ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಕೊಟ್ಟಾರ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಜಯರಾಮ್ ಕಾರಂದೂರು, ಶ್ರೀಮತಿ ರಮಣಿ ಕೆ,ಶ್ರೀ ಪಿ ಸುರೇಶ್, ಶ್ರೀ ಬಿ ಜಯರಾಮ್,ಶ್ರೀಮತಿ ಶುಭ ರಾಜೇಂದ್ರ,ಶ್ರೀ ಎಚ್ ಜನಾರ್ಧನ ಗಡಿಯಾರ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.


ಸಂಘದ ಸದಸ್ಯರಾದ ಶ್ರೀ ಜಯರಾಮ್ ಕಾರಂದೂರು ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತ ಪಡಿಸಿದರು. ಶಾಖೆಯನ್ನು ತೆರೆಯುವಲ್ಲಿ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಹಾಗೂ ಆಡಳಿತ ಮಂಡಳಿಯ ಪ್ರಯತ್ನವನ್ನು ಶ್ಲಾಘಿಸಿದರು. ೨೦೨೩ ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಂಘದ ಅಧ್ಯಕ್ಷರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಸಿಬ್ಬಂದಿಗಳ ಕಾರ್ಯವೈಖರಿ ಸೇವೆಯ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಸಂಘದ ಸದಸ್ಯರಾದ ಶ್ರೀಮತಿ ರಮಣಿ ಕೆ ರವರು ಮಾತನಾಡಿ ಸಂಘದ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿ ಮುಂದೆಯೂ ಒಳ್ಳೆಯ ಸೇವೆಯನ್ನು ನೀಡುವಂತಾಗಲಿ ಹಾಗೂ ಎಲ್ಲಾ ಶಾಖೆಗಳು ಲಾಭವನ್ನು ಗಳಿಸಿ ಸ್ವಂತ ಕಟ್ಟಡವನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಸಂಘದ ಸದಸ್ಯರಾದ ಶ್ರೀ ಉಮ್ಮಪ್ಪ ಪೂಜಾರಿ ಪಿ ರವರು ಮಾತಾನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆ ರಾಜ್ಯಮಟ್ಟದಲ್ಲೂ ಒಳ್ಳೆಯ ಹೆಸರನ್ನು ಮಾಡಿದೆ. ಸಂಘವು ಗ್ರಾಹಕರ ಜೊತೆ ಉತ್ತಮ ಬ್ಯಾಂಕಿAಗ್ ಸಂಬAಧ ಹಾಗೂ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಸಂಘವು ಇನ್ನಷ್ಟು ವಿಶಿಷ್ಟ ರೀತಿಯ ಯೋಜನೆಗಳನ್ನು ರೂಪಿಸಿ ಹಲವಾರು ಶಾಖೆಗಳನ್ನು ತೆರೆದು ಜನರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವಕ್ಕೆ ಹರ್ಷವನ್ನು ವ್ಯಕ್ತಪಡಿಸಿದರು.ಶಾಖೆಯನ್ನು ಪ್ರಾರಂಭಿಸಲು ಸಹಕಾರ ನೀಡಿದ ಹಾಗೂ ಶಾಖೆಯ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ವಂದಿಸಿದರು. ನಮ್ಮ ಸಹಕಾರಿ ಸಂಘವು ರೂ.೨೦೦೦ ಕೋಟಿ ವ್ಯವಹಾರ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ ರೂ.೩೦೦೦ ಕೋಟಿ ವ್ಯವಹಾರ ಹೊಂದುವ ಗುರಿ ಹೊಂದಿದೆ. ಸಂಘವು ಶೀಘ್ರದಲ್ಲಿ ೫ ಹೊಸ ಶಾಖೆಗಳನ್ನು ತೆರೆಯಲಿದೆ. ಸಂಘವು ತನ್ನ ಶಾಖೆಯನ್ನು ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ. ಶಾಖೆಯಿಂದ ಹೆಚ್ಚಿನ ಠೇವಣಿಯನ್ನು ಸಂಗ್ರಹಿಸಿದ್ದು ಆ ಠೇವಣಿಯಿಂದ ಹೆಚ್ಚಿನ ಸಾಲವನ್ನು ನೀಡಲು ಸಾಧ್ಯವಾಗಿದೆ. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕೊಟ್ಟಾರ ಪರಿಸರದಲ್ಲೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಸಂಘದಲ್ಲಿ ಲಭ್ಯವಿರುವ ವಿಮಾ ಸೇವೆ, ಭವಿಷ್ಯ ಸುರಕ್ಷಾ ಯೋಜನೆಯ ಜೊತೆಗೆ ಎಲ್ಲಾ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಗ್ರಾಹಕರ ಸಲಹೆ ಸಹಕಾರವನ್ನು ಸದಾ ಬಯಸುತ್ತಾ ಸಂಘವು ಇನ್ನಷ್ಟು ಎತ್ತರಕ್ಕೆ ಏರಲು ಇನ್ನು ಮುಂದೆಯೂ ಗಾಹಕರು ಕೈ ಜೋಡಿಸುವಂತೆ ಹೇಳಿದರು.ಜನವರಿ ೨೮ ಕ್ಕೆ ನಡೆಯಲಿರುವ ಸಂಘದ ವಾರ್ಷಿಕೋತ್ಸವಕ್ಕೆ ಎಲ್ಲಾ ಗ್ರಾಹಕರನ್ನು ಆಮಂತ್ರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಸೀತಾರಾಮ್ ಎನ್,ಶ್ರೀ ಚಂದ್ರಹಾಸ್ ಮರೋಳಿ ಶ್ರೀ ಬಿ.ಪಿ ದಿವಾಕರ್ ಶ್ರೀ ಗೋಪಾಲ್ ಎಮ್, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಗ್ರಾಹಕರು ಭಾಗವಹಿಸಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ಸ್ವಾಗತಿಸಿ, ಶಾಖೆಯ ಸಿಬ್ಬಂದಿಯಾದ ಕುಮಾರಿ ಪ್ರತೀಕ್ಷ ರವರು ವಂದಿಸಿದರು. ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಸುಮನ ರವರು ಕಾರ್ಯಕ್ರಮ ನಿರೂಪಿಸಿದರು.