ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘ (ನಿ.) ಮಂಗಳೂರು ಹಾಗೂ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಮಂಗಳಾದೇವಿ ವಲಯ ಸಮಿತಿ, ಮಂಗಳೂರು ಮತ್ತು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಜುಲೇಖ ಯೆನೆಪೋಯ ಇನ್ಸಿಟ್ಯೂಟ್ ಒಫ್ ಓಂಕಲಜಿ, ಸಮುದಾಯ ದಂತ ವಿಭಾಗ ಯೆನೆಪೋಯ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿAದ ಉಚಿತ ಮಹಿಳಾ ಆರೋಗ್ಯ ಯೋಗಕ್ಷೇಮ, ನೇತ್ರ ದಂತ ಮತ್ತು ವೈದ್ಯಕೀಯ ಚಿಕಿತ್ಸಾ ಶಿಬಿರವು ದಿನಾಂಕ 10.12.2023 ರಂದು ಕಾಂತಿ ಚರ್ಚ್ ಹಾಲ್, ಮಂಗಳಾದೇವಿ ಇಲ್ಲಿ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಕಾಂತಿ ಚರ್ಚ್ ಹಾಲ್ ಮಂಗಳೂರು ಇದರ ಧರ್ಮಗುರುಗಳಾದ ¥s಼Áದರ್ ಎಬ್ನೆಜರ್ ಜತ್ತನ್ನರವರು ಉದ್ಘಾಟಿಸಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಭಾಗ್ಯ ವಾಗಿರುತ್ತದೆ. ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿರುವಂತಹ ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘ ಹಾಗೂ ಜಂಟಿ ಸಂಯೋಜಕರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ದೇವರು ಎಲ್ಲರಿಗೂ ಆರೋಗ್ಯವನ್ನು ಕರುಣಿಸಲಿ ಎಂದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು
ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಭಾನುಮತಿ ಅವರು ಮಾತನಾಡಿ ಆರೋಗ್ಯದ ಸಮಸ್ಯೆ ಎಲ್ಲರಿಗೂ ಭಾದಿಸುತ್ತದೆ. ಎಲ್ಲರೂ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ, ಭಗವಂತನು ಎಲ್ಲರಿಗೂ ಆರೋಗ್ಯ ಕೊಡಲಿ ಎಂದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು
ಶಿಬಿರದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರಾವರು ಮಾತನಾಡಿ ಕರ್ನಾಟಕ ಸ್ಟೇಟ್ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಮಂಗಳಾದೇವಿ ವಲಯ ಸಮಿತಿ, ಮಂಗಳೂರು ಮತ್ತು ಲಯನ್ಸ್ ಮತ್ತು ಲಿಯೋ ಕ್ಲಬ್, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಎಲ್ಲರಿಗೂ ವಂದಿಸಿ ,ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘವು ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿರುತ್ತದೆ ಇಂದಿನ ಶಿಬಿರದಲ್ಲಿ ವಿಶೇಷವಾಗಿ ಕ್ಯಾನ್ಸರ್ ರೋಗದ ಕುರಿತು ಜಾಗೃತಿಯನ್ನು ಮೂಡಿಸುವಂತಹ ಉದ್ದೇಶವನ್ನು ಇಟ್ಟುಕೊಂಡು ಈ ಶಿಬಿರವನ್ನು ಆಯೋಜಿಸಿರುತ್ತೇವೆ. ಜನರಿಗೆ ರೋಗದ ಬಗ್ಗೆ ಮುಂಚಿತವಾಗಿ ಮಾಹಿತಿ ಇರುವುದಿಲ್ಲ. ಸಾರ್ವಜನಿಕರು ಯಾವುದೇ ರೀತಿಯಾದಂತಹ ಭಯವನ್ನು ಪಡದೆ ಈ ರೀತಿಯ ಶಿಬಿರದಲ್ಲಿ ಆರೋಗ್ಯದ ಬಗ್ಗೆ ಮುತುವರ್ಜಿಯನ್ನು ವಹಿಸಿ ರೋಗ ಮುಕ್ತವಾಗಬಹುದು. ಇಂದು ಆಯೋಜಿಸಿರುವ ಶಿಬಿರವು ೫೮ ನೇ ಶಿಬಿರವಾಗಿದ್ದು,ಶಿಬಿರದ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.ಇಂದಿನ ಶಿಬಿರದಲ್ಲಿ ಕೇಂದ್ರ ಸರಕಾರದ ವಿಶ್ವಕರ್ಮ ನೋಂದಣಿಯನ್ನು ಏರ್ಪಡಿಸಿದ್ದು ಇದರಲ್ಲಿ ಟೈಲರ್ಸ್ ,ಎಲ್ಲಾ ಕುಶಲಕರ್ಮಿಗಳು ನೋಂದಣಿ ಮಾಡಲು ಅವಕಾಶವಿದ್ದು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಶೀನ ಪೂಜಾರಿ ರವರು ಮಾತಾನಾಡಿ ತಮ್ಮ ಕ್ಲಬ್ ನೀಡುತಿರುವಂತಹ ಸಾಮಾಜಿಕ ಸೇವೆಯ ಕುರಿತು ತಿಳಿಸಿ, ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ತಿಳಿಸಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ನ ರಾಜ್ಯಧ್ಯಕ್ಷರಾಗಿರುವಂತಹ ಶ್ರೀ ನಾರಾಯಣ ಬಿ ಎ ಅವರು ಮಾತನಾಡಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.
ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮಾಜಿ ಮೇಯರ್ ಆಗಿರುವ ಶ್ರೀ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ ಉಚಿತ ವೈದ್ಯಕೀಯ ಶಿಬಿರದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘವು ೫೮ನೇ ಉಚಿತ ಶಿಬಿರವನ್ನು ಮಾಡುತ್ತಿದ್ದು ಈ ಮೂಲಕ ನಾಗರಿಕರಿಗೆ ದೊಡ್ಡ ರೀತಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವಿಶೇ ಷವಾದ ಕಾಣಿಕೆಯನ್ನು ನೀಡುತ್ತಿದೆ. ಜನರಿಗೆ ಆರೋಗ್ಯದ ಕುರಿತು ಅರಿವು ಕಡಿಮೆ ಇದೆ. ಈ ರೀತಿಯ ಶಿಬಿರದಲ್ಲಿ ಲಭ್ಯವಿರುವ ಸೌಲಭ್ಯವನ್ನು ಜನರು ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಸಂಘ-ಸAಸ್ಥೆಗಳಿಗೆ ಪ್ರೇರಣೆಯನ್ನು ನೀಡಬೇಕು. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಳ್ಳಬೇಕಾಗಿ ಸಾರ್ವಜನಿಕರಿಗೆ ವಿನಂತಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು
ಮಾಹಿತಿ ಕಾರ್ಯಗಾರದಲ್ಲಿ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇದರ ವೈದ್ಯರಾದ ಡಾ ರಾಜೇಶ್ ಕೃಷ್ಣರವರು ಮಾತನಾಡಿ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ವಿಧಾನ, ಪತ್ತೆ ಹಚ್ಚುವ ವಿಧಾನ ಹಾಗೂ ಚಿಕಿತ್ಸಾ ವಿಧಾನಗಳನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಮಂಗಳಾದೇವಿ ವಲಯ ಸಮಿತಿ ಮಂಗಳೂರು ಇದರ ಅಧ್ಯಕ್ಷರಾಗಿರುವಂತ ಶ್ರೀಮತಿ ಸುಜಾತ ಆಚಾರ್ಯರವರು ಸಾರ್ವಜನಿಕರಲ್ಲಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿ ಶಿಬಿರಕ್ಕೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರನ್ನು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಮಂಗಳಾದೇವಿ ವಲಯ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾಗಿರುವಂತ ಶ್ರೀಮತಿ ಸುಜಾತ ಆಚಾರ್ಯರವರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಮಂಗಳೂರು ಕ್ಷೇತ್ರ ಅಧ್ಯಕ್ಷರಾದ ಶ್ರೀ ಹರೀಶ್ ರೈ, ದ.ಕ ಜಿಲ್ಲಾದ್ಯಕ್ಷರು ಶ್ರೀ ಜಯಲಾಕ್ಷ ಕೋಟ್ಯಾನ್, ಲಿಯೋ ಕ್ಲಬ್ ನ ಅಧ್ಯಕ್ಷರಾದ ಕ್ರಿಸ್ಟಲಿಸ್, ಲಯನ್ಸ್ ಕ್ಲಬ್ ನ ಸಂಯೋಜಕರಾದ ಲಯನ್ ಶ್ರೀನಾಥ್ ಆಚಾರ್ಯ,ಸಹ ಸಂಯೋಜಕರಾದ ಲಯನ್ ಗಾಯತ್ರಿ ಎ ರಾವ್, ಖಜಾಂಜಿಯಾದ ಲಯನ್ ಶಿವರಾಮ್ ರೈ, ಸಹ ಖಜಾಂಜಿಯಾದ ಲಯನ್ ನಾರಾಯಣ ಕೋಟ್ಯಾನ್, ಯೆನೆಪೋಯ ವೈದ್ಯಕೀಯ ಅಸ್ಪತ್ರೆಯ ವೈದ್ಯರಾದ ಡಾ Iಅಪೂರ್ವ ಕೊಟ್ಯಾನ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರು ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಗೋಪಾಲ್ ಎಮ್,ಮುಖ್ಯ ಕಾರ್ಯನಿರ್ವಹಣಾದಿಕಾರಿ ಶ್ರೀಮತಿ ಸೌಮ್ಯ ವಿಜಯ್ ಹಾಗೂ ಮತ್ತಿತರರು ಉಪಸಿತರಿದ್ದರು
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಇದರ ರಾಜ್ಯದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪ್ರಜ್ವಲ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.