ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಕಾಪು ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಕಾಪು ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಮತ್ತು ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈಯನ್ಸ್ ಮುಕ್ಕ ಇಲ್ಲಿಯ ವೈದ್ಯರ ಸಹಕಾರದೊಂದಿಗೆ ಹೊಸ ಮಾರಿಗುಡಿ ಬಳಿಯಲ್ಲಿರುವ ಸಂಘದ ವಠಾರದಲ್ಲಿ ನ. 28 ರಂದು ಉಚಿತ ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ ನಡೆಯಿತು.

ಈ ಕಾರ್ಯಕ್ರಮದ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಕಾಪುವಿನಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ, ಸಂಘದ ಪ್ರತೀ ಶಾಖೆಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದು, ಈಗಾಗಲೇ ಸಂಘವು ಈಗಾಗಲೇ 58 ಶಿಬಿರಗಳನ್ನು ಆಯೋಜಿಸಿದೆ. ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕರಿಸಿದ ರೋಟರಿ ಕ್ಲಬ್ ಕಾಪು ಇವರಿಗೆ ಧನ್ಯವಾದವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಕಾಪು ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ರೋ ರಾಜೇಂದ್ರನಾಥ್‌ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದೊAದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿರುವುದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು, ರೋಟರಿ ಕ್ಲಬ್ ನ ವಲಯ ಸೇನಾನಿ ರೋ ಚಂದ್ರ ಪೂಜಾರಿ ರವರು ಸಂಘವು ಇಂತಹ ಉಚಿತ ಶಿಬಿರದ ಮೂಲಕ ಜನರಿಗೆ ತಮ್ಮ ಮನೆ ಬಾಗಿಲಿಗೆ ವ್ವೆದ್ಯಕೀಯ ಸೌಲಭ್ಯ ನೀಡುತ್ತಿರುವುದ್ದಕ್ಕಾಗಿ ಅಭಿನಂದಿಸಿದರು, ರೋಟರಿ ಕ್ಲಬ್ ವಲಯ ಸಂಯೋಜಕರಾದ ರೋ ಶ್ರೀನಿವಾಸ ರಾವ್‌ರವರು ಇನ್ನು ಮುಂದಕ್ಕೆಯೂ ಸಂಘದೊAದಿಗೆ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿಯಾದ ಶ್ರೀ ವೇಣುಕೃಷ್ಣಾ , ಮಾಜಿ ಅಧ್ಯಕ್ಷರಾದ ಶ್ರೀ ಸದಾಶಿವ ಭಟ್ ,ಸದಸ್ಯರಾದ ಶ್ರೀ ಜೆಮ್ಸ್ ಡಿಸೋಜ, ಶ್ರೀ ಗೋಪಾಲ ನಾಯ್ಕ್, ಶ್ರೀ ವಿದ್ಯಾದರ್ ಪುರಾಣಿಕ್, ಶ್ರೀ ಬಾಲಕೃಷ್ಣ ಆಚಾರ್ಯ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಸಲಹಾ ಸಮಿತಿ ಸದಸ್ಯರಾದ ಶ್ರೀ ಐತ್ತಪ್ಪ ಎಸ್ ಕೋಟ್ಯಾನ್, ಶ್ರೀ ರಾಕೇಶ್ ಎಸ್ ಕೋಟ್ಯಾನ್ , ಶ್ರೀ ಸೂರ್ಯನಾರಾಯಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 131 ಶಿಬಿರಾರ್ಥಿಗಳಿಗೆ ಉಚಿತ ಕನ್ನಡವನ್ನು ವಿತರಿಸಲಾಯಿತು.