ಈ ತರಬೇತಿ ಕಾರ್ಯಾಗಾರವನ್ನು ಶಿರ್ಡಿ ಸಾಯಿ ಡೆವಲಪರ್ಸ್ ಬೆಂಗಳೂರು ಇದರ ಮಾಲಕರಾದ ಶ್ರೀ ಎನ್. ಟಿ ಸಾಗರ್ ರವರು ಉದ್ಘಾಟನೆ ಮಾಡಿ, ಮಾತಾಡಿದ ಅವರು ಸಿಬ್ಬಂದಿ ತರಬೇತಿ ಅನ್ನುವುದು ಇಂದಿನ ಕಾಲದ ಬಹು ಅಗತ್ಯದ ಸಂಗತಿ , ಅದರಲ್ಲೂ ಅತೀವ ಒತ್ತಡದ ಕೆಲಸ ಮಾಡುವ ಬ್ಯಾಂಕಿAಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಮಾಡುವುದು ಅವರ ಮಾನಸಿಕ ಸ್ಥಿರತೆಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿ ಆಗಲಿದೆ. ಜಿಲ್ಲೆಯ ಅತ್ಯಂತ ಶ್ರೇಷ್ಟ ಸಹಕಾರಿ ಸಂಸ್ಥೆ ಆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವ್ಯವಹಾರಗಳು ಉನ್ನತ ಮಟ್ಟಕ್ಕೆ ಏರಲಿ ಎಂದು ಹಾರೈಸಿದರು.
ಈ ವಿಶೇಷ ಆರೋಗ್ಯ ಮಾಹಿತಿ ತರಬೇತಿ ಕಾರ್ಯಗಾರದಲ್ಲಿ ಹೃದಯಘಾತ ಸಂದರ್ಭದಲ್ಲಿ ಜನರು ಯಾವ ರೀತಿಯ ಮುನ್ನಚ್ಚೆರಿಕೆಯ ಕ್ರಮಗಳನ್ನು ವಹಿಸಕೊಳ್ಳಬೇಕು. ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗಳನ್ನು ಸಂರಕ್ಷಿಸುವ ವಿಧಾನಗಳನ್ನು ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇಲ್ಲಿನ ವೈದ್ಯರಾದ ಡಾ ಅರ್ಚು ಹಾಗೂ ಸಿಸ್ಟರ್ ಶೀತಲ್ ಮರಿಯ ಪಿರೇರಾ ರವರು ವಿವಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘವು ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿದ್ದು ಈಗಾಗಲೇ ೫೫ ಆರೋಗ್ಯ ಶಿಬಿರಗಳನ್ನು ಯಶಸ್ವಿಯಾಗಿ ಏರ್ಪಡಿಸಿದೆ. ಇದರ ಜೊತೆಗೆ ಒತ್ತಡ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಕಾನ್ಸ್ರ್ ಮುಂತಾದ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಾದ ಶ್ರೀಯುತ ನೇಮಿರಾಜ್ ಪಿ ಹಾಗೂ ನಿರ್ದೇಶಕರುಗಳಾದ ಶ್ರೀ ರಮಾನಾಥ್ ಸನಿಲ್, ಶ್ರೀ ದಿವಾಕರ್ ಬಿ.ಪಿ, ಶ್ರೀಮತಿ ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು, ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಹರ್ಬಟ್ ಪಿರೇರಾ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಸಂಘದ ಸಹಾಯಕ ಪ್ರಬಂಧಕರಾದ ಶ್ರೀ ವಿಶ್ವನಾಥ್ ರವರು ಸ್ವಾಗತಿಸಿ, ಹಿರಿಯ ಶಾಖಾಧಿಕಾರಿ ಶ್ರೀಮತಿ ಹರಿಣಾಕ್ಷಿ ಪ್ರಶಾಂತ್ ರವರು ವಂದಿಸಿದರು.ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ದೀಪಿಕಾ ಸನಿಲ್ ರವರು ಕಾರ್ಯಕ್ರಮ ನಿರೂಪಿಸಿದರು