ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಲಾಲ್‌ಬಾಗ್ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಕುದ್ರೋಳಿ ಯುವಕ ಸಂಘ (ರಿ.) ಕುದ್ರೋಳಿ ಮಂಗಳೂರು ಇವರ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಇವರ ನುರಿತ ವೈದ್ಯರ ತಂಡದೊAದಿಗೆ ಉಚಿತ ನೇತ್ರಾ ತಪಾಸಣಾ ಶಿಬಿರವು ದಿನಾಂಕ ೨೦-೦೧-೨೦೨೪ ರ ಆದಿತ್ಯವಾರದಂದು ಕುದ್ರೋಳಿ ಯುವಕ ಸಂಘದ ಕಟ್ಟಡದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಸಿವಿಲ್ ಇಂಜಿನಿಯರ್ ಆದ ಶ್ರೀಯುತ ನಿತಿನ್ ಭಟ್ ಇವರು ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಸೇವೆಯ ಜೊತೆಯಲ್ಲಿ ಆರೋಗ್ಯದ ಕಾಳಜಿಂiÀನ್ನು ವಹಿಸುವುದು ತುಂಬಾ ಉತ್ತಮ. ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೆ ಗಮನ ಕೊಡದೆ ಇರುವುದು ಹಲವು ರೋಗಗಳಿಗೆ ಕಾರಣವಾಗಿದೆ. ನಾವು ನಮ್ಮ ಆರೋಗ್ಯದ ನಿರ್ವಹಣೆಯತ್ತ ತುಸು ಸಮಯವನ್ನು ಮೀಸಲಿಡುವುದು ತುಂಬಾ ಅಗತ್ಯ. ಇದರಿಂದಾಗಿ ನಾವು ಆರೋಗ್ಯದಿಂದಿರಲು ತುಂಬಾ ಸಹಕಾರಿಯಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಮಾತನಾಡಿ ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘವು ಈಗಾಗಲೇ ಒಟ್ಟು ೫೯ ಶಿಬಿರವನ್ನು ಆಯೋಜಿಸಿದ್ದು , ೬೦ನೇ ಶಿಬಿರವು ಇದಾಗಿದೆ ಎಂದರು. ಕೇವಲ ಶಿಬಿರವನ್ನು ಮಾತ್ರವಲ್ಲದೆ ಶಿಬಿರಾರ್ಥಿಗಳಿಗೆ ಕೂಡಾ ಅಗತ್ಯ ಸಂದರ್ಭದಲ್ಲಿ ವಿವಿಧ ಸೌಲಭ್ಯಗಳನ್ನು ನೀಡಿ ಈಗಾಗಲೇ ೨೨ ಸಾವಿರಕ್ಕೂ ಮಿಕ್ಕಿ ಜನರು ಶಿಬಿರದ ಪ್ರಯೋಜನೆ ಪಡೆಯುವುದರ ಜೊತೆಯಲ್ಲಿ ಕಣ್ಣಿನ ಪೊರೆಯ ಚಿಕಿತ್ಸೆಯನ್ನು ೪೩೫ಕ್ಕೂ ಹೆಚ್ಚು ಹಾಗೂ ಸುಮಾರು ೧೨ ಸಾವಿರಕ್ಕೂ ಮಿಕ್ಕಿ ಉಚಿತ ಕನ್ನಡಕವನ್ನು ನೀಡಲು ಹಲವಾರು ಸಂಘ ಸಂಸ್ಥೆಗಳು ಸಹಕಾರಿಯಾಗಿವೆ. ಸಂಘದ ಜೊತೆಗೆ ಕೈ ಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೂ ಶುಭ ಹಾರೈಕೆಗಳು. ಸ್ಥಳೀಯ ಸಂಘ ಸಂಸ್ಥೆಗಳು ಶಿಬಿರವನ್ನು ಏರ್ಪಡಿಸುವುದಿದ್ದರೆ ನಮ್ಮ ಸಂಘದ ಸಹಕಾರವು ಇದ್ದೇ ಇರುತ್ತದೆ. ಈ ಶಿಬಿರದ ಪ್ರಯೋಜನವು ಅಗತ್ಯವುಳ್ಳ ಪ್ರತೀಯೊಬ್ಬರಿಗೂ ಒದಗುವಂತಾಗಲಿ ಎಂದು ಶುಭ ಹಾರೈಸಿದರು.
.
ಕುದ್ರೋಳಿ ಯುವಕ ಸಂಘದ ಅಧ್ಯಕ್ಷರಾದ ಶ್ರೀಯುತ ಆಶೋಕ್ ರವರು ಮಾತಾನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಕಾರದೊಂದಿಗೆ ಈ ಶಿಬಿರವನ್ನು ಎರಡನೇ ಬಾರಿ ಆಯೋಜಿಸಿರುತ್ತೇವೆ ಹಾಗೆಯೇ ಮುಂದಿನ ಆರೋಗ್ಯ ಶಿಬಿರವನ್ನು ಬೃಹತ್ ಆರೋಗ್ಯ ಶಿಬಿರವನ್ನಾಗಿ ಏರ್ಪಡಿಸಲಿದ್ದು ಈ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ದೊರಕುವಂತಹ ಎಲ್ಲಾ ರೀತಿಯ ಸೇವೆಗಳನ್ನು ಪಡೆದುಕೊಳ್ಳುವಂತೆ ವಿನಂತಿಸಿದರು,
ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇಲ್ಲಿನ ಕಣ್ಣಿನ ತಜ್ಞರಾದ ಡಾ|| ಅವಿನಾಷ್ ಸುರೇಶ್ , ನಾಯಕ್ ಟ್ರೇಡರ್ಸ್ ನ ಮಾಲಕರಾದ ಶ್ರೀಯುತ ಗೋಪಾಲಕೃಷ್ಣ ನಾಯಕ್ , ಉದ್ಯಮಿಯಾದ ಶ್ರೀಯುತ ಪದ್ಮನಾಭ್ ಹಾಗೂ ಕುದ್ರೋಳಿ ಯುವಕ ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ಶಂಕರ ಬರ್ಕೆ , ಕೋಶಾಧಿಕಾರಿ ದಿನೇಶ್ ಅಂಚನ್ , ಮಹಿಳಾ ಸಮಿತಿ ಸಂಚಾಲಕಿಯರಾದ ಶ್ರೀಮತಿ ಭಾನುಮತಿ, ಶ್ರೀಮತಿ ಪ್ರೇಮ ಸಾಲ್ಯಾನ್ ಹಾಗೂ ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ ನಿ. ಇದರ ಉಪಾಧ್ಯಕ್ಷರಾದ ಶ್ರೀಯುತ ನೇಮಿರಾಜ್ ಪಿ. , ನಿರ್ದೇಶಕರುಗಳಾದ ಶ್ರೀಯುತ ರಮಾನಾಥ್ ಸನಿಲ್, ಶ್ರೀಯುತ ಬಿ.ಪಿ.ದಿವಾಕರ್, ಶ್ರೀಯುತ ಗೋಪಾಲ್ ಎಮ್. , ಮುಖ್ಯಕಾರ್ಯನಿರ್ವಹಣಾದಿಕಾರಿ ಶ್ರೀಮತಿ ಸೌಮ್ಯ ವಿಜಯ್, ಹಿರಿಯ ಶಾಖಾಧಿಕಾರಿಯವರಾದ ಶ್ರೀಮತಿ ರವಿಕಲಾ , ಶ್ರೀಮತಿ ಹರಿಣಾಕ್ಷಿ ಪ್ರಶಾಂತ್ ಹಾಗೂ ಕುದ್ರೋಳಿ ಯುವಕ ಸಂಘದ ಪದಾಧಿಕಾರಿಗಳು , ಮತ್ತಿತರರು ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಸುಮಾರು ೩೫೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಕಣ್ಣಿನ ತಪಾಸಣೆಯನ್ನು ಮಾಡಲಾಯಿತು.
ಕುದ್ರೋಳಿ ಯುವಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರವೀಂದ್ರ ಆರ್.ಆರ್. ರವರು ಸ್ವಾಗತಿಸಿ, ಕಾರ್ಯದರ್ಶಿಯಾದ ಶ್ರೀಯುತ ರಾಜೇಶ್ ಕುದ್ರೋಳಿಯವರು ವಂದಿಸಿದರು. ಕುದ್ರೋಳಿ ಯುವಕ ಸಂಘದ ಕಲಾ ಕಾರ್ಯದರ್ಶಿಯಾದ ಶ್ರೀಯುತ ಸುನೀಲ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.