ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರು ಹಾಗೂ ಕಾವೂರು ವ್ಯವಸಾಯ ಸೇವ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷರಾದ ಶ್ರೀಯುತ ಶ್ರೀ ಹರಿಶ್ಚಂದ್ರ ಇವರು ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸ್ಥಳೀಯವಾಗಿ ಉತ್ತಮ ಜನಪರ ಸೇವೆ ಒದಗಿಸುತ್ತಿದ್ದು ,ಕಳೆದ ೫ ವರ್ಷಗಳಿಂದ ಕಾವೂರಿನಲ್ಲಿ ಆರೋಗ್ಯ ಶಿಬಿರವನ್ನು ನಡೆಸುತ್ತಿದ್ದು ಇದರಿಂದ ಸ್ಥಳೀಯ ಹಲವಾರು ಜನರು ಪ್ರಯೋಜನವನ್ನು ಪಡೆದಿರುತ್ತಾರೆ,ಇನ್ನೂ ಉತ್ತಮ ಸಮಾಜ ಮುಖಿ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮ.ನ.ಪಾ ಸದಸ್ಯರು ಪಂಜಿಮೊಗರು ವಾರ್ಡ್ ಶ್ರೀಯತ ಅನಿಲ್ ಕುಮಾರ್ ರವರು ಮಾತಾಡಿ ಆರೋಗ್ಯದ ಸಮಸ್ಯೆ ಎಲ್ಲರಿಗೂ ಭಾದಿಸುತ್ತದೆ ಇಂತಹ ಶಿಬಿರ ಆಯೋಜಿಸುತ್ತಿದ್ದು ಇದು ಬಡ ಜನರಿಗೆ ಪೂರಕವಾಗಿದೆ. ಇಂತಹ ಉಚಿತ ಶಿಬಿರದ ಮೂಲಕ ಜನರಿಗೆ ತಮ್ಮ ಮನೆ ಬಾಗಿಲಿಗೆ ವ್ವೆದ್ಯಕೀಯ ಸೌಲಭ್ಯ ನೀಡುತ್ತಿರುವುದು ಜನಪರ ಸೇವೆಗೆ ಆತ್ಮಶಕ್ತಿ ಮಾದರಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮುಗೇರ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಸೀತಾರಾಮ್ ಕೊಂಚಾಡಿಯವರು ಮಾತನಾಡಿ ,ಆತ್ಮಶಕ್ತಿ ಒಂದು ಆರ್ಥಿಕ ಸಂಸ್ಥೆಯಾಗಿದ್ದು ಬ್ಯಾಂಕ್ ವ್ಯಾವಹರದ ಜೊತೆಗೆ ಇಂತಹ ಜನಪರ ಕಾರ್ಯ ಮಾಡುವುದು ಶ್ಲಾಘನೀಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಇಲ್ಲಿನ ಗೌರವಾಧ್ಯಕ್ಷರಾದ ಶ್ರೀಯುತ ಭಾಸ್ಕರಚಂದ್ರ ಶೆಟ್ಟಿಯವರು ಆತ್ಮಶಕ್ತಿಯೊಂದಿಗೆ ಇಂತಹ ಕಾರ್ಯಕ್ರಮದಲ್ಲಿ ಕೈ ಜೋಡಿಸಲು ತುಂಬ ಹೆಮ್ಮೆ ಪಡುತ್ತೇವೆ, ಹಿಂದೂ ಯುವ ಸೇನೆಯು ರಕ್ತದಾನ ಅವಶ್ಯವಿದ್ದ ರೋಗಿಗಳಿಗೆ ನಿರಂತರ ನೀಡುತ್ತಾ ಬಂದಿರುತ್ತದೆ. ಇಂದಿನ ರಕ್ತದಾನ ಶಿಬಿರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಶೀನಾ ಪೂಜಾರಿಯವರು ಇಂತಹ ಕಾರ್ಯಕ್ರಮದಲ್ಲಿ ಕೈ ಜೋಡಿಸಿರುವುದು ಸಂತಸವಾಗಿದೆ. ಮುಂದೆಯೂ ಇಂತಹ ಜನಪರ ಕಾರ್ಯದಲ್ಲಿ ನಿಮ್ಮೊಂದಿಗೆ ಸದಾ ಸಹಕರಿಸುತ್ತೇವೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ಡಾಯಲಿಸಿಸ್ ಸೇವೆಯನ್ನು ಡಾ ಶಾಂತಾರಾಮ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಸುತ್ತಾ ಬಂದಿರುತ್ತೇವೆ. ಇದರ ಸದುಪಯೋಗವನ್ನು ಕೂಡಾ ಆಗತ್ಯವುಳ್ಳವರು ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪಂಜಿಮೊಗರು ಶಾಖೆಯಲ್ಲಿ ಕಳೆದ ೫ ವರ್ಷದಿಂದ ಶಿಬಿರವನ್ನು ಏರ್ಪಡಿಸುತ್ತಿದ್ದು, ಎಲ್ಲಾ ಸಂಘ ಸಂಸ್ಧೆಗಳ ಸಹಕಾರದಿಂದ ನಾವು ಇಂದು ನಮ್ಮ ೫೬ನೇ ಶಿಬಿರವನ್ನು ನಡೆಸುತ್ತಿದ್ದೇವೆ. ಶಿಬಿರದಲ್ಲಿ ವೈದ್ಯರು ನೀಡಿದ ಸಲಹೆಗಳನ್ನು ಪಡೆದು ತಮ್ಮ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭದಲ್ಲೇ ತಿಳಿದು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬೇಕೆAದು ನಮ್ಮ ಆಶಯ.ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಈ ಶಿಬಿರದಲ್ಲಿ ಬರುವ ರೋಗಿಗಳಿಗೆ ಉಚಿತ ಔಷಧಿ, ಉಚಿತ ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಸಹಭಾಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸುತ್ತಾ ಬಂದಿರುತ್ತದೆ. ನಮ್ಮ ಶಿಬಿರಗಳಲ್ಲಿ ೧೨೦೦೦ ಕ್ಕೂ ಮಿಕ್ಕಿ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗಿದೆ. ಈ ಶಿಬಿರದಲ್ಲಿ ತಮ್ಮ ರಜಾದಿನದ ಭಾನುವಾರದಂದು ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು,ವೈದ್ಯಕೀಯ ಕ್ಷೇತ್ರದ ಹಾಗೂ ನಮ್ಮ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿರುವುದು ನಮ್ಮ ಹೆಮ್ಮೆ,ಇವರಿಗೆ ನಮ್ಮ ಸಂಸ್ಥೆಯು ಅಭಾರಿಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ರಮಾನಾಥ ಸನಿಲ್, ಗೋಪಾಲ್ ಎಂ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಶ್ರೀ ಕೃಷ್ಣ ಭಜನಾ ಮಂದಿರ ವಿದ್ಯಾನಗರ ಇದರ ಅಧ್ಯಕ್ಷರಾದ ಶ್ರೀ ಸುನಿಲ್ ಭಂಡಾರಿ, ಶ್ರೀ ಶಾರದೋತ್ಸವ ಸೇವ ಟ್ರಸ್ಟ್ö ವಿದ್ಯಾನಗರದ ಅಧ್ಯಕ್ಷರಾದ ಶ್ರೀ ಉಮೇಶ್ ಪೂಜಾರಿ, ಎ ಜೆ ಇನ್ಸಿ÷್ಟಟ್ಯೂಟ್ ಆ¥s಼ï ಮೆಡಿಕಲ್ ಸಾಯನ್ಸ್ ಇದರ ವೈದ್ಯರಾದ ಡಾ ಚೈತ್ರ, ಶ್ರೀನಿವಾಸ್ ಇನ್ಸ್ಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಇದರ ವೈದ್ಯರಾದ ಡಾ ಸುಲೋಚನಾ, ಕಣಚೂರು ಇನ್ಟ್ಯೂಟ್ ಆಪ್ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ವೈದ್ಯರಾದ ಡಾ ವಿನಯ, ಹಿಂದೂ ಯುವ ಸೇನೆ ಸಂಚಾಲಕರಾದ ಶ್ರೀ ನಿಶಾಂತ್ ಶೆಟ್ಟಿ, ಹಾಗೂ ಅಧ್ಯಕ್ಷರಾದ ಶ್ರೀ ಯಶೋಧರ ಚೌಟ, ಉದ್ಯಮಿ ಶ್ರೀ ದೋಟ ಹರೀಶ್ ಶೆಟ್ಟಿ ,ಹಾಗೂ ಸಲಹಾ ಸಮಿತಿ ಸದಸ್ಯರಾದ ಶ್ರೀ ಗಣೇಶ್ ಸನಿಲ್, ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ಶ್ರೀ ಶಾರದೋತ್ಸವ ಸೇವಾ ಟ್ರಸ್ಟ್ö(ರಿ.) ವಿದ್ಯಾನಗರದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಧಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ರೋಗ ತಪಾಸಣೆ ಹಾಗೂ ದಂತ ಚಿಕಿತ್ಸೆ, ಉಚಿತ ಔಷಧಿ ವಿತರಣೆ, ಕಣ್ಣಿನ ತಪಾಸಣೆಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ಹಾಗೂ ಸುಮಾರು 60 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ರಕ್ತದಾನವನ್ನು ಮಾಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ಶ್ರೀಮತಿ ಸೌಮ್ಯಲತ ಇವರು ಕಾರ್ಯಕ್ರಮ ನಿರೂಪಿಸಿದರು, ಹಿರಿಯ ಶಾಖಾಧಿಕಾರಿ ಶ್ರೀಮತಿ ಸ್ವಾತಿ ಇವರು ಸ್ವಾಗತಿಸಿ, ಶಾಖಾಧಿಕಾರಿ ಶ್ರೀಮತಿ ಸುಜಾತ ವಂದಿಸಿದರು.