ತೇತ್ತೂರು ಸೀತಾಮರಾವ್ ಭವನದಲ್ಲಿ ನಡೆಯಿತು. ಈ ಸಾಂಸ್ಕೃತಿಕ ಸಮ್ಮೇಳನ ಅಧ್ಯಕ್ಷರಾದ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಿರಿಯ ಸಾಹಿತಿಗಳಾದ ಡಾ.ಕೆ ಮಹಾದೇವ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪೂಜ್ಯ ಶ್ರೀ ಶಶಿಶೇಖರ ದೀಕ್ಷಿತ್ ರವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ಇವರಿಗೆ ಸಹಕಾರ ಕ್ಷೇತ್ರದಲ್ಲಿ ಮಾಡಿದ ಅದ್ವಿತೀಯ ಸಾಧನೆಗೆ ಹಾಗೂ ಕರ್ನಾಟಕದ ನೆಲ,ಜಲ,ಭಾಷೆ ಹಾಗೂ ಜನ ಜೀವನಗಳ ಬಗ್ಗೆ ಕಾಳಜಿ ಇಟ್ಟು ನಿಸ್ವಾರ್ಥದಿಂದ ಸಲ್ಲಿಸಿದ ಅಪೂರ್ವ ಸೇವೆಗಾಗಿ ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದರು.
ಈ ಕಾರ್ಯಕಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ವೇತ್ರದ ಶಾಸಕ ಶ್ರೀ ಟಿ ಎಸ್ ಶ್ರೀವತ್ಸ, ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಶ್ರೀ ರಮೇಶ್ ಸುರ್ವೆ, ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಟಿ ರವಿಕುಮಾರ, ಭಾರತ ಕನ್ನಡ ಪರಿಷತ್ ನ ಉಪಾಧ್ಯಕ್ಷರಾದ ಡಾ. ಎಸ್ ನಾಗರತ್ನ, ಕನ್ನಡ ಸಾಹಿತ್ಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಉಗ್ರಪ್ಪ ಭಂಡಾರಿ, ಮೈಸೂರಿನ ಚಿತ್ಕಲಾ ಸಾಂಸ್ಕೃತಿಕ ಪ್ರತಿಷ್ಟಾನದ ಸಂಸ್ಥಾಪಕರಾದ ಶ್ರೀಮತಿ ರೂಪದರ್ಶಿನಿ ಕೆ. ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು